AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೀ ಪ್ಯಾಡ್ ಮೊಬೈಲ್ ಗಿಫ್ಟ್ ಕೊಟ್ಟ ತಂದೆ, ಖುಷಿಯಲ್ಲಿ ತೇಲಾಡಿದ ಮಗಳು

ಈಗಿನ ಕಾಲದ ಮಕ್ಕಳು ಸ್ಯಾಮ್‌ಸಂಗ್‌, ಐಫೋನ್ ನಂತಹ ದುಬಾರಿ ಬೆಲೆ ಸ್ಮಾಟ್ ಫೋನ್ ಬೇಕೆಂದು ಹೆತ್ತವರ ಮುಂದೆ ಹಠ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ಮಗಳ ಕೀ ಪ್ಯಾಡ್ ಮೊಬೈಲ್ ಕಂಡು ಖುಷಿ ಪಟ್ಟಿದ್ದಾಳೆ. ಹೌದು, ತಂದೆಯೂ ತನ್ನ ಮಗಳಿಗೆ ನೋಕಿಯಾ ಕೀಪ್ಯಾಡ್ ಫೋನ್ ಕೊಡಿಸಿದ್ದಾರೆ. ಮೊಬೈಲ್ ನೋಡಿ ಆಕೆಯ ಮೊಗದಲ್ಲಿ ನಗು ಮೂಡಿದ್ದು, ನೆಟ್ಟಿಗರ ಕಣ್ಣು ಒದ್ದೆಯಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕೀ ಪ್ಯಾಡ್ ಮೊಬೈಲ್ ಗಿಫ್ಟ್ ಕೊಟ್ಟ ತಂದೆ, ಖುಷಿಯಲ್ಲಿ ತೇಲಾಡಿದ ಮಗಳು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 01, 2026 | 11:11 AM

Share

ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ (smartphone) ಸಿಕ್ಕರೆ ಸಾಕು, ಅದರಲ್ಲೇ ಕಳೆದು ಹೋಗುತ್ತಾರೆ. ಮಕ್ಕಳಿಗೆ ಹೆತ್ತವರು ಸ್ಮಾರ್ಟ್ ಫೋನ್ ಗಿಫ್ಟ್ ಆಗಿ ಕೊಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಐಫೋನ್ ಬದಲು ಕೀ ಪ್ಯಾಡ್ ಮೊಬೈಲ್ ಕೊಡಿಸಿದ್ದಾರೆ. ತಂದೆಯ ಗಿಫ್ಟ್ ಗೆ ಮಗಳು ಫುಲ್ ಖುಷ್ ಆಗಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಗಳಿಗೆ ಕೀ ಪ್ಯಾಡ್ ಮೊಬೈಲ್ ಗಿಫ್ಟ್ ಕೊಟ್ಟ ತಂದೆ

ಸಾಯಿ (Sai) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿ ಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆರ್ಥಿಕವಾಗಿ ಸಶಕ್ತವಲ್ಲದ ತಂದೆಯೊಬ್ಬರು ತನ್ನ ಮಗಳ ಜತೆಗೆ ಮೊಬೈಲ್ ಶಾಪ್ ಗೆ ಬಂದಿದ್ದಾರೆ. ಮಗಳಿಗೆ ನೋಕಿಯಾ ಕೀ ಪ್ಯಾಡ್ ಮೊಬೈಲ್ ನ್ನು ತೆಗೆಸಿಕೊಟ್ಟಿದ್ದಾರೆ. ಮೊಬೈಲ್ ಕವರ್ ಓಪನ್ ಮಾಡುತ್ತಿದ್ದಂತೆ ಆಕೆಯ ಮೊಗದಲ್ಲಿದ್ದ ನಗುವೇ ಎಲ್ಲವನ್ನು ಹೇಳುತ್ತಿದೆ. ಪುಟ್ಟ ಹುಡುಗಿ ಹೊಸ ಫೋನ್ ಸಿಕ್ಕ ಖುಷಿಯಲ್ಲಿದ್ದಾಳೆ. ದುಬಾರಿ ಬೆಲೆಯದಲ್ಲದಿದ್ದರೂ ಮಗಳಿಗೆ ಫೋನ್ ತೆಗೆಸಿಕೊಟ್ಟೆ ಎನ್ನುವ ತೃಪ್ತಿ ತಂದೆಯ ಮುಖದಲ್ಲಿ ಎದ್ದು ಕಾಣುತ್ತಿದೆ.

ಎಕ್ಸ್ ಪೋಸ್ಟ್ ಇಲ್ಲಿದೆ

 ಇದನ್ನೂ ಓದಿ: ದುಬಾರಿ ಉಡುಗೊರೆ ಬೇಕಿಲ್ಲ; ಸಹೋದರಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ವಿಸಿಟ್ ನೀಡಿ ಖುಷಿ ಪಡಿಸಿದ ಸಹೋದರ

ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆ ಹುಡುಗಿಗೆ ಕೀ ಪ್ಯಾಡ್ ಮೊಬೈಲ್ ದೊಡ್ಡ ಉಡುಗೊರೆ ಎಂದಿದ್ದಾರೆ. ಇನ್ನೊಬ್ಬರು, ಸಂತೋಷ ವಸ್ತುವಿನ ಮೇಲೆ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬೆಲೆ ಕಡಿಮೆಯೇ ಇರಲಿ, ಆದರೆ ಮೊಬೈಲ್ ಕೈಯಲ್ಲಿ ಹಿಡಿತ ತಕ್ಷಣ ಆಕೆಯ ಮುಖದಲ್ಲಿ ಮೂಡಿದ ನಗುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More