Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ

ಕೆಲವೊಮ್ಮೆ ಆಘಾತಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇಂತಹದ್ದೇ ಒಂದು ಸ್ಟಂಟ್ ವಿಡಿಯೋ ಸದ್ಯ ಹರಿದಾಡುತ್ತಿದ್ದು, ಬೈಕ್​ನ ಮೇಲೆ ಕುಳಿತು ಬೆಟ್ಟದಿಂದ ಜಿಗಿದ ವಿಡಿಯೋ ವೈರಲ್ ಆಗಿದೆ.

Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ
ಗಾಳಿಯಲ್ಲಿ ತೆಲುತ್ತಿರುವ ಬೈಕ್​
Edited By:

Updated on: Dec 11, 2021 | 9:55 AM

ಇತ್ತೀಚೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್​ ವೈರಲ್ ವಿಡಿಯೋಗಳ ಗಣಿಯಾಗಿ ಬದಲಾಗುತ್ತಿದೆ. ಇಲ್ಲಿ ಒಂದಕ್ಕಿಂತ ಒಂದು ತಮಾಷೆಯ ವಿಡಿಯೋಗಳು ವೈರಲ್ (Video viral) ಆಗುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವು ಆಶ್ಚರ್ಯವನ್ನುಂಟು ಮಾಡಿದರೆ ಮತ್ತು ಕೆಲವು ಕಣ್ಣಲ್ಲಿ ನೀರು ತರಿಸುತ್ತವೆ. ಆದಾಗ್ಯೂ, ಸಾಮಾಜಿಕ ಜಾಲತಾಣಗಳಲ್ಲಿ(Social media) ಹೆಚ್ಚಿನ ಜನರು ತಮಾಷೆಯ ವಿಡಿಯೋಗಳನ್ನು ಇಷ್ಟಪಡುತ್ತಾರೆ. ಇನ್ನು ಕೆಲವೊಮ್ಮೆ ಆಘಾತಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇಂತಹದ್ದೇ ಒಂದು ಸ್ಟಂಟ್ ವಿಡಿಯೋ ಸದ್ಯ ಹರಿದಾಡುತ್ತಿದ್ದು, ಬೈಕ್​ನ ಮೇಲೆ ಕುಳಿತು ಬೆಟ್ಟದಿಂದ ಜಿಗಿದ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎತ್ತರದ ಗುಡ್ಡವಿದ್ದು, ಅದರ ಕೆಳಗೆ ಆಳವಾದ ಕಂದಕ ಇರುವುದನ್ನು ಕಾಣಬಹುದು. ಈ ದೃಶ್ಯ ನೋಡಲು ತುಂಬಾ ಅಪಾಯಕಾರಿಯಾಗಿ ಕಾಣುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯೊರ್ವ ಬೈಕ್‌ನಿಂದ ಜಾರುವ ರಸ್ತೆಯಂತೆ ಮಾಡಿದ ಕಲ್ಲಿನ ಕೆಳಗೆ ಜಿಗಿದಿದ್ದಾನೆ. ಬೈಕ್​ ತುಂಬಾ ವೇಗವಾಗಿರುವುದರಿಂದ ಬೈಕ್ ಜೊತೆಗೆ ವ್ಯಕ್ತಿಯು ಮೊದಲು ಗಾಳಿಯಲ್ಲಿ ಮೇಲಕ್ಕೆ ಹೋಗುತ್ತಾನೆ ಮತ್ತು ನಂತರ ಕೆಳಗೆ ಬೀಳಲು ಪ್ರಾರಂಭಿಸುತ್ತಾನೆ. ಇನ್ನೇನು ಬೀಖಬೇಕು ಎನ್ನುವಾಗ ಬೆಟ್ಟದಿಂದ ಸ್ವಲ್ಪ ಕೆಳಗೆ ಬಂದ ತಕ್ಷಣ ಪ್ಯಾರಾಚೂಟ್ ತೆರೆದು ಗಾಳಿಯಲ್ಲಿ ನೇತಾಡುತ್ತಾನೆ.

ಇದು ಅತ್ಯಂತ ಅಪಾಯಕಾರಿ ಸಾಹಸವಾಗಿದ್ದು, ಒಂದು ವೇಳೆ ಪ್ಯಾರಾಚೂಟ್ ತೆರೆಯುವಲ್ಲಿ ಸ್ವಲ್ಪವಾದರೂ ತಪ್ಪಿದ್ದರೆ ಆ ವ್ಯಕ್ತಿಯ ಪ್ರಾಣಕ್ಕೆ ಅಪಾಯವಾಗಬಹುದಿತ್ತು. ಆದರೆ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವ ವೃತ್ತಿಪರರು ಇದ್ದಾರೆ. ಅದನ್ನು ಮಾಡುವ ಮೊದಲು ಸಾಕಷ್ಟು ತರಬೇತಿ ಪಡೆದಿರುತ್ತಾರೆ. ವೃತ್ತಿಪರರಲ್ಲದವರು ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಏಕೆಂದರೆ ಇದರಿಂದ ಪ್ರಾಣಕ್ಕೆ ಅಪಾಯವಿದೆ.

ಈ ಅಪಾಯಕಾರಿ ಸ್ಟಂಟ್ ವೀಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 14 ಮಿಲಿಯನ್ ವ್ಯೂವ್ಸ್​ ಪಡೆದಿದೆ. 8 ಲಕ್ಷ 50 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ:
Child Marriage: ರಾಜಸ್ಥಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಬಾಲ್ಯವಿವಾಹ; ಮಕ್ಕಳ ಮದುವೆಯ ಶಾಕಿಂಗ್ ವಿಡಿಯೋ ವೈರಲ್

Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​

Published On - 9:34 am, Sat, 11 December 21