
ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋದಲ್ಲಿ ಆಗುವ ಕೆಲವೊಂದು ವಿಚಿತ್ರ ಘಟನೆಗಳು ವೈರಲ್ ಆಗುತ್ತ ಇರುತ್ತದೆ. ಅದರಲ್ಲೂ ಈ ದೆಹಲಿ ಹಾಗೂ ಬೆಂಗಳೂರು ಮೆಟ್ರೋದಲ್ಲಿ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತ ಇರುತ್ತದೆ. ಇದೀಗ ದೆಹಲಿ ಮೆಟ್ರೋದಲ್ಲಿ (Delhi Metro) ನಡೆದ ಘಟನೆಯೊಂದನ್ನು ವ್ಯಕ್ತಿಯೊಬ್ಬರು ತುಂಬಾ ಬೇಸರದಿಂದ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ದೆಹಲಿ ಮೆಟ್ರೋದಲ್ಲಿ ಜನಸಂದಣಿ ಆಗುವುದು ಸಾಮಾನ್ಯ, ಏಕೆಂದರೆ ಸುಮಾರು ಜನ ಮೆಟ್ರೋವನ್ನು ಅವಲಂಬಿಸಿರುತ್ತಾರೆ. ಹೀಗೆ ಮೆಟ್ರೋದಲ್ಲಿ ಪ್ರಯಾಣಿಕರೊಬ್ಬರು ಜನದಟ್ಟನೆ ನಡುವೆ ಫೋನ್ ಚಾರ್ಜ್ ಮಾಡಲು ಹಾಕಿದ್ದಾರೆ. ಈ ವೇಳೆ ಚಾರ್ಜರ್ ತಪ್ಪಿ ಅಲ್ಲೇ ಕುಳಿತಿದ್ದ ಹಿರಿಯ ನಾಗರಿಕರೊಬ್ಬರ ಮೇಲೆ ಬಿದ್ದಿದೆ. ಇದರಿಂದ ಕೋಪಗೊಂಡು ಆ ವ್ಯಕ್ತಿ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹಿರಿಯ ನಾಗರಿಕರ ವರ್ತನೆಯನ್ನು ಖಂಡಿಸಿದ್ದಾರೆ.
ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ಹೀಗೆ ಹೇಳಿಕೊಳ್ಳಲಾಗಿದೆ. “ನಾನು ಪ್ರಯಾಣಿಸಿದ ಮೆಟ್ರೋ ಜನರಿಂದ ತುಂಬಿ ತುಳುಕುತ್ತಿತ್ತು. ಒಂದು ಕಡೆ ಫೋನ್ನಲ್ಲಿ ಚಾರ್ಜ್ ಕೂಡ ಇರಲಿಲ್ಲ. ಮೆಟ್ರೋದ ಚಾರ್ಜ್ ಪಾಯಿಂಟ್ನಲ್ಲಿ ಫೋನ್ ಚಾರ್ಜ್ ಹಾಕಲು ಹೋದೆ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಹಿರಿಯ ನಾಗರಿಕರೊಬ್ಬರ ಮೇಲೆ ನನ್ನ ಚಾರ್ಜರ್ ಬಿತ್ತು. ನಾನು ಕ್ಷಮಿಸಿ ಸರ್ ಎಂದು ಹೇಳಿದ್ರು, ಮೆಟ್ರೋದಲ್ಲಿ ಅಷ್ಟು ಜನರ ಮುಂದೆ ಕಪಾಳಮೋಕ್ಷ ಮಾಡಿದ್ದಾರೆ. ನಾನು ಕೂಡ ಕೋಪದಲ್ಲಿ ಏನಾಯಿತು ನಿಮಗೆ ಎಂದು ಏರು ಧ್ವನಿಯಲ್ಲಿ ಕೇಳಿದೆ, ಆಗಾ ಮತ್ತೊಬ್ಬ ಪ್ರಯಾಣಿಕರು ಮಧ್ಯಪ್ರವೇಶಿಸಿ, ನನ್ನನ್ನು ಬೇರೆ ಕಡೆ ಕಳಿಸಿದರು. ಒಂದೇ ವೇಳೆ ನಾನು ಅವರ ವಯಸ್ಸು ನೋಡದೇ ತಿರುಗಿಸಿ ಹೊಡೆದಿದ್ದರೆ ಏನಾಗುತ್ತಿತ್ತು. ಅಷ್ಟಕ್ಕೂ ನನ್ನ ತಪ್ಪಿನ ಬಗ್ಗೆ ಅರಿವು ಇದೆ. ಅದಕ್ಕೆ ನಾನು ಕ್ಷಮೆಯನ್ನು ಕೇಳಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೆಳತಿಯ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
Got slapped in the metro. AITA?
byu/Extra_Attention_5506 indelhi
ನೀವು ಕ್ಷಮೆ ಕೇಳಿದ ನಂತರ ಅವರು ಹೇಗೆ ಕೈ ಮಾಡಿದ್ರು, ಹಿರಿಯರ ನಾಗರಿಕರು ಕಪಾಳಮೋಕ್ಷ ಮಾಡಲು ಉಚಿತ ಪಾಸ್ ತೆಗೆದುಕೊಂಡಿರಬೇಕು ಎಂದು ಒಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ವರ್ತನೆ ಸ್ವೀಕಾರಾರ್ಹವಲ್ಲ, ಹಿರಿಯರು ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು. ಇದು ಮೆಟ್ರೋದಲ್ಲಿ ಮಾತ್ರವಲ್ಲ, ಬಸ್, ರೈಲು, ವಿಮಾನದಲ್ಲೂ ಇಂತಹ ಘಟನೆಗಳು ನಡೆಯುತ್ತದೆ ಎಂದು ಮತ್ತೊಬ್ಬರು ವಿವರಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ