
ನಿಯತ್ತಿನಿಂದ ದುಡಿಯುವ ಕೈಗಳಿಗೆ ಯಾವತ್ತೂ ದ್ರೋಹ ಮಾಡಬಾರದು. ಇಲ್ಲೊಂದು ಅಮಾನವೀಯ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಬಾಂಗ್ಲಾದೇಶದ ಢಾಕಾ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ರೈಲ್ವೆ ನಿಲ್ದಾಣದ ಕೂಲಿಗೆ ಹಣ ನೀಡದೇ ಮೋಸ (Dhaka coolie cheated) ಮಾಡಿದ್ದಾನೆ. ಪಾಪ ಆ ಕೂಲಿ ಹಣಕ್ಕಾಗಿ ರೈಲಿನ ಹಿಂದೆ ಓಡಿದ್ದಾನೆ. ಈ ವಿಡಿಯೋಯನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಇಂತಹ ವಿಚಾರದಲ್ಲಿ ಮನುಷ್ಯತ್ವ ಕಳೆದುಕೊಳ್ಳಬಾರದು ಎಂದು ನೆಟ್ಟಿಗರು ಹೇಳಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ದುಡಿಯುವ ಇಂತಹ ಕೂಲಿಗಳಿಗೆ ಮೋಸ ಮಾಡುವುದು ಸರಿಯಲ್ಲ, ಮೋಸ ಮಾಡುವ ಇಂತಹ ಜನರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.
ಫೇಸ್ ಬುಕ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೀಗೆ ಹೇಳಲಾಗಿದೆ. ಕೂಲಿಯೊಬ್ಬ ಪ್ರಯಾಣಿಕನ ಬಳಿ ತಾನು ದುಡಿದ ಹಣವನ್ನು ಕೇಳಲು ರೈಲಿನ ಹಿಂದೆ ಓಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದರೆ ಆ ಪ್ರಯಾಣಿಕ ಕರುಣೆಯೇ ಇಲ್ಲದಂತೆ ವರ್ತಿಸಿದ್ದಾನೆ. ಪ್ರಯಾಣಿಕನಲ್ಲಿ ಅಂಗಲಾಚಿ ದುಡಿದ ಹಣ ಕೇಳಿದ್ರು ನೀಡಿಲ್ಲ, ಇನ್ನು ಪಕ್ಕದಲ್ಲಿದ್ದ ಯಾರು ಕೂಡ ಆ ಕೂಲಿಯ ಸಹಾಯಕ್ಕೆ ಬರುವುದಿಲ್ಲ. ಈ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸೋಜೋಲ್ ಅಲಿ ಎಂಬುವವರು ನಿನ್ನ ಫೋನ್ ನಂಬರ್ ಹೇಳು ನಾನು ಹಣ ಹಾಕುವೆ ಎಂದು ಹೇಳಿದ್ದಾರೆ. ಆದರೆ ಆ ಕೂಲಿ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆ ಕೂಲಿ ಎಷ್ಟೇ ಕೇಳಿಕೊಂಡರು ಪ್ರಯಾಣಿಕ ಯಾವುದಕ್ಕೂ ಪ್ರತಿಕ್ರಿಯೆ ನೀಡಲೇ ಇಲ್ಲ.
ಇದನ್ನೂ ಓದಿ: ರಾಂಗ್ ಸೈಡ್ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಜಗಳಕ್ಕೆ ಇಳಿದ ಮಹಿಳೆ
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಈ ವಿಡಿಯೋ ನೋಡಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿಗಳನ್ನು ನ್ಯಾಯಯುತವಾಗಿ ಮತ್ತು ಗೌರವದಿಂದ ನಡೆಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದಾರೆ. ಒಬ್ಬರು ಹೀಗೆ ಕಮೆಂಟ್ ಮಾಡಿದ್ದಾರೆ. ಹಣ ಕೊಡದ ವ್ಯಕ್ತಿಯ ಬಗ್ಗೆ ನನಗೆ ವಿಷಾದವಿದೆ, ಏಕೆಂದರೆ ಅವನು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮತ್ತೊಬ್ಬರು ದಯವಿಟ್ಟು ಯಾರಾದರೂ ಅವನನ್ನು ಹುಡುಕಿ ಅವನ ಬಾಕಿ ಹಣವನ್ನು ಪಾವತಿಸಬಹುದೇ? ಎಂದು ಹೇಳಿದ್ದಾರೆ. ಪ್ರಯಾಣಿಕ ಮಾಡಿದ ಪಾಪವನ್ನು ಖಂಡಿತ ಕರ್ಮ ನೋಡಿಕೊಳ್ಳುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ