ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ದೀಪಾವಳಿ ವಿಶೇಷಕ್ಕೆ ಏನಾದರೂ ಹೊಸತನ್ನು ಮಾಡಲು ಜನರು ಹೆಚ್ಚು ಇಷ್ಟಪಡುತ್ತಾರೆ. ಹಬ್ಬಕ್ಕೆ ಖರೀದಿ ಜೋರಾಗಿಯೇ ಇದೆ. ಹೊಸ ಬಟ್ಟೆ ತೊಟ್ಟು ಸುಂದರವಾಗಿ ಅಲಂಕಾರಗೊಂಡು ಹಬ್ಬವನ್ನು ಸಂತೋಷದಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಯುವತಿ ಸೀರೆಗೆ ಲೈಟ್ಸ್ಗಳನ್ನು ಅಳವಡಿಸಿಕೊಂಡಿದ್ದಾಳೆ. ಮಿರಿ ಮಿರಿ ಮಿಂಚುತ್ತಾ ಓಡಾಡುತ್ತಿರುವ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.
ಈ ವಿಡಿಯೊ ಹಳೆಯದಾದರೂ ದೀಪಾವಳಿ ಸಮಯದಲ್ಲಿ ಮತ್ತೆ ವೈರಲ್ ಆಗಿದೆ. ಮಹಿಳೆಯ ಫಳ ಫಳ ಹೊಳೆಯುವ ಸೀರೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಬಿಳಿ ಬಣ್ಣದ ಸೀರೆಗೆ ಲೈಟ್ಸ್ ಅಳವಡಿಸಿ ಮಹಿಳೆ ಕಂಗೊಳಿಸುತ್ತಿದ್ದಾಳೆ. ಈ ದೃಶ್ಯ ಅನೇಕರ ಮನ ಗೆದ್ದಿದೆ. ಹೊಸ ಸ್ಟೈಲ್ ಎಂದು ಕೆಲವರು ಹೇಳಿದ್ದರೆ, ಶಾಕ್ ಹೊಡೆದರೆ ಎಲ್ಲವೂ ಛಿದ್ರವಾಗುತ್ತದೆ ಎಂದು ಓರ್ವರು ಹೇಳಿದ್ದಾರೆ.
ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಮಹಿಳೆಯನ್ನು ನೋಡಿದರೆ ದೀಪ ಹಚ್ಚುವ ಅವಶ್ಯಕತೆಯೇ ಇಲ್ಲ, ಮನೆ ತುಂಬಾ ಬೆಳಗುತ್ತಾಳೆ ಎಂದು ಓರ್ವರು ತಮಾಷೆ ಮಾಡಿದ್ದಾರೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.
What’s your #DeepavaliSaree like? Am sure your #DiwaliSari can’t match this one … Never seen anything quite like this after #AmitabhBachchan #SaaraZamaanaHaseenonKaDeewana #Yaarana !! pic.twitter.com/Y4VUv9UgNL
— Syed Mohammed Rafi (@JournalistRafi) November 1, 2021
ಇದನ್ನೂ ಓದಿ:
Viral Video: ಅಬ್ಬಬ್ಬಾ! ದೈತ್ಯ ಹೆಬ್ಬಾವಿನ ಎದುರು ಮಲಗಿರುವ ವ್ಯಕ್ತಿ ನೋಡಿ; ವಿಡಿಯೊ ವೈರಲ್
Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ