
ಈಗಿನ ಕಾಲದಲ್ಲಿ ಗಂಡ ಹೆಂಡತಿ (husband and wife) ಸಂಬಂಧವು ಅರ್ಥ ಕಳೆದುಕೊಳ್ಳುತ್ತಿದೆ. ಹೀಗಾಗಿ ಸಣ್ಣ ಪುಟ್ಟ ವಿಷ್ಯಕ್ಕೆ ಜಗಳವಾಡಿ ದೂರಾಗುವ ದಂಪತಿಗಳ ನಡುವೆ ಹಿರಿ ಜೀವಗಳ ನಡುವಿನ ಶುದ್ಧ ಪ್ರೀತಿ ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ವಯಸ್ಸು ಏರಿದಾಗಲೂ ವೃದ್ಧ ದಂಪತಿಯ ನಡುವಿನ ಪ್ರೀತಿ ಕಾಳಜಿ ಎಳ್ಳಷ್ಟೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ದೆಹಲಿ ಮೆಟ್ರೋದಲ್ಲಿ (Delhi metro) ವೃದ್ಧನ ತೊಡೆಯ ಮೇಲೆ ತಲೆಯಿಟ್ಟು ವೃದ್ಧೆಯೊಬ್ಬಳು ಮಲಗಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಈ ವಿಡಿಯೋ ಇರ್ಫಾನ್ ಅನ್ಸಾರಿ (irrffaan ansari) ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಮೆಟ್ರೋದಲ್ಲಿ ವೃದ್ಧ ದಂಪತಿ ಒಟ್ಟಿಗೆ ಕುಳಿತುಕೊಂಡಿರುವುದನ್ನು ಕಾಣಬಹುದು. ಆ ವೃದ್ಧೆಯೂ ತನ್ನ ಗಂಡನ ಮಡಿಲಿನಲ್ಲಿ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ಪ್ರೀತಿ ಹಾಗೂ ಕಾಳಜಿ ವಯಸ್ಸಾದಂತೆ ಮಸುಕಾಗುವುದಿಲ್ಲ, ಇದು ಶಾಂತ ಜ್ಞಾಪನೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿಯೊಬ್ಬನು ಮೆಟ್ರೋದಲ್ಲಿ ಶಾಂತವಾಗಿ ಕುಳಿತುಕೊಂಡಿರುವುದನ್ನು ಕಾಣಬಹುದು. ಪತ್ನಿಯೂ ಈ ವೃದ್ಧನ ತೊಡೆಯ ಮೇಲೆ ತಲೆಯಿಟ್ಟು ವಿಶ್ರಾಂತಿ ಪಡೆಯುತ್ತಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ:Video: ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಲು ವಿಚಿತ್ರ ಡ್ಯಾನ್ಸ್ ಮಾಡಿದ ಪತಿ
ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ, ಎಂತದ ಸುಂದರ ದಾಂಪತ್ಯ ಜೀವನ ಕ್ಷಣಗಳನ್ನು ಕಂಡಾಗ ಖುಷಿಯಾಗುತ್ತದೆ. ಮತ್ತೊಬ್ಬರು ಕಷ್ಟದ ಕಾಲದಲ್ಲೂ ನಿನಗೆ ನೆರಳಾಗಿರುವೆ, ಈ ವೃದ್ಧ ದಂಪತಿಯ ಶುದ್ಧ ಪ್ರೀತಿಯೇ ಸುಂದರ ಎಂದು ಹೇಳಿದ್ದಾರೆ. ಇಂತಹ ನಿಷ್ಕಲ್ಮಶ ಪ್ರೀತಿ ನೋಡಲು ಎರಡು ಕಣ್ಣು ಸಾಲದು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ