ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗಿ ವಿಚ್ಛೇದನದ ಮೂಲಕ ಮದುವೆ ಸಂಬಂಧ ಮರಿದು ಬೀಳುವ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅನೇಕ ಬಾರಿ ಆತುರದಲ್ಲಿ ಅಥವಾ ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ಮುಂದೊಂದು ದಿನ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಇದೀಗ ಅಂತದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ. ಈ ಮಹಿಳೆಯ ಕಥೆಯನ್ನು ತಿಳಿದರೆ ನೀವು ದಿಗ್ಭ್ರಮೆಗೊಳ್ಳುತ್ತೀರಿ.
ಒರಿಯಾನಾ ಲಿಂಡ್ಸೆ ತನ್ನ ಟಿಕ್‌ಟಾಕ್‌ನಲ್ಲಿ ತನ್ನ ಕಥೆಯೊಂದನ್ನು ಹಂಚಿಕೊಂಡಿದ್ದಾಳೆ. “ಮದುವೆಯಾದ 7 ವರ್ಷಗಳ ನಂತರ, ನಾನು ಕೋಪಗೊಂಡು ನನ್ನ ಸ್ವಂತ ಪತಿಗೆ ವಿಚ್ಛೇದನ ನೀಡಿದ್ದೆ. ಆದರೆ ಈ ಘಟನೆಯ ಮೂರು ವರ್ಷಗಳ ನಂತರ, ನನ್ನ ಮಾಜಿ ಪತಿ ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ನಾನು ಅರ್ಥಮಾಡಿಕೊಂಡೆ. ಆದ್ದರಿಂದಲೇ ತಾನು ವಿಚ್ಛೇದನ ಪಡೆದ ತನ್ನ ಮಾಜಿ ಪತಿಯನ್ನು ಮತ್ತೆ ಮದುವೆಯಾಗಲು ನಿರ್ಧರಿಸಿದೆ” ಎಂದು ಲಿಂಡ್ಸೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ
ನಾನು ವಿಚ್ಛೇದನ ನೀಡಿದ ನಂತರದ ವರ್ಷದಲ್ಲಿ ನನ್ನ ಮಾಜಿ ಪತಿ ಬೇರೋಬ್ಬಳೊಂದಿಗೆ ಮದುವೆಯಾಗಿದ್ದಳು. ಆದರೆ ಅವರಿಗೆ ಹುಟ್ಟಿರುವ ಮಗುವನ್ನು ನಾನೇ ದತ್ತು ಪಡೆದು ಸಾಕುತ್ತಿದ್ದೇನೆ. ಇದೀಗಾ ಮತ್ತೆ ನನ್ನ ಪತಿಯೊಂದಿಗೆ ಮರು ಮದುವೆಯಾಗಿ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ