Viral Video: ವಧು ಮತ್ತು ಸ್ನೇಹಿತೆಯರು ಸೇರಿ ಪ್ರಿಯಾಂಕಾ ಚೋಪ್ರಾ ಹಾಡಿಗೆ ಸಕತ್ ಸ್ಟೆಪ್; ವಿಡಿಯೊ ಫುಲ್ ವೈರಲ್

ವಿಡಿಯೊದಲ್ಲಿ ಗಮನಿಸುವಂತೆ ವಧು ಮತ್ತು ಆಕೆಯ ಸ್ನೇಹಿತೆಯರು ಪ್ರಿಯಾಂಕಾ ಚೋಪ್ರಾ ನಟಿಸಿದ ಸಿನಿಮಾದ ಹಾಡಿಗೆ ಭರ್ಜರಿ ಡಾನ್ಸ್​ ಮಾಡಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Viral Video: ವಧು ಮತ್ತು ಸ್ನೇಹಿತೆಯರು ಸೇರಿ ಪ್ರಿಯಾಂಕಾ ಚೋಪ್ರಾ ಹಾಡಿಗೆ ಸಕತ್ ಸ್ಟೆಪ್; ವಿಡಿಯೊ ಫುಲ್ ವೈರಲ್
ವಧು ಮತ್ತು ಸ್ನೇಹಿತರ ನೃತ್ಯ
Edited By:

Updated on: Nov 18, 2021 | 4:12 PM

ಮದುವೆ ಸಮಾರಂಭದಲ್ಲಿ ಮೋಜು ಮಸ್ತಿ ಎಲ್ಲವೂ ಸಾಮಾನ್ಯ. ಮೆಹಂದಿ ಕಾರ್ಯಕ್ರಮದ ದಿನ ಹಾಡಿ, ನೃತ್ಯವನ್ನು ಮಾಡುತ್ತಾ ಬಂದ ಅತಿಥಿಗಳೆಲ್ಲಾ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಮದುವೆ ಮನೆ (Wedding house) ಅಂದ್ರೆ ಎಲ್ಲೆಲ್ಲೂ ಸಡಗರ, ಸಂಭ್ರಮ. ವಧು ಕೂಡಾ ಮೆಹಂದಿ ಹಾಕಿಸಿಕೊಂಡು ನೃತ್ಯ (Dance) ಮಾಡಲೇ ಬೇಕು. ಹಾಗೆಯೇ ಇಲ್ಲೋರ್ವ ವಧು (Bide Dance) ಕೂಡಾ ಸಿನಿಮಾ ಚಿತ್ರಗೀತೆಗೆ ನೃತ್ಯ ಮಾಡಿದ್ದಾಳೆ. ತನ್ನ ಸ್ನೇಹಿತೆಯರ ಜೊತೆಗೂಡಿ ಹೆಜ್ಜೆ ಹಾಕಿದ ದೃಶ್ಯದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ (Viral Video) ಗಮನಿಸುವಂತೆ ವಧು ಮತ್ತು ಆಕೆಯ ಸ್ನೇಹಿತೆಯರು ಪ್ರಿಯಾಂಕಾ ಚೋಪ್ರಾ ನಟಿಸಿದ ಸಿನಿಮಾದ ಹಾಡು ಸೇ ನಾ ಸೇನಾ ಹಾಡಿಗೆ ನೃತ್ಯ ಮಾಡಿದ್ದಾರೆ. ಅವರ ಕುಣಿದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರ ಮನ ಸೆಳೆದಿದೆ.

ವಧು ಎದುರಿಗಿದ್ದು ಸ್ನೇಹಿತರೆಲ್ಲಾ ವಧುವಿನ ಹಿಂಬದಿಯಲ್ಲಿದ್ದಾರೆ. ಸಿನಿಮಾ ಹಾಡಿಕೆ ಸಕತ್ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಸುಂದರವಾಗಿ ಅಲಂಕಾರಗೊಂಡ ಯುವತಿಯರು ಭರ್ಜರಿ ಡಾನ್ಸ್ ಮಾಡಿದ್ದಾರೆ. ನೆಟ್ಟಿಗರ ಮನಗೆದ್ದ ವಿಡಿಯೊ ಫುಲ್ ವೈರಲ್ ಆಗಿದೆ. ಈ ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇನ್ಸ್ಟಾಗ್ರಾಮ್​ ಇಸ್ರಾನಿ ಪೋಟೋಗ್ರಫಿ ಎಂಬ ಪುಟದಲ್ಲಿ ನೀವು ವಿಡಿಯೊವನ್ನು ನೋಡಬಹುದು. ಈ ವಿಡಿಯೊ ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಕಾಮೆಂಟ್ಸ್​ಗಳು ಸಹ ಲಭ್ಯವಾಗಿದೆ. ಸಾಮಾಜಿಕ ಬಳಕೆದಾರರು ವಿಡಿಯೊವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಜೊತೆಗೆ ಇತರ ಸಾಮಾಜಿಕ ವೇದಿಕೆಗಳಲ್ಲಿಯೂ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ.

ಜನರು ತಮ್ಮ ಅನಿಸಿಕೆಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದು, ತುಂಬಾ ಅದ್ಭುತವಾದ ವಿಡಿಯೊ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ವಧು ಮತ್ತು ಸ್ನೇಹಿತರ ಕಾಂಬಿನೇಷನ್ ತುಂಬಾ ಸುಂದರವಾಗಿದೆ ಎಂದು ಮತ್ತೋರ್ವರು ಅನಿಸಿಕೆ ಹಂಚಿಕೊಂಡಿದ್ದಾರೆ. 2005ರಲ್ಲಿ ಬಿಡುಗಡೆಗೊಂಡ ಬ್ಲುಪ್ಹ್ ಮಾಸ್ಟರ್ಸ್ ಚಿತ್ರದ ಸೇ ನಾ ಸೇ ನಾ ಹಾಡಿಗೆ ವಧು ಮತ್ತು ಸ್ನೇಹಿತರು ನೃತ್ಯ ಮಾಡಿದ್ದಾರೆ.

ಇದನ್ನೂ ಓದಿ:

Viral Video: ವೇದಿಕೆಯ ಮೇಲೆ ವಧು ವರರ ಜಬರ್ದಸ್ತ್ ಡಾನ್ಸ್; ವಿಡಿಯೊ ನೋಡಿದ್ರೆ ಫಿದಾ ಆಗ್ತೀರಾ

Viral Video: ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!

Published On - 4:11 pm, Thu, 18 November 21