Viral Video : ಮೊಸಳೆಗಳು ಮೂಲತಃ ಮಾಂಸಾಹಾರಿಗಳು. ಮೀನು, ಪಕ್ಷಿ, ಕಪ್ಪೆಗಳನ್ನು ತಿಂದುಕೊಂಡು ಜೀವಿಸುತ್ತವೆ. ಏನೂ ಸಿಗದೇ ಇದ್ದಾಗ ಅಥವಾ ಬೇಟೆಯ ಮೂಡಿನಲ್ಲಿದ್ದರೆ ಅವರು ಹೇಗೆ ವರ್ತಿಸಬಹುದು ಎಂದು ಊಹಿಸುವುದು ಅಸಾಧ್ಯ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಮೊಸಳೆಗಳ ಹಸಿವಿನ ಭೀಕರತೆ ನಿಮಗರ್ಥವಾಗುತ್ತದೆ. ನದಿದಂಡೆಯ ಮೇಲೆ ಮರಿಮೊಸಳೆಯೊಂದಿಗೆ ಕಾದಾಟಕ್ಕಿಳಿದಿದೆ ಈ ಹಿರಿಮೊಸಳೆ. ನಂತರ ಏನಾಗುತ್ತದೆ ನೋಡಿ.
ಹೌದು, ಮೊಸಳೆಯ ಮರಿಯನ್ನೇ ಈ ಮೊಸಳೆ ತಿಂದಿದೆ. ಹಸಿವಾದಾಗ ಹೀಗೆ ಸುಲಭವಾಗಿ ಸಿಗುವ ಮರಿಗಳನ್ನೇ ಮೊಸಳೆಗಳು ತಿನ್ನುವುದುಂಟು. ಈ ದೃಶ್ಯವನ್ನು ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ. ಮಾರ್ಸ್ ಜಾಕೋಬ್ಸ್ ಮತ್ತು ಸ್ಟೀಫನ್ ಕಾಂಗಿಸ್ಸರ್ ಎನ್ನುವವರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈತನಕ 26.5 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ.
ಭಯದಿಂದ ತಪ್ಪಿಸಿಕೊಳ್ಳಲು ನೋಡುತ್ತದೆ ಮರಿಮೊಸಳೆ. ಆದರೆ ದೊಡ್ಡಮೊಸಳೆ ಶಪಥ ಮಾಡಿದಂತೆ ಅದನ್ನು ಬೆನ್ನುಬೀಳುತ್ತದೆ. ತನ್ನ ಬಲವಾದ ಹಲ್ಲುಗಳಿಂದ ಅದನ್ನು ಕಚ್ಚಲು ನೋಡುತ್ತ ಕೊನೆಗೆ ಅರ್ಧದೇಹವನ್ನೇ ಬಾಯೊಳಗೆ ಎಳೆದುಕೊಂಡುಬಿಡುತ್ತದೆ.
ನೆಟ್ಟಿಗರು ಈ ದೃಶ್ಯ ನೋಡಿ ಕೋಪಗೊಂಡಿದ್ದಾರೆ. ಎಂಥ ಹೃದಯವಿದ್ರಾವಕ ದೃಶ್ಯವಿದು ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.
ಈ ದೃಶ್ಯ ನೋಡಿದ ನಿಮಗೂ ಅಷ್ಟೇ ಬೇಸರವಾಗಿರಬೇಕಲ್ಲ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ