ಹಿಂದೂ ಧರ್ಮದಲ್ಲಿ ಹಸುವಿಗೆ ಪವಿತ್ರ ಸ್ಥಾನವಿದೆ. ಗೋಮಾತೆ ಎಂಬ ಹೆಸರಿನಲ್ಲಿ ಹಸುವನ್ನು ಪೂಜಿಸಲಾಗುತ್ತದೆ. ಗೃಹ ಪ್ರವೇಶದ ಸಂದರ್ಭದಲ್ಲಿ ಮೊದಲು ಗೋಮಾತೆಯನ್ನೇ ಮನೆಗೆ ಪ್ರವೇಶಿಸಲಾಗುತ್ತದೆ. ಇದೇ ರೀತಿಯಲ್ಲಿ ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ ನಗರದ ಮೊದಲ ಸಾವಯವ ರೆಸ್ಟೋರೆಂಟ್ ಒಂದರ ಉದ್ಘಾಟನೆಯನ್ನು ಪವಿತ್ರ ಗೋಮಾತೆಯ ಕೈಯಿಂದ ಮಾಡಲಾಯಿತು. ಮತ್ತು ಆ ಹಸುವನ್ನೇ ಗೌರವಾನ್ವಿತ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಮಾಜಿ ಡೆಪ್ಯುಟಿ ಎಸ್ಪಿ ಶೈಲೇಂದ್ರ ಸಿಂಗ್ ಒಡೆತನದ ‘ಆರ್ಗ್ಯಾನಿಕ್ ಓಸಿಯನ್’ ಹೆಸರಿನ ರೆಸ್ಟೋರೆಂಟ್ ಇದಾಗಿದ್ದು, ಇದು ಸಾವಯುವ ಕೃಷಿ ಉತ್ಪನ್ನಗಳಿಂದ ತಯಾರಿಸಿದ ಆಹಾರವನ್ನು ಗ್ರಾಹಕರಿಗೆ ಒದಗಿಸುತ್ತದೆ.
ಎಎನ್ಐ ಯುಪಿ ಸುದ್ದಿ ಸಂಸ್ಥೆ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹಸು ಕೆಲವು ಜನರೊಂದಿಗೆ ಸೇರಿ ರೆಸ್ಟೋರೆಂಟ್ನ್ನು ಉದ್ಘಾಟಿಸುತ್ತಿರುವುದನ್ನು ಕಾಣಬಹುದು. ಹಸುವಿಗೆ ಹಳದಿ ವಸ್ತ್ರವೊಂದನ್ನು ಹೊದಿಸಿ ಅಲಂಕರಿಸಲಾಗಿತ್ತು. ಹಸುವಿನ ಸುತ್ತಲೂ ಕೆಲವು ಜನರು ನೆರೆದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಸಾವಯವ ರೆಸ್ಟೋರೆಂಟ್ ಲುಲು ಮಾಲ್ ಪಕ್ಕದಲ್ಲಿರುವ ಮಿಲೇನಿಯಮ್ನಲ್ಲಿರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿದೆ. ಮತ್ತು ಈ ರೆಸ್ಟೋರೆಂಟ್ನಲ್ಲಿ ಸಾವಯವ ಆಹಾರ ಉತ್ಪನ್ನಗಳನ್ನೇ ಗ್ರಾಹಕರಿಗೆ ಉಣಬಡಿಸಲಾಗುತ್ತದೆ.
#WATCH | Uttar Pradesh: A restaurant in Lucknow, ‘Organic Oasis’ that offers food made out of organic farming produce, was inaugurated by a cow. pic.twitter.com/YWcfKqJQcX
— ANI UP/Uttarakhand (@ANINewsUP) April 18, 2023
ಮಾಜಿ ಎಸ್ಪಿ ಮತ್ತು ಆರ್ಗ್ಯಾನಿಕ್ ಓಸಿಯನ್ ರೆಸ್ಟೋರೆಂಟ್ ಮ್ಯಾನೇಜರ್ ಶೈಲೇಂದ್ರ ಸಿಂಗ್ ಅವರು ಭಾರತದ ಆರ್ಥಿಕತೆ ಮತ್ತು ಕೃಷಿಯು ಹಸುಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಈ ರೆಸ್ಟೋರೆಂಟ್ ಉದ್ಘಾಟನೆಗೆ ಗೌರವಾನ್ವಿತ ಅತಿಥಿಯನ್ನಾಗಿ ಗೋ ಮಾತೆಯನ್ನು ಆಹ್ವಾನಿಸಿದ್ದು ಎಂದು ಹೇಳಿದರು.
ಇದನ್ನೂ ಓದಿ:Viral Video : ಮೇಕ್ಅಪ್ ಮಾಡುವಾಗ ಕೆನ್ನೆ ಬ್ಲಶ್ ಮಾಡಲು ಕಷ್ಟ ಪಡುತ್ತೀರಾ?
ಆರೋಗ್ಯಕರ ದೇಹವು ತಮ್ಮ ಮೊದಲ ಆದ್ಯತೆಯಾಗಬೇಕೆಂದು ಜನರು ಭಾವಿಸುತ್ತಾರೆ. ದುರದೃಷ್ಟವಶಾತ್, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಿದ ಆಹಾರ ಉತ್ಪನ್ನಗಳನ್ನು ಸೇವಿಸುತ್ತಿದ್ದೇವೆ. ಹಾಗಾಗಿ ಈ ಆರ್ಗ್ಯಾನಿಕ್ ರೆಸ್ಟೋರೆಂಟ್ ತನ್ನದೇ ಆದ ಸಾವಯವ ಉತ್ಪಾದನೆ, ನಿಯಂತ್ರಣ ಮತ್ತು ಸಂಸ್ಕರಣೆಗಳನ್ನು ಹೊಂದಿರುವ ಮೊದಲ ರೆಸ್ಟೋರೆಂಟ್ ಎಂದು ನಾನು ಭಾವಿಸುತ್ತೇನೆ. ಗ್ರಾಹಕರು ಆಹಾರವನ್ನು ಸೇವಿಸಿದ ನಂತರ, ಅವರು ಇಲ್ಲಿನ ಆಹಾರದ ವ್ಯತ್ಯಾಸ ಮತ್ತು ಬೇಡಿಕೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
Published On - 5:50 pm, Wed, 19 April 23