
ದೀಪಾವಳಿ (Diwali) ಹಬ್ಬದ ತಯಾರಿ ಜೋರಾಗಿದೆ. ಇನ್ನು ಕೆಲಸ ಮಾಡುವ ಉದ್ಯೋಗಿಗಳು ಈ ಬಾರಿ ಕಂಪನಿ ಏನು ಗಿಫ್ಟ್ ಕೊಡುತ್ತದೆ ಎಂದು ಕಾಯುತ್ತಾರೆ. ಆದರೆ ಇದೀಗ ದೆಹಲಿ ಮೂಲದ ಕಂಪನಿ ಉದ್ಯೋಗಿಗಳಿಗೆ ದುಬಾರಿ ಬೆಲೆಯ ಗಿಫ್ಟ್ ನೀಡಿ ಖುಷಿ ಪಡಿಸಿದೆ. ಐಫೋನ್ 16 ಸ್ಮಾರ್ಟ್ ಫೋನ್ ನೀಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನೀವೇ ಲಕ್ಕಿ ಎಂದಿದ್ದಾರೆ.
ಫೈನಾನ್ಸರ್ ಸಾಬ್ (Financersaab) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ಯಾವುದೇ ಸ್ಪರ್ಧೆಯಿಲ್ಲ. ನಿಮಗೆ ದೀಪಾವಳಿಗೆ ಏನು ಸಿಕ್ತು?ಎಂದು ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್ ನಲ್ಲಿ ದೆಹಲಿ ಮೂಲದ ಕಂಪನಿಯ ದೀಪಾವಳಿ ಸಂಭ್ರಮದ ವಿಡಿಯೋ ನೀವಿಲ್ಲಿ ನೋಡಬಹುದು. ಉದ್ಯೋಗಿಯ ಡೆಸ್ಕ್ ಮೇಲೆ ಐಫೋನ್ 16 ಬಾಕ್ಸ್‌ಗಳನ್ನು ಇಡಲಾಗಿದೆ. ಈ ದುಬಾರಿ ಬೆಲೆಯ ಉಡುಗೊರೆ ನೋಡಿ ಉದ್ಯೋಗಿಗಳು ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ಕೀ ಪ್ಯಾಡ್ ಮೊಬೈಲ್ ಗಿಫ್ಟ್ ಕೊಟ್ಟ ತಂದೆ, ಖುಷಿಯಲ್ಲಿ ತೇಲಾಡಿದ ಮಗಳು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಈ ಕಂಪನಿಯಲ್ಲಿ ಕೆಲಸ ಮಾಡುವವರೇ ಅದೃಷ್ಟವಂತರು ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿ ಹುದ್ದೆ ಖಾಲಿಯಿದ್ದರೆ ಹೇಳಿ ಸೇರಿಕೊಳ್ಳುವೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಮ್ಮ ಕಂಪನಿಯಲ್ಲಿ ಸ್ವೀಟ್ ಬಾಕ್ಸ್ ಕೊಡೋದೇ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ