Viral Video: ಮೊಸಳೆ ಕಾಲುಸೂಪ್​; ಜನರನ್ನು ಬೆಚ್ಚಿಬೀಳಿಸುತ್ತಿದೆ ಈ ‘ಗಾಡ್ಝಿಲ್ಲಾ ರಾಮೆನ್​’

|

Updated on: Jun 29, 2023 | 12:21 PM

Taiwan : ಇದು ಪ್ರೀ ಆರ್ಡರ್​ ಮಾಡಿದಲ್ಲಿ ಮಾತ್ರ ಲಭ್ಯ. ಒಂದು ಬೌಲ್​ನ ಬೆಲೆ ಕೇವಲ ರೂ. 4000. ಈ ಸೂಪ್​ ತಯಾರಿಕೆಗೆ ಬರೀ ನಲವತ್ತೇ ಮಸಾಲೆ ಪದಾರ್ಥಗಳನ್ನು ಸೇರಿಸಲಾಗಿದೆ. ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Viral Video: ಮೊಸಳೆ ಕಾಲುಸೂಪ್​; ಜನರನ್ನು ಬೆಚ್ಚಿಬೀಳಿಸುತ್ತಿದೆ ಈ ಗಾಡ್ಝಿಲ್ಲಾ ರಾಮೆನ್​
ಮೊಸಳೆ ಕಾಲುಸೂಪ್​
Follow us on

Soup : ಸಂಜೆಯಾಗುತ್ತಿದ್ದಂತೆ ಈಗಂತೂ ಥಂಡಿಗಾಳಿ. ಬಿಸಿಬಿಸಿಯದ್ದೇನಾದರೂ ಕುಡಿಯಬೇಕು ಎನ್ನಿಸುತ್ತದೆ. ವೆಜ್​ ಕ್ಲಿಯರ್​ ಸೂಪ್​, ಟೊಮ್ಯಾಟೋ ಸೂಪ್​, ಕಾರ್ನ್ ಸೂಪ್​, ಚಿಕನ್​ ಸೂಪ್​, ಕಾಲ್​ಸೂಪ್​ ಹೀಗೆ ಥರಾವರಿ ಸೂಪುಗಳ ನೆನಪಾಗುತ್ತದೆ. ಯಾರಿಗೆ ಏನು ಬೇಕೋ ಅದನ್ನ ಮಾಡಿಕೊಂಡಾದರೂ ತಿನ್ನುತ್ತಾರೆ ಇಲ್ಲಾ ತರಿಸಿಕೊಂಡಾದರೂ. ಒಟ್ಟಿನಲ್ಲಿ ಗಂಟಲಿಗೆ ಬಿಸಿಬಿಸಿಯದ್ದೇನಾದರೂ ಇಳಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ತೈವಾನಿನ (Taiwan) ಹೋಟೆಲ್ ಒಂದರಲ್ಲಿ ಈ ‘ಗಾಡ್ಝಿಲ್ಲಾ ರಾಮೆನ್’ (Godzilla Ramen)​ ಅಂದರೆ ಮೊಸಳೆ ಕಾಲುಸೂಪ್​  ಸವಿಯುತ್ತಿದ್ದಾಳೆ ಈ ಯುವತಿ. ಅಯ್ಯಪ್ಪಾ! ಎಂದು ಹೌಹಾರುತ್ತಿದ್ದಾರೆ ನೆಟ್ಟಿಗರು.

 

 

ಇದು ಪ್ರೀ ಆರ್ಡರ್​ ಮಾಡಿದಲ್ಲಿ ಮಾತ್ರ ಲಭ್ಯ. ಒಂದು ಬೌಲ್​ನ ಬೆಲೆ ಕೇವಲ ರೂ. 4000! ತೈವಾನಿನ ನು ವು ಮಾವೋ ಕುಯೀ (Nu Wu Mao Kuei) ಹೋಟೆಲ್ ಈ ಹೊಸ ಖಾದ್ಯವನ್ನು ಪ್ರಚುರಪಡಿಸಲೆಂದು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ಅಪ್​ಲೋಡ್ ಮಾಡುತ್ತಿದೆ. ವಿಡಿಯೋದಲ್ಲಿರುವ ಯುವತಿ ಸೂಪ್​ ಅನ್ನು ಆನಂದಿಸುತ್ತಿದ್ದಾಳೆ. ಟೈಟುಂಗ್​ನಲ್ಲಿರುವ ಫಾರ್ಮ್​ ಒಂದರಿಂದ ಈ ಮೊಸಳೆಯನ್ನು ಖರೀದಿಸಲಾಗಿದೆ. ಮೊಸಳೆ ಕಾಲುಸೂಪ್​ ಇಷ್ಟಪಡದವರಿಗೆ ಬಿದಿರಿನ ಮೊಳಕೆ, ಮೊಟ್ಟೆ ಭಕ್ಷ್ಯ, ಬೇಬಿ ಕಾರ್ನ್​ಮತ್ತು ಬಗೆಬಗೆಯ ರಾಮನ್​ ಸೂಪ್​ಗಳು ಲಭ್ಯ ಎಂದೂ ಹೋಟೆಲ್​ ತಿಳಿಸಿದೆ.

ಇದನ್ನೂ ಓದಿ : Viral Video: ನೈಟ್​ಕ್ಲಬ್​ನಲ್ಲಿ ಮರಿಕೋತಿಗೆ ಹಿಂಸೆ; ಕ್ಲಬ್​ ವಿರುದ್ದ ಪ್ರಕರಣ ದಾಖಲು 

ಈ ಎಲ್ಲ ಖಾದ್ಯಗಳ ಪೈಕಿ ಸದ್ಯ ಮೊಸಳೆ ಕಾಲುಸೂಪ್​ ವಿಶೇಷ ಆಕರ್ಷಣೆಯಾಗಿದೆ. ಈ ಖಾದ್ಯ ತಯಾರಿಸಲು 40 ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇರಿಸಲಾಗಿದೆ. ಅನೇಕರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಇದು ನನ್ನ ನೆಚ್ಚಿನ ಖಾದ್ಯ ಎಂದು ಹಲವಾರು ಜನ ಹೇಳಿದ್ದಾರೆ. ಅಬ್ಬಾ! ನಾನೀಗಷ್ಟೇ ಊಟ ಮಾಡಿದೆ, ಮೊದಲೇ ಗೊತ್ತಾಗಿದ್ದರೆ… ಎಂದಿದ್ದಾರೆ ಒಬ್ಬರು. ಜನ್ಮದಲ್ಲಿ ಇದನ್ನು ನಾನು ತಿನ್ನಲು ಸಾಧ್ಯವೇ ಇಲ್ಲ ಎಂದಿದ್ದಾರೆ ಕೆಲವರು. ಅಯ್ಯೋ ದೇವರೇ, ಇನ್ನು ಮೊಸಳೆಗಳಿಗೆ ಉಳಿಗಾಲ ಇಲ್ಲ! ಎಂದು ಬೇಸರಿಸಿದ್ಧಾರೆ ಒಂದಿಷ್ಟು ಜನ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:21 pm, Thu, 29 June 23