Viral News: ಅಮೆಜಾನ್ನಲ್ಲಿ ಆರ್ಡರ್ ಮಾಡಿದ್ದು 70,900 ರೂ. Apple iPhone 12; ಬಾಕ್ಸ್ನಲ್ಲಿದ್ದ ವಿಮ್ ಸೋಪ್ ನೋಡಿ ಗ್ರಾಹಕ ಕಂಗಾಲು
ಅಮೆಜಾನ್ನಲ್ಲಿ ಆರ್ಡರ್ ಮಾಡಿದ್ದ ಐಫೋನ್ ಬದಲಿಗೆ ವಿಮ್ ಸೋಪ್ ಮತ್ತು 5 ರೂಪಾಯಿ ನಾಣ್ಯವನ್ನು ನೋಡಿ ಗ್ರಾಹಕ ಕಂಗಾಲಾಗಿದ್ದಾರೆ.
ಇತ್ತೀಚೆಗೆ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ವಸ್ತುಗಳ ಬದಲಿಗೆ ಇತರ ವಸ್ತುಗಳನ್ನು ಗ್ರಾಹಕರು ಪಡೆಯುತ್ತಿರುವ ಅದೆಷ್ಟೋ ಸುದ್ದಿಗಳು ಬೆಳಕಿ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಅಮೆಜಾನ್ ಗ್ರಾಹಕನೊಬ್ಬ ಆನ್ಲೈನ್ನಲ್ಲಿ ಆಪಲ್ ಐಫೋನ್ 12 ಫೋನ್ ಆರ್ಡರ್ ಮಾಡಿದ್ದಾರೆ. ಆದರೆ ಬಂದಿದ್ದು ಮಾತ್ರ ವಿಮ್ ಸೋಪ್ ಮತ್ತು 5 ರೂಪಾಯಿಯ ನಾಣ್ಯ ಎಂಬ ಪ್ರಕರಣ ಬೆಳಕಿಗೆ ಬಂದಿದೆ.
ಕೇರಳದ ಕೊಚ್ಚಿಯ ಅಮೆಜಾನ್ ಗ್ರಾಹಕ 70,900 ರೂಪಾಯಿಯ ಆಪಲ್ ಐಫೋನ್ 12 ಸ್ಮಾರ್ಟ್ ಫೋನ್ಅನ್ನು ಆರ್ಡರ್ ಮಾಡಿದ್ದರು. ಮೊಬೈಲ್ಗಾಗಿ ಕಾಯುತ್ತ ಕುಳಿತಿದ್ದರು. ಆದರೆ ಆರ್ಡರ್ ರಿಸೀವ್ ಮಾಡಿದ ಅವರು ಬಾಕ್ಸ್ ತೆಗೆದು ನೋಡಿದರೆ ಅದರೊಳಗಿದ್ದ ವಿಮ್ ಸೋಪ್ ಮತ್ತು 5 ರೂ. ನಾಣ್ಯವನ್ನು ನೋಡಿ ಕಂಗಾಲಾಗಿದ್ದಾರೆ.
ನುರುಲ್ ಅವರು ಅಮೆಜಾಜ್ ಪೇ ಕಾರ್ಡ್ ಮೂಲಕ ಅಕ್ಟೋಬರ್ 12ರಂದು 70,900 ರೂ.ಗಳನ್ನು ಪಾವತಿಸಿ ಐಫೋನ್ ಆರ್ಡರ್ ಮಾಡಿದ್ದರು. ಆದರೆ ಅಕ್ಟೋಬರ್ 15ರಂದು ಬಂದ ಬಾಕ್ಸ್ನಲ್ಲಿ ವಿಮ್ ಸೋಪ್ ಮತ್ತು 5 ರೂ. ನಾಣ್ಯವಿತ್ತು. ಇದರಿಂದ ಆಘಾತಗೊಂಡ ನುರುಲ್ ಪೊಲೀಸ್ ಠಾಣೆಗೆ ದೂರು ನೋಡಿದ್ದಾರೆ.
ತನಿಖೆಯ ಬಳಿಕ ನುರುಲ್ ಅವರು ಆರ್ಡರ್ ಮಾಡಿದ್ದ ಫೋನ್ ಈಗಾಗಲೇ ಜಾರ್ಖಂಡ್ನಲ್ಲಿ ಸಪ್ಟೆಂಬರ್ ತಿಂಗಳಿನಿಂದಲೇ ಯಾರೋ ಬಳಸುತ್ತಿರುವುದು ತಿಳಿದು ಬಂದಿದೆ. ನಾವು ಅಮೆಜಾನ್ ಅಧಿಕಾರಿಗಳು ಮತ್ತು ಗಾಹಕರನ್ನು ಸಂಪರ್ಕಿಸಿದ್ದೇವೆ. ಸೆಪ್ಟೆಂಬರ್ 25ರಿಂದ ಈ ಫೋನ್ಅನ್ನು ಜಾರ್ಖಂಡ್ನಲ್ಲಿ ಬಳಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಆದರು ಅರ್ಕೋಬರ್ನಲ್ಲಿ ಆರ್ಡರ್ ಮಾಡಲಾಗಿದೆ. ಮಾರಾಟಗಾರರನ್ನು ಸಂಪರ್ಕಿಸಿದ ಬಳಿಕ ಫೋನ್ ಸ್ಟಾಕ್ ಮುಗಿದಿದೆ. ಗ್ರಾಹಕರು ಪಾವತಿಸಿದ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.
ಇದನ್ನು ಓದಿ:
Viral News: ಮನೆಯ ಹಿಂಭಾಗದಲ್ಲಿ 90ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕಂಡು ಬೆಚ್ಚಿಬಿದ್ದ ಮಹಿಳೆ!
Published On - 11:52 am, Mon, 25 October 21