ಮೂಕ ಪ್ರಾಣಿಗಳು ಗೊತ್ತೋ ಗೊತ್ತಿಲ್ಲದೆ ಕೆಲವೊಮ್ಮೆ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ಸದ್ಯ ಇಂತಹದೊಂದು ಘಟನೆ ಅಮೆರಿಕದ ಮಿನ್ನೇಸೋಟದಲ್ಲಿ ಕಂಡುಬಂದಿದೆ. ಹಿಮಾವೃತ ಸರೋವರವೊಂದರಲ್ಲಿ ಜಿಂಕೆ (Deer) ಸಿಲುಕಿಗೊಂಡಿದೆ. ಚಳಿ ಇರುವುದರಿಂದ ಮಿನ್ನೇಸೋಟದ ಪೈಕ್ ಸರೋವರ ಸಂಪೂರ್ಣ ಮಂಜುಗಡ್ಡೆ ಆಗಿದೆ. ಹಾಗಾಗಿ ಜಿಂಕೆ ಸರೋವರದಿಂದ ಹೊರಬರಲಾರದೇ ಕಷ್ಟಪಟ್ಟಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಜಿಂಕೆಯ ಜೀವ ಉಳಿಸಿದ್ದಾರೆ.
ಸದ್ಯ ಈ ರಕ್ಷಣಾ ಕಾರ್ಯಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Viral Video: ಸ್ಮೈಲ್ ಪ್ಲೀಸ್, ಒನ್ ಸೆಲ್ಫಿ : ಸೆಲ್ಫಿಗೆ ಸಖತ್ ಪೋಸ್ ಕೊಟ್ಟ ಶ್ವಾನ
ಪೈಕ್ ಸರೋವರದಲ್ಲಿ ಜಿಂಕೆ ಸಿಲುಕಿಕೊಂಡಿರುವ ವಿಷಯವನ್ನು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಸಂಪೂರ್ಣ ಮಂಜುಗಡ್ಡೆಯಾಗಿದ್ದ ಸರೋವರದಿಂದ ಹೊರಬರಲಾರದೇ ಜಿಂಕೆ ಹೆಣಗಾಡುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ತಮ್ಮ ರಕ್ಷಣಾತ್ಮಕ ಸಾಧನಗಳನ್ನು ಬಳಸಿ ಮತ್ತು ಎಚ್ಚರಿಕೆಯಿಂದ ಮಂಜುಗಡ್ಡೆ ಮೇಲೆ ತೆವಳುತ್ತ ಸಾಗಿ ಸಿಲುಕಿಕೊಂಡಿದ್ದ ಜಿಂಕೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೀಡಿಯೊವನ್ನು ನವೆಂಬರ್ 27 ರಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದುವರೆಗೂ 31 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮತ್ತು 100 ಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ಅನೇಕ ಜನರು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ