Viral: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಮೂಲಕ ತಾನು ಕೆಲಸ ಮಾಡೋ ಆಫೀಸಿಗೆ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ ವ್ಯಕ್ತಿ; ಮುಂದೆ ನಡೆದದ್ದೇ ಬೇರೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 25, 2024 | 10:18 AM

ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ತಮ್ಮ ಲೈಫ್‌ನಲ್ಲಾದಂತಹ ಬೇಸರ, ಖುಷಿ ಹೀಗೆ ಕೆಲವೊಂದು ಇಂಟರೆಸ್ಟಿಂಗ್‌ ಕಥೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ತಾನು ಡೈರೆಕ್ಟ್‌ ಆಫೀಸಿಗೆ ಕಾಂಡೋಮ್‌ ಆರ್ಡರ್‌ ಮಾಡಿ ಮುಜುಗರಕ್ಕೀಡಾದ ಕಥೆಯನ್ನು ಹಂಚಿಕೊಂಡಿದ್ದರು. ಈ ಕುರಿತ ಸ್ಕ್ರೀನ್‌ಶಾಟ್‌ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಮೂಲಕ ತಾನು ಕೆಲಸ ಮಾಡೋ ಆಫೀಸಿಗೆ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ ವ್ಯಕ್ತಿ; ಮುಂದೆ ನಡೆದದ್ದೇ ಬೇರೆ
ವೈರಲ್​ ಪೋಸ್ಟ್​
Follow us on

ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಏನೇ ಪುಟ್ಟ ವಸ್ತುಗಳನ್ನು ಖರೀದಿ ಮಾಡಿದ್ರೂ, ಅವುಗಳನ್ನು ಬಾಕ್ಸ್‌ನಲ್ಲಿ ಚೆನ್ನಾಗಿ ಪ್ಯಾಕಿಂಗ್‌ ಮಾಡಿ ಡೆಲಿವರಿ ಮಾಡ್ತಾರೆ. ಈ ಆರ್ಡರ್‌ ಕೂಡಾ ಚೆನ್ನಾಗಿ ಮಾಡಿ ಕಳಿಸ್ತಾರೆ ಅನ್ನೋ ಧೈರ್ಯದಲ್ಲಿ ಇಲ್ಲೊಬ್ರು ವ್ಯಕ್ತಿ ಆಫೀಸಿಗೆ ಕಾಂಡೋಮ್‌ ಆರ್ಡರ್‌ ಮಾಡಿ ಮುಜುಗರಕ್ಕೀಡಾಗಿದ್ದಾರೆ. ಹೌದು ಕಾಂಡೋಮ್ ಯಾರಿಗೂ ಕಾಣಿಸದಂತೆ ಬಾಕ್ಸ್‌ ಒಳಗೆ ಪ್ಯಾಕಿಂಗ್‌ ಮಾಡಿ ಡೆಲಿವರಿ ಮಾಡುತ್ತಾರೆ ಅನ್ನೋ ಧೈರ್ಯದಿಂದ ಆ ವ್ಯಕ್ತಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಡೈರೆಕ್ಟ್‌ ಆಫೀಸಿಗೆ ಕಾಂಡೊಮ್‌ ಆರ್ಡರ್‌ ಮಾಡಿದ್ದಾರೆ. ಆದ್ರೆ ಅದರ ಪ್ಯಾಕಿಂಗ್‌ ನೋಡಿದ ಮೇಲೆ ತಾನು ಯಾಕಾದ್ರೂ ಈ ಆರ್ಡರ್‌ ಮಾಡಿದ್ನಪ್ಪಾ ಎಂದು ತಲೆ ಚಚ್ಚಿಕೊಂಡಿದ್ದಾರೆ. ಈ ಮುಜುಗರದ ಸ್ಟೋರಿಯನ್ನು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಕುರಿತ ಸ್ಕ್ರೀನ್‌ಶಾಟ್‌ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಪ್ರತಿ ಬಾರಿ ಬ್ಲಿಂಕಿಟ್‌ನಿಂದ ಕಾಂಡೋಮ್‌ಗಳನ್ನು ಆರ್ಡರ್‌ ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿ ಎಲ್ಲಾ ಡೆಲಿವರಿ ಕಂಪೆನಿಗಳು ಕೂಡಾ ಆರ್ಡರ್‌ಗಳನ್ನು ಚೆನ್ನಾಗಿ ಪ್ಯಾಕಿಂಗ್‌ ಮಾಡಿ ಕಳುಹಿಸುತ್ತಾರೆ ಅನ್ನೋ ಭರವಸೆಯಿಂದ ಕೆಲಸದ ಸಮಯದಲ್ಲಿಯೇ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಿದ್ದಾರೆ. ಮತ್ತು ತನ್ನ ಆರ್ಡರ್‌ ಅನ್ನು ರಿಸೆಪ್ಷನ್‌ ಡೆಸ್ಕ್‌ನಲ್ಲಿ ಇಡುವಂತೆ ಡೆಲಿವರಿ ಬಾಯ್‌ಗೆ ಹೇಳಿದ್ದಾರೆ. ಕೆಲಸ ಮುಗಿಸಿ ತನ್ನ ಆರ್ಡರ್‌ ಅನ್ನು ಕಲೆಕ್ಟ್‌ ಮಾಡಲು ರಿಸೆಪ್ಷನ್‌ ಡೆಸ್ಕ್‌ ಬಳಿ ಹೋದಾಗ ಗುಲಾಬಿ ಬಣ್ಣದ ಲಕೋಟೆಯಲ್ಲಿ ಕಾಂಡೋಮ್‌ ಪ್ಯಾಕ್‌ ಮಾಡಿರುವುದನ್ನು ಕಂಡು ಆ ವ್ಯಕ್ತಿ ಶಾಕ್‌ ಆಗಿದ್ದು, ಆಫೀಸ್‌ನಲ್ಲಿ ನನ್ನ ಬಗ್ಗೆ ಏನು ತಿಳಿದುಕೊಂಡರೋ ಏನು ಎಂದು ಮುಜುಗರಕ್ಕೀಡಾಗಿದ್ದಾರೆ.

ಇದನ್ನೂ ಓದಿ: ಮದುವೆಯಾದ 8 ವರ್ಷಗಳ ನಂತರ ಬಹಿರಂಗವಾದ ಪತಿಯ ಸತ್ಯ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದ್ದ ಈ ಸ್ಟೋರಿಯ ಸ್ಕ್ರೀನ್‌ಶಾಟ್‌ ಫೋಟೋವನ್ನು jist.news ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಶೇರ್‌ ಮಾಡಲಾದ ಈ ಪೋಸ್ಟ್‌ ಸಖತ್‌ ವೈರಲ್‌ ಆಗುತ್ತಿದ್ದು, ಹಲವರು ಕೆಲಸದ ಸ್ಥಳಕ್ಕೆ ಕಾಂಡೋಮ್‌ ಆರ್ಡರ್‌ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ