52 ಕೋಟಿ ಕೊಟ್ಟು ಹರಾಜಿನಲ್ಲಿ ಖರೀದಿಸಿದ್ದ ಬಾಳೆಹಣ್ಣನ್ನು ಒಂದೇ ಕ್ಷಣದಲ್ಲಿ ತಿಂದು ಮುಗಿಸಿದ ವ್ಯಕ್ತಿ
ನ್ಯೂಯಾರ್ಕ್‌ನಲ್ಲಿ 52 ಕೋಟಿ ರೂಪಾಯಿಗೆ ಹರಾಜಾದ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣಿನ ಕಲಾಕೃತಿಯನ್ನು ಕ್ರಿಪ್ಟೋ ಉದ್ಯಮಿ ಜಸ್ಟಿನ್ ಸನ್ ಖರೀದಿಸಿ ತಿಂದು ಮುಗಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ವಿಡಿಯೋ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿಗಷ್ಟೇ ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣೊಂದು ಬರೋಬ್ಬರೀ 52 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿ ಭಾರಿ ಸದ್ದು ಮಾಡಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಸುಮಾರು 6.2 ಮಿಲಿಯನ್ ಡಾಲರ್ ಅಂದರೆ ಭಾರತದ ಕರೆನ್ಸಿ ಪ್ರಕಾರ 52,45,89,440 ಕೋಟಿ ಕೊಟ್ಟು ಖರೀದಿಸಿದ್ದರು. ಇದೀಗ ಜಸ್ಟಿನ್ ಈ ಬಾಳೆ ಹಣ್ಣನ್ನು ಒಂದೇ ಕ್ಷಣದಲ್ಲಿ ತಿಂದು ಮುಗಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಒಂದು ಬಾಳೆ ಹಣ್ಣಿಗೆ 52 ಕೋಟಿ ರೂ. ಕೊಟ್ಟು ಖರೀದಿಸುವ ಅವಶ್ಯಕತೆ ಏನಿದೆ ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ಕಲಾವಿದರ ಹೆಸರು ಕೇಳಿದಾಕ್ಷಣ ಅವರ ಕಲಾಕೃತಿಗಳು ಕಂಡಿಯರದ ರೀತಿಯಲ್ಲಿ ಹಜಾರಿನಲ್ಲಿ ಮಾರಾಟವಾಗುತ್ತದೆ. ಈ ಸಮಯದಲ್ಲಿ ದುಡ್ಡಿಗಿಂತ ಆ ಕಲಾಕೃತಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಹಠ ಅವರಲ್ಲಿ ಇರುತ್ತವೆ. ಅದೇ ರೀತಿ ಇದೀಗ ಈ ಬಾಳೆ ಹಣ್ಣು ಹರಾಜಾಗಿದೆ. ಇದು ಕೇವಲ ಒಂದು ಬಾಳೆಹಣ್ಣನ್ನು ಟೇಪ್ ಹಚ್ಚಿ ಗೋಡೆ ಮೇಲೆ ಇಡಲಾಗಿದೆ ಅಷ್ಟೇ. ಆದರೂ ಹರಾಜಿನಲ್ಲಿ ಮಾರಾಟವಾಗಲು ಕಾರಣ ಇದು ಇಟಲಿಯ ಖ್ಯಾತ ಕಲಾವಿದ(Visual artist) ಮೌರಿಜೀಯೋ ಕ್ಯಾಟೆಲನ್ (Maurizio Cattelan) ಎಂಬಾತನ ಕಲಾಕೃತಿ. ಇಲ್ಲಿಯವರೆಗೆ ಇತನ ಹಲವು ವಿಚಿತ್ರ ಎನಿಸುವ ಕಲಾಕೃತಿಗಳು ಭಾರಿ ಮೊತ್ತದಲ್ಲಿ ಹರಾಜಾಗಿವೆ.
ಇದನ್ನೂ ಓದಿ: ದೇವರ ವಿಗ್ರಹದ ಬಾಯಿಗೆ ಸಿಗರೇಟ್ ಇಟ್ಟು ವಿಡಿಯೋ ಮಾಡಿದ ಯುವಕ; ವಿಡಿಯೋ ವೈರಲ್
ಇದೀಗ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ 52 ಕೋಟಿ ಕೊಟ್ಟು ಹರಾಜಿನಲ್ಲಿ ಖರೀದಿಸಿದ್ದ ಬಾಳೆಹಣ್ಣನ್ನು ತಿನ್ನುತ್ತಿರುವ ವಿಡಿಯೋವನ್ನು @justinsuntron ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನವೆಂಬರ್ 29ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 2ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ