ಪಾರ್ಲೆ-ಜಿ (Parle-G) ಬಿಸ್ಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಈ ಬಿಸ್ಕೆಟ್ 90 ರ ದಶಕದ ಮಕ್ಕಳ ಫೇವರೇಟ್ ಅಂತಾನೇ ಹೇಳಬಹುದು. ಇಂದಿಗೂ ಕೂಡಾ ಹಚ್ಚಿನವರು ಮಾರುಕಟ್ಟೆಗಳಲ್ಲಿ ತರಹೇವಾರಿ ಬಿಸ್ಕೆಟ್ ಗಳಿದ್ದರೂ, ಪಾರ್ಲೆ-ಜಿ ಬಿಸ್ಕೆಟ್ ಅನ್ನೇ ಖರೀದಿ ಮಾಡುತ್ತಾರೆ. ಕೆಲವರಿಗಂತೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಾಫಿ ಟೀ ಜೊತೆಗೆ ಪಾರ್ಲೆ-ಜಿ ಬಿಸ್ಕೆಟ್ ಇರಲೇಬೇಕು. ಈಗ ನಮ್ಮೆಲ್ಲರ ನೆಚ್ಚಿನ ಪಾರ್ಲೆ-ಜಿ ಚಾಕೊಲೇಟ್ ಫ್ಲೇವರ್ ಗಳಲ್ಲಿಯೂ ಲಭ್ಯವಿದೆಯಂತೆ. ಪಾರ್ಲೆ-ಜಿ ಯ ಈ ಹೊಸ ಆವೃತ್ತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಚಿತ್ರ ನಿಜವೋ ಅಥವಾ ಫೋಟೋಶಾಪ್ ನಿಂದ ಮಾಡಲ್ಪಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ “ಡೆಲಿಸಿಯಸ್ ಚಾಕೊಲೇಟಿ ಡಾರ್ಕ್ ಚಾಕೊಲೇಟ್ ಬಿಸ್ಕೆಟ್” ಎಂದು ಬರೆದಿರುವ ಚಾಕೊಲೇಟ್ ಫ್ಲೇವರ್ ನ ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟಣವನ್ನು ಕಾಣಬಹುದು. ಆದರೆ ಪಾರ್ಲೆ-ಜಿ ಯ ಅಧೀಕೃಯ ವೆಬ್ ಸೈಟ್ ಅಲ್ಲಿ ಈ ಡಾರ್ಕ್ ಪಾರ್ಲೆ-ಜಿ ಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟಣದ ಫೋಟೋವನ್ನು ರಮೆನ್ (@CoconutShawarma) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 3 ಅಡಿ ಎತ್ತರದ ಗಣೇಶ್ ಬಾರಯ್ಯ ವಿಶ್ವದ ಅತ್ಯಂತ ಕುಳ್ಳಗಿನ ಡಾಕ್ಟರ್
Whats Dark Parle-G now 😭😭 pic.twitter.com/y8pLWk6O9f
— Ramen (@CoconutShawarma) March 5, 2024
ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 12 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆನ್ಲೈನ್ ಅಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದು ಸುಳ್ಳು ಸುದ್ದಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಬಗ್ಗೆ ಗೂಗಲ್ ನಲ್ಲಿಯೂ ಯಾವುದೇ ಮಾಹಿತಿ ಇಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಡಾರ್ಕ್ ಪಾರ್ಲೆ-ಜಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ನಿಜ ಎಂದು ಹೇಳಿದರೆ, ಇನ್ನೂ ಕೆಲವರು ಇದು ಸುಳ್ಳು ಸುದ್ದಿ, ಇದು ಕೇವಲ AI ರಚಿತ ಫೋಟೋ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ