Video: ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು

ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ಪ್ರಪಂಚ. ಈ ವಿಡಿಯೋ ನೋಡಿದ ಮೇಲೆ ನಿಮಗೂ ಕೂಡ ಹಾಗೆಯೇ ಅನಿಸದೇ ಇರದು. ಇಬ್ಬರು ಹೆಣ್ಣುಮಕ್ಕಳು ಚೌಧರಿ ಹಾಡಿಗೆ ನೃತ್ಯ ಮಾಡುತ್ತಾ ತಮ್ಮ ಮುದ್ದಿನ ತಂದೆಯನ್ನು ಮನೆಯೊಳಗೆ ಸ್ವಾಗತಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

Video: ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು
ಮುದ್ದಿನ ಹೆಣ್ಣುಮಕ್ಕಳ ಜತೆ ಅಪ್ಪನ ಭರ್ಜರಿ ಡ್ಯಾನ್ಸ್
Image Credit source: Instagram

Updated on: Sep 29, 2025 | 10:42 AM

ಪ್ರತಿಯೊಬ್ಬ ತಂದೆಗೂ (Father) ಮಗಳೆಂದರೆ ಜೀವ, ಹೀಗಾಗಿ ಮಗಳ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಏಕೈಕ ಜೀವ ಅಂದ್ರೆ ಅದುವೇ ಅಪ್ಪ. ಹೆಣ್ಣು ಮಕ್ಕಳು ಕೂಡ ತಾಯಿಗಿಂತ ತಂದೆಯನ್ನೇ ಬಳಿ ಹೆಚ್ಚು ಸಲಿಗೆ ಬೆಳೆಸಿಕೊಂಡಿರುತ್ತಾರೆ. ಇದೀಗ ತಂದೆಯೂ ಮನೆಯೊಳಗೆ ಕಾಲಿಡುತ್ತಿದ್ದಂತೆ ಇಬ್ಬರೂ ಹೆಣ್ಣು ಮಕ್ಕಳು (daughters) ಚೌಧರಿ ಹಾಡಿಗೆ ಡ್ಯಾನ್ಸ್ ಮಾಡಿ ಅಪ್ಪನನ್ನು ಸ್ವಾಗತಿಸುವ ಮನಮೋಹಕ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಬ್ಬರೂ ಮುತ್ತಿನಂಥ ಹೆಣ್ಣು ಮಕ್ಕಳನ್ನು ಪಡೆದ ನೀವೇ ಅದೃಷ್ಟವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಬ್ಬರೂ ಹೆಣ್ಣುಮಕ್ಕಳ ಜತೆ ಅಪ್ಪನ ಭರ್ಜರಿ ಡ್ಯಾನ್ಸ್

ಟಕರು ಗ್ಯಾಂಗ್ (takarugang) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಚೌಧರಿ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಮನೆಯೊಳಗೆ ತಂದೆಯನ್ನು ಸ್ವಾಗತಿಸುವ ಮುದ್ದಿನ ಹೆಣ್ಣು ಮಕ್ಕಳ ವಿಡಿಯೋ ಇದಾಗಿದೆ. ಒಬ್ಬ ಮಗಳು ಬಾಗಿಲು ತೆರೆದು ಡ್ಯಾನ್ಸ್ ಶುರು ಮಾಡಿದ್ದಾಳೆ. ಈಕೆಗೆ ಮತ್ತೊಬ್ಬಳು ಸಾಥ್ ನೀಡಿರುವುದನ್ನು ಕಾಣಬಹುದು. ತಮ್ಮ ಮುದ್ದಿನ ಮಕ್ಕಳ ಡ್ಯಾನ್ಸ್ ನೋಡಿ ತಂದೆಯೂ ಅವರೊಂದಿಗೆ ಸ್ಟೆಪ್ ಹಾಕಲು ಶುರು ಮಾಡಿದ್ದಾರೆ. ಹೀಗಿರುವಾಗ ಮಗಳು ತಂದೆಯ ಕೈಯಲ್ಲಿದ್ದ ಹಾಗೂ ಬೆನ್ನಲ್ಲಿದ್ದ ಬ್ಯಾಗ್ ತೆಗೆದು ಸೋಫಾದ ಮೇಲೆ ಇಟ್ಟಿದ್ದಾಳೆ. ಆ ಬಳಿಕ ಮೂವರು ಜೊತೆಯಾಗಿ ಖುಷಿಯಿಂದಲೇ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ
ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಮಗನ ಸಂಭ್ರಮ ಹೇಗಿತ್ತು ನೋಡಿ
ಎದೆಯ ಮೇಲೆ ಮಲಗಿರುವ ಪುಟ್ಟ ಪ್ರಪಂಚ, ಜೀವನ ನಿರ್ವಹಣೆಗಾಗಿ ಈ ಆಟೋ
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ
ಅಪ್ಪನಿಗಿದ್ದ ಓದುವ ಹವ್ಯಾಸವೇ ಈ ಪುಟಾಣಿಯೂ ಜ್ಯೂಸ್‌ ಶಾಪ್‌ ತೆರೆಯಲು ಕಾರಣ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಮಡಿಲಿನಲ್ಲಿ ಕಂದಮ್ಮನನ್ನು ಮಲಗಿಸಿಕೊಂಡು ಆಟೋ ಓಡಿಸಿ ಜೀವನ ಸಾಗಿಸುವ ಬೆಂಗಳೂರಿನ ಆಟೋ ಡ್ರೈವರ್

ಈ ವಿಡಿಯೋ 3.8 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನನ್ನ ಕಣ್ಣು ಒದ್ದೆಯಾಯ್ತು. ನೀವಿಬ್ಬರೂ ನಿಜಕ್ಕೂ ಅದೃಷ್ಟವಂತರು ಎಂದಿದ್ದಾರೆ. ಮತ್ತೊಬ್ಬರು ಇಬ್ಬರೂ ಹೆಣ್ಣು ಮಕ್ಕಳ ಮುದ್ದಿನ ಅಪ್ಪ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಇಂತಹ ಅದ್ಭುತ ಸಂಬಂಧವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ