ದೆಹಲಿ ಪೊಲೀಸರಿಬ್ಬರು ಹಿಂದಿ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಯಾಗಿದೆ. ಇದೀಗ, ಕರ್ತವ್ಯದಲ್ಲಿದ್ದಾಗಲೇ ಸಮವಸ್ತ್ರ ಧರಿಸಿ ಮನೋರಂಜನಾ ವಿಡಿಯೋ ಮಾಡಿದ್ದರಿಂದ ಶೋಕಾಸ್ ನೊಟೀಸ್ ನೀಡಲಾಗಿದೆ.
ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಕೂಡಾ, ಟುಕುರ್ ಟುಕುರ್ ದೇಕ್ತೇ ಹೋ ಕ್ಯಾ.. ಬಾಲಿವುಡ್ ಹಾಡಿಗೆ ಆ್ಯಕ್ಟ್ ಮಾಡಿದ್ದಾರೆ. ಸಮವಸ್ತ್ರದಲ್ಲಿಯೇ ಆ್ಯಕ್ಟ್ ಮಾಡಿರುವುದು ವಿಡಿಯೋ ಮೂಲಕ ಸ್ಪಷ್ಟವಾಗಿದೆ. ಸಾಮಾಜಿಕ ಜಾತಲಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳಿಗೆ ಕಾರಣವಾಯಿತು. ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಇಬ್ಬರು ಕಾನ್ಸ್ಟೇಬಲ್ಗಳಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ.
ವರದಿಯ ಪ್ರಕಾರ, ಮಾಡೆಲ್ ಟೌಲ್ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಶಶಿ ಮತ್ತು ಕಾನ್ಸ್ಟೇಬಲ್ ವಿವೇಕ್ ಮಾಥುರ್ ಅವರು ಕರ್ತವ್ಯ ನಿರ್ಲಕ್ಷ್ಯ ತೋರಿದ್ದರಿಂದ ಹಾಗೂ ಸಮವಸ್ತ್ರದಲ್ಲಿಯೇ ಹಿಂದಿ ಹಾಡಿಗೆ ಆ್ಯಕ್ಟ್ ಮಾಡಿರುವುದರಿಂದ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ದೆಹಲಿ ಡಿಸಿಪಿ ಉಷಾ ರಂಗ್ನಾನಿ ನೋಟೀಸ್ ನೀಡಿದ್ದಾರೆ.
#JUSTIN: A show cause notice has been issued to woman head constable and constable of Delhi Police for making videos in uniform during their official duties during lockdown and sharing on social media – said DCP (north-west) Usha Rangnani in her order. @IndianExpress, @ieDelhi pic.twitter.com/DVwwxYNtoC
— Mahender Singh Manral (@mahendermanral) June 8, 2021
ಕೊವಿಡ್ ಸಮಯದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ. ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಇಬ್ಬರೂ ಕೂಡಾ ಮಾಸ್ಕ್ ಧರಿಸಲ್ಲ. ಕೊವಿಡ್19 ಸೋಂಕು ಹರಡುತ್ತಿರುವ ಸಮಯದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದು ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ವೃತ್ತಿಗೆ ತಕ್ಕನಾದ ನಡತೆಯನ್ನು ತೋರುವಲ್ಲಿ ಅವರು ವಿಫಲರಾಗಿದ್ದಾರೆ. ಕರ್ತವ್ಯದಲ್ಲಿದ್ದಾಗ ಅಜಾಗರೂಕತೆ, ನಿರ್ಲಕ್ಷ್ಯತನವನ್ನು ತೋರಿದ್ದಾರೆ. ಈ ಕುರಿತಂತೆ ಶೋಕಾಸ್ ನೋಡಿಸ್ ನೀಡಲಾಗಿದೆ.
ಇದನ್ನೂ ಓದಿ:
Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?
Published On - 4:30 pm, Wed, 9 June 21