Tragic Incident: ತನ್ನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವತಿ ಸಾವು

|

Updated on: Jun 19, 2024 | 10:42 AM

ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಸಂಗೀತ ಕಾರ್ಯಕ್ರಮಗಳೊಂದಿಗೆ ಮೆಹಂದಿ ಕಾರ್ಯಕ್ರಮ ಆರಂಭವಾಗಿದೆ. ಆದರೆ ವಿಧಿ ವಿಪರ್ಯಾಸವೆಂಬಂತೆ ವಧು ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

Tragic Incident: ತನ್ನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವತಿ ಸಾವು
ತನ್ನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವತಿ ಸಾವು
Follow us on

ಉತ್ತರಾಖಂಡ: ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕ್ಷಣ. ಆದರೆ ಇಲ್ಲೊಬ್ಬಳು ಯುವತಿ ಹೊಸ ಬದುಕಿನ ಕನಸು ಕಾಣುತ್ತಾ ಸಂಭ್ರಮದಲ್ಲಿರುವಾಗಲೇ ವಿಧಿ ವಿಪರ್ಯಾಸವೆಂಬಂತೆ ಕೊನೆ ಉಸಿರೆಳೆದಿದ್ದಾಳೆ. ಮದುವೆಯ ಹಿಂದಿನ ದಿನ ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್​​ನಲ್ಲಿ ನಡೆದಿದೆ. ಸಂತೋಷದಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ.

ಮೃತ ಯುವತಿ ಶ್ರೇಯಾ ಜೈನ್(28) ಎಂದು ಗುರುತಿಸಲಾಗಿದೆ. ದೆಹಲಿ ಮೂಲದವರಾದ ಶ್ರೇಯಾ ಕುಟುಂಬ ಡೆಹ್ರಾಡೂನ್‌ನ ಐಷಾರಾಮಿ ರೆಸಾರ್ಟೊಂದನ್ನು ಮದುವೆಯ ಸಂಭ್ರಮಾಚರಣೆಗಾಗಿ ಬುಕ್​​​ ಮಾಡಿತ್ತು. ಆದರಂತೆ ಮದುವೆಗೂ ಎರಡು ದಿನಗಳ ಹಿಂದೆ ರೆಸಾರ್ಟ್​​​ಗೆ ಬಂದಿದ್ದಾರೆ.

ಇದನ್ನೂ ಓದಿ: “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ”… ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ

ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಸಂಗೀತ ಕಾರ್ಯಕ್ರಮಗಳೊಂದಿಗೆ ಮೆಹಂದಿ ಕಾರ್ಯಕ್ರಮ ಆರಂಭವಾಗಿದೆ. ಆದರೆ ವಿಧಿ ವಿಪರ್ಯಾಸವೆಂಬಂತೆ ವಧು ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಯುವತಿ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: