ಜರ್ಮನ್ ಕಾನ್ಸುಲೇಟ್​ ಕಚೇರಿಯೊಳಗೆ ಕ್ರಿಕೆಟ್ ಆಡುತ್ತಿರುವ ಅಧಿಕಾರಿಗಳ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Nov 24, 2022 | 11:34 AM

Cricket : ಜರ್ಮನ್​ ಅಧಿಕಾರಿಗಳು​ ಭಾರತೀಯ ಅಧಿಕಾರಿಗಳಿಂದ ಕ್ರಿಕೆಟ್ ಕಲಿಯುತ್ತಿದ್ಧಾರೆ. ನೆಟ್ಟಿಗರು, ಆಡಿ ಸರ್ ನೀವು ಬಿಡಬೇಡಿ ಎಂದು ಇವರ ಆಟದ ಬಗ್ಗೆ ವಿಮರ್ಶೆ ಮಾಡುತ್ತ ಹುರಿದುಂಬಿಸುತ್ತಿದ್ದಾರೆ.

ಜರ್ಮನ್ ಕಾನ್ಸುಲೇಟ್​ ಕಚೇರಿಯೊಳಗೆ ಕ್ರಿಕೆಟ್ ಆಡುತ್ತಿರುವ ಅಧಿಕಾರಿಗಳ ವಿಡಿಯೋ ವೈರಲ್
ಬೆಂಗಳೂರಿನ ಜರ್ಮನ್​ ಕಾನ್ಸುಲೇಟ್​ ಕಚೇರಿಯೊಳಗೆ ಕ್ರಿಕೆಟ್ ಆಟವಾಡುತ್ತಿರುವ ಅಧಿಕಾರಿಗಳು
Follow us on

Viral Video : ನಿಮಗಿಷ್ಟವಾದ ಆಟ ಯಾವುದು ಎಂದು ಕೇಳಿದರೆ ಬಹುತೇಕ ಭಾರತೀಯರು ಹೇಳುವುದು ಕ್ರಿಕೆಟ್​. ಎಂಥ ಸಂದರ್ಭದಲ್ಲಿಯೂ ಟೀವಿಯಲ್ಲಿ ಈ ಆಟವನ್ನು ವೀಕ್ಷಿಸದೇ ಇರರು. ಹಾಗೆಯೇ ಸಮಯ ಸಿಕ್ಕರೆ ಗಲ್ಲಿಯಲ್ಲಿ ಆಟವಾಡದೇ ಬಿಡರು. ಇದೀಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜರ್ಮನ್​ ಕಾನ್ಸುಲೇಟ್​ ಅಧಿಕಾರಿಯೊಬ್ಬರು;​ ‘ಊಟದ ಬಿಡುವಿನಲ್ಲಿ ನನ್ನ ಭಾರತೀಯ ಸಹೋದ್ಯೋಗಿಗಳು, ಜರ್ಮನ್​ ಸಹೋದ್ಯೋಗಿಗಳಿಗೆ ಕ್ರಿಕೆಟ್ ಆಡುವುದು ಹೇಗೆ ಎಂದು ಕಲಿಸಲು ಯತ್ನಿಸುತ್ತಿದ್ದಾರೆ. ಕಾನ್ಸುಲೇಟ್​ ಅದರ ಪಾಡಿಗೆ ಇನ್ನೂ ಇದೆ’ ಎಂದು ತಮಾಷೆಯ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಬೆಂಗಳೂರಿನ ಕೇರಳ ಮತ್ತು ಕರ್ನಾಟಕದ ಜರ್ಮನ್​ ಕಾನ್ಸುಲೇಟ್ ಅಚಿಮ್​ ಬುರ್ಕಾರ್ಟ್ ತಮ್ಮ ಭಾರತೀಯ ಸಹೋದ್ಯೋಗಳೊಂದಿಗೆ ಕಚೇರಿಯೊಳಗೆ ಕ್ರಿಕೆಟ್​ ಆಟವಾಡಿದ್ದಾರೆ. ಅಚಿಮ್​ ಈ ಆಟವನ್ನು ಉತ್ಸಾಹ ಮತ್ತು ಆನಂದದಿಂದ ಆಡಿದ್ದನ್ನು ಗಮನಿಸಬಹುದಾಗಿದೆ. 32,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ರೀಟ್ವೀಟ್ ಮಾಡಿದ್ದಾರೆ.

ಜರ್ಮನಿಯಲ್ಲಿಯೂ ಕ್ರಿಕೆಟ್​ ಅನ್ನು ಶುರುಮಾಡುವುದು ಒಳ್ಳೆಯದು ಎನ್ನಿಸುತ್ತೆ ಎಂದಿದ್ದಾರೆ ಒಬ್ಬರು. ನೋಡಲು ಇದು ಬಹಳ ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಹೌದು ಇದು ಅದ್ಭುತವಾಗಿದೆ ಇಂಥ ಅಭ್ಯಾಸಗಳು ಇರಲಿ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸಿತು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ