BMTC: ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗೋದು ಹೀಗೆ

ಈ ಸರ್ಕಾರಿ ಬಸ್ಸುಗಳು ಧೂಳಿನಿಂದ ತುಂಬಿರುತ್ತವೆ, ಅಲ್ಲದೆ  ಕೆಲವೊಬ್ಬರು ಗೂಡ್ಕಾ ಅಡಿಕೆ ಎಲೆ ತಿಂದು ಕಿಟಲಿ ಪಕ್ಕದಲ್ಲೇ ಉಗಿದಿರುತ್ತಾರೆ, ಇದನ್ನೆಲ್ಲಾ ಪ್ರತಿನಿತ್ಯ ಸ್ವಚ್ಛಗೊಳಿಸುವುದಿಲ್ಲ ಎಂಬಿತ್ಯಾದಿ ಕಾರಣಗಳಿಂದ ಅನೇಕರು ಸರ್ಕಾರಿ ಬಸ್ಸುಗಳಲ್ಲಿ  ಓಡಾಡಲು ಮೂಗು ಮುರಿಯುತ್ತಾರೆ. ಆದ್ರೆ ನಿಮಗೆ ಗೊತ್ತಾ ಪಯಾಣಿಕರಿಗೆ ಸೇವೆಯನ್ನು ಒದಗಿಸುವ ಮುನ್ನ ಪ್ರತಿನಿತ್ಯ ಸರ್ಕಾರಿ ಬಸ್ಸುಗಳನ್ನು ಎಷ್ಟು ಸ್ವಚ್ಛಗೊಳಿಸಲಾಗುತ್ತೆ ಅಂತಾ, ಇಲ್ಲಿದೆ ನೋಡಿ ವಿಡಿಯೋ .

BMTC: ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗೋದು ಹೀಗೆ
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 19, 2023 | 4:24 PM

ಕೆಲವೊಬ್ಬರು  ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಕೆ ಮಾಡುವುದು ತೀರಾ ಕಡಿಮೆ, ಯಾವಾಗಲೂ  ಖಾಸಗಿ ವಾಹನಗಳಲ್ಲಿಯೇ ಓಡಾಡುತ್ತಿರುತ್ತಾರೆ. ಅದ್ರಲ್ಲೂ ಕೆಲವೊಬ್ಬರು ಸರ್ಕಾರಿ ಬಸ್ಸುಗಳು ಧೂಳಿನಿಂದ ತುಂಬಿರುತ್ತವೆ,  ಬಸ್ ಸೀಟುಗಳಲ್ಲಿಯೂ ಕೂಡಾ ಧೂಳು ಗಲೀಜು ಹಾಗೇನೆ ಇರುತ್ತವೆ, ಅಲ್ಲದೆ ಕೆಲವು ಪ್ರಯಾಣಿಕರು ಗೂಡ್ಕಾ, ಎಲೆ ಅಡಿಕೆ ತಿಂದು ಕಿಟಕಿ ಪಕ್ಕದಲ್ಲಿಯೇ ಉಗಿದಿರುತ್ತಾರೆ, ಇದನ್ನೆಲ್ಲಾ ಸಿಬ್ಬಂದಿಗಳು ಪ್ರತಿನಿತ್ಯ ಸ್ವಚ್ಛಗೊಳಿಸುವುದಿಲ್ಲ  ಎಂಬ ಕಾರಣಕ್ಕೆ ಸರ್ಕಾರಿ ಬಸ್ಸುಗಳಲ್ಲಿ ಓಡಾಡಲು ಒಲ್ಲೇ ಎನ್ನುತ್ತಾರೆ. ಆದ್ರೆ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ಮುನ್ನ ಬಸ್ಸುಗಳನ್ನು ಸ್ವಚ್ಛಗೊಳಿಸಿ ಹೇಗೆ ಸಿದ್ಧಗೊಳಿಸಲಾಗುತ್ತದೆ ಗೊತ್ತಾ,  ಇಲ್ಲಿದೆ ನೋಡಿ ವಿಡಿಯೋ

ಈ ಒಂದು ವಿಶೇಷ ವಿಡಿಯೋವನ್ನು  ಬಿ.ಎಂ.ಟಿ.ಸಿ  (@BMTC_BENGALURU) ತನ್ನ ಅಧೀಕೃತ  X ಖಾತೆಯಲ್ಲಿ ಹಂಚಿಕೊಂಡಿದೆ.  ಹಾಗೂ ನೋಡಿ ಸ್ವಾಮಿ ನಿಮ್ಮ ಸೇವೆಗೂ ಮುನ್ನ ನಾವು ರೆಡಿಯಾಗುವುದು ಹೇಗೆ? Switch to public transport” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.  ವಿಡಿಯೋದಲ್ಲಿ ಪ್ರತಿನಿತ್ಯ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ಮುನ್ನ ಸರ್ಕಾರಿ ಬಸ್ಸುಗಳನ್ನು ಹೇಗೆಲ್ಲಾ ಸ್ವಚ್ಛಗೊಳಿಸುಲಾಗುತ್ತದೆ ಎಂಬುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

53 ಸೆಕೆಂಡುಗಳ ಈ  ವಿಡಿಯೋದಲ್ಲಿ ಸ್ವಚ್ಛತಾ ಸಿಬ್ಬಂದಿಗಳು  ಬಸ್ಸಿನ ಪ್ರತಿಯೊಂದು ಸೀಟುಗಳನ್ನು ಸಾಬೂನು ನೀರಿನಿಂದ ತಿಕ್ಕಿ ತೊಳೆಯುವುದನ್ನು ಹಾಗೂ ಪ್ರತಿಯೊಂದು ಕಿಟಕಿ ಗ್ಲಾಸ್​​ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಟೊಮೆಟೊ ಕೆಚಪ್ ಅಂದ್ರೆ ಇಷ್ಟಾನಾ? ಈ ವಿಡಿಯೋ ನೋಡಿದ್ರೆ ಕೆಚಪ್ ತಿನ್ನಲ್ಲ 

ಡಿಸೆಂಬರ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16.4K ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಿಬ್ಬಂದಿಗಳಿಗೆ ಬರಿಗೈಯಲ್ಲೇ ಕೆಲಸ ಮಾಡುವುದಕ್ಕಿಂತ, ಕೈಗವಸುಗಳನ್ನು ನೀಡಬಹುದಲ್ಲವೇʼ ಎಂದು  ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ವಂದನೆಗಳು… ದಯಮಾಡಿ ಎಲ್ಲಾ ಡಿಪೋಗಳಲ್ಲೂ ಎಲ್ಲಾ ಬಸ್​​ಗಳನ್ನು ಹೀಗೆ ಸ್ವಚ್ಛಗೊಳಿಸಿʼ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಇದು ಒಳ್ಳೆಯ ಕೆಲಸ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: