AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಅಮೆಜಾನ್​ನಲ್ಲಿ ಪಾಸ್​ಪೋರ್ಟ್ ಕವರ್​ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದೇನು ಗೊತ್ತಾ?

Online Shopping: ಪಾಸ್​ಪೋರ್ಟ್​ ಕವರ್ ಒಂದನ್ನು ಅಮೇಜಾನ್​ನಲ್ಲಿ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ತನಗೆ ಬಂದ ಪಾರ್ಸಲ್ ನೋಡಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಪಾಸ್​ಪೋರ್ಟ್ ಕವರ್ ಬದಲು ಅವರಿಗೆ ಬಂದಿದ್ದಾದರೂ ಏನು?

Shocking News: ಅಮೆಜಾನ್​ನಲ್ಲಿ ಪಾಸ್​ಪೋರ್ಟ್ ಕವರ್​ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದೇನು ಗೊತ್ತಾ?
ಪಾಸ್​ಪೋರ್ಟ್
TV9 Web
| Updated By: ಸುಷ್ಮಾ ಚಕ್ರೆ|

Updated on:Nov 04, 2021 | 7:20 PM

Share

ಇ-ಕಾಮರ್ಸ್​ ಕಂಪನಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನರು ಹೊರಗೆ ಹೋಗಿ ಶಾಪಿಂಗ್ ಮಾಡುವ ಬದಲು ಮನೆಬಾಗಿಲಿಗೇ ವಸ್ತುಗಳನ್ನು ತಂದುಕೊಡುವ ವೆಬ್​ಸೈಟ್​ಗಳ ಮೂಲಕ ಆನ್​ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಇ-ಕಾಮರ್ಸ್ ಸೈಟ್​ಗಳಲ್ಲಿ ಮೋಸ ಹೋಗುವವರಿಗೇನೂ ಕಡಿಮೆಯಿಲ್ಲ. ಏನನ್ನೋ ಆರ್ಡರ್ ಮಾಡಿದವರಿಗೆ ಇನ್ನೇನೋ ಸಿಕ್ಕಿರುವ ಸಾಕಷ್ಟು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಐಫೋನ್ ಆರ್ಡರ್ ಮಾಡಿದವನಿಗೆ ಸೋಪ್ ಸಿಕ್ಕಿದ್ದು, ವಾಚ್ ಬುಕ್ ಮಾಡಿದವನಿಗೆ ವಾಚ್ ಬಾಕ್ಸ್ ಮಾತ್ರ ಸಿಕ್ಕಿದ್ದು ಹೀಗೆ ಹಲವಾರು ಉದಾಹರಣೆಗಳಿವೆ. ಅದೇ ರೀತಿ ಪಾಸ್​ಪೋರ್ಟ್​ ಕವರ್ ಒಂದನ್ನು ಅಮೇಜಾನ್​ನಲ್ಲಿ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ತನಗೆ ಬಂದ ಪಾರ್ಸಲ್ ನೋಡಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಪಾಸ್​ಪೋರ್ಟ್ ಕವರ್ ಬದಲು ಅವರಿಗೆ ಬಂದಿದ್ದಾದರೂ ಏನು?

ಕೇರಳದಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಕೇರಳದ ವಯನಾಡ್ ಜಿಲ್ಲೆಯ ಕಣಿಯಂಬೆಟ್ಟಾ ಮೂಲದ ಮಿಥುನ್ ಬಾಬು ಎಂಬ ವ್ಯಕ್ತಿ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್‌ನಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಪಾಸ್‌ಪೋರ್ಟ್ ಕವರ್‌ಗೆ ಬದಲಾಗಿ ಒರಿಜಿನಲ್ ಪಾಸ್‌ಪೋರ್ಟ್ ಅನ್ನೇ ಪಡೆದಿದ್ದಾನೆ. ವಯನಾಡ್‌ನ ವ್ಯಕ್ತಿ ಅಕ್ಟೋಬರ್ 30ರಂದು ಅಮೆಜಾನ್‌ನಿಂದ ಪಾಸ್‌ಪೋರ್ಟ್ ಕವರ್ ಅನ್ನು ಆರ್ಡರ್ ಮಾಡಿದ್ದರು. ನವೆಂಬರ್ 1ರಂದು ಅವರಿಗೆ ಆರ್ಡರ್ ಅನ್ನು ಡೆಲಿವರಿ ಮಾಡಲಾಗಿತ್ತು. ಆರ್ಡರ್ ಮಾಡಿದಾತ ಡೆಲಿವರಿ ಪ್ಯಾಕೆಟ್ ಅನ್ನು ತೆರೆದಾಗ ಕವರ್ ಜೊತೆಗೆ ನಿಜವಾದ ಪಾಸ್‌ಪೋರ್ಟ್ ಇರುವುದು ಗೊತ್ತಾಯಿತು! ಅಂದಹಾಗೆ ಆ ಪಾಸ್​ಪೋರ್ಟ್ ತ್ರಿಶೂರ್‌ನ ಕುನ್ನಂಕುಲಂ ನಿವಾಸಿ ಮುಹಮ್ಮದ್ ಸಾಲಿಹ್ ಎಂಬುವವರಿಗೆ ಸೇರಿದ್ದಾಗಿತ್ತು.

ಒರಿಜಿನಲ್ ಪಾಸ್​ಪೋರ್ಟ್​ ಹೇಗೆ ಅಮೆಜಾನ್​ನಲ್ಲಿ ಬಂದಿತು ಎಂದು ತಿಳಿಯದೆ ಕಂಗಾಲಾದ ಆ ಗ್ರಾಹಕ ತಕ್ಷಣ ಅಮೆಜಾನ್ ಕಸ್ಟಮರ್ ಕೇರ್​ಗೆ ಫೋನ್ ಮಾಡಿದ್ದಾರೆ. ಆದರೆ, ಕಸ್ಟಮರ್ ಕೇರ್ ಸಿಬ್ಬಂದಿ ಈ ವಿಷಯ ತಿಳಿದು ಇನ್ನಷ್ಟು ಆಘಾತಕಾರಿಯಾದ ಪ್ರತಿಕ್ರಿಯೆ ನೀಡಿದರು. ಇನ್ನು ಮುಂದೆ ಈ ರೀತಿಯ ಯಾವ ಘಟನೆಯೂ ನಡೆಯುವುದಿಲ್ಲ. ನಮ್ಮ ಸೇಲ್ಸ್​ನವರಿಗೆ ಮುಂದಿನ ಬಾರಿ ಹೆಚ್ಚು ಎಚ್ಚರಿಕೆಯಿಂದ ಇರಲು ಸೂಚಿಸುತ್ತೇನೆ ಎಂದು ಆತ ಹೇಳಿದ್ದಾರೆ. ಇದನ್ನು ಕೇಳಿ ಗ್ರಾಹಕನಿಗೆ ಶಾಕ್ ಆಗಿದೆ.

ಅಂದರೆ, ಒರಿಜಿನಲ್ ಪಾಸ್​ಪೋರ್ಟ್​ಗೆ ಯಾವುದೇ ಬೆಲೆಯಿಲ್ಲದೆ ಆನ್​ನೈನ್​ನಲ್ಲಿ ಯಾರ್ಯಾರಿಗೋ ಕಳುಹಿಸಿದರೂ ಕಸ್ಟಮರ್ ಕೇರ್ ಸಿಬ್ಬಂದಿ ತಲೆ ಕೆಡಿಸಿಕೊಳ್ಳದಿರುವುದನ್ನು ನೋಡಿ ಆತನಿಗೆ ಶಾಕ್ ಆಗಿದೆ. ಅಲ್ಲದೆ, ಆ ಪಾಸ್​ಪೋರ್ಟ್​ ಅನ್ನು ಏನು ಮಾಡಬೇಕು, ಅದರ ಮಾಲೀಕರಿಗೆ ಹೇಗೆ ತಲುಪಿಸಬೇಕೆಂಬ ಬಗ್ಗೆ ಕೂಡ ಅವರು ಮಾಹಿತಿ ನೀಡಿಲ್ಲ. ಆದ್ದರಿಂದ ಗ್ರಾಹಕ ಮಿಥುನ್ ಬಾಬು ತಾನೇ ಖುದ್ದಾಗಿ ಪಾಸ್​ಪೋರ್ಟ್ ಅನ್ನು ಅದರ ಮಾಲೀಕರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Viral News: ಅಮೆಜಾನ್​ನಲ್ಲಿ ಆರ್ಡರ್ ಮಾಡಿದ್ದು 70,900 ರೂ. Apple iPhone 12; ಬಾಕ್ಸ್​ನಲ್ಲಿದ್ದ ವಿಮ್ ಸೋಪ್ ನೋಡಿ ಗ್ರಾಹಕ ಕಂಗಾಲು

Published On - 7:18 pm, Thu, 4 November 21