ಬ್ರೇನ್ ಡೆಡ್ ಆದ ಮಹಿಳೆ 3 ಜನರ ಜೀವ ಉಳಿಸಿದಳು; ಮನಮಿಡಿಯುವ ಕಥೆಯಿದು

| Updated By: shruti hegde

Updated on: Sep 23, 2021 | 11:32 AM

Viral News: 2019ರಲ್ಲಿ 700 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿವೆ. ಕೊವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಅಂಗಾಂಗ ದಾನದಲ್ಲಿ ಶೇ. 70ರಷ್ಟು ಕುಸಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬ್ರೇನ್ ಡೆಡ್ ಆದ ಮಹಿಳೆ 3 ಜನರ ಜೀವ ಉಳಿಸಿದಳು; ಮನಮಿಡಿಯುವ ಕಥೆಯಿದು
ಸಂಗ್ರಹ ಚಿತ್ರ
Follow us on

ಗುರಗಾಂವ್​ನ 44 ವರ್ಷದ ಮಹಿಳೆ ಬುಧವಾರ ಮೂವರಿಗೆ ಹೊಸ ಬದುಕನ್ನು ನಿಡಿದ್ದಾರೆ. ಮಹಿಳೆಗೆ ಬ್ರೇನ್ ಡೆಡ್ ಆಗಿದೆ ಎಂಬ ವಿಷಯ ತಿಳಿದ ನಂತರ ಮನೆಯವರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಮಹಿಳೆಯ ಯಕೃತ್ತು ಮತ್ತು ಮೂತ್ರಪಿಂಡವನ್ನು ಕಸಿ ಮಾಡಿದ ನಂತರ ಮೂವರು ಹೊಸ ಬದುಕನ್ನು ಕಂಡುಕೊಂಡಿದ್ದಾರೆ. ಪ್ರಸ್ತುತ ಕೊವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆಗಳು ಕುಸಿಯುತ್ತಿರುವ ಈ ಸಮಯದಲ್ಲಿ ಪ್ರಗತಿಯ ಹೆಜ್ಜೆ ಎಂದು ವೈದ್ಯರು ಮಾತನಾಡಿದ್ದಾರೆ. ಈ ಕುರಿತಾದ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಸೆಪ್ಟೆಂಬರ್ 15ರ ರಾತ್ರಿ ಗುರುಗಾಂವ್​ನ ಫೋರ್ಟಿಸ್ ಮೆಮೊರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್​ಗೆ (ಎಫ್ಎಂಆರ್​ಐ​) ದಾಖಲಾಗಿದ್ದ ಮಹಿಳೆಯ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರ ಪರಿಶೀಲನೆಯ ನಂತರ ತಿಳಿದು ಬಂದಿದೆ. ಆಕೆಯ ಮೆದುಳಿನಲ್ಲಿ ರಕ್ತಸ್ರಾವ ಉಂಟಾದ ಪರಿಣಾಮ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಅಂಗಾಂಗಳಿಂದ ಬೇರೆಯವರಿಗೆ ಬದುಕಲು ಅವಕಾಶ ಮಾಡಿಕೊಡಲು ಮನೆಯವರು ನಿರ್ಧರಿಸಿ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.

ರೋಗಿಯ ಕುಟುಂಬದವರು ಆಕೆಯ ಅಂಗಾಂಗಳನ್ನು ದಾನ ಮಾಡಲು ಒಪ್ಪಿದರು. ಗುರಗಾಂವ್​ನಲ್ಲಿ 38 ವರ್ಷದ ಮಹಿಳೆಗೆ ಮೂತ್ರಪಿಂಡ ಮತ್ತು 52 ವರ್ಷದ ಮಹಿಳೆಗೆ ಯಕೃತ್ತು ಅಂಗವನ್ನು ಕಸಿ ಮಾಡಲಾಗಿದೆ. ಎರಡನೇ ಮೂತ್ರಪಿಂಡವನ್ನು ದೆಹಲಿಯಲ್ಲಿ 43 ವರ್ಷದ ಮಹಿಳೆಗೆ ಕಸಿ ಮಾಡಲಾಯಿತು ಎಂಬ ಮಾಹಿತಿ ತಿಳಿದು ಬಂದಿದೆ.

2019ರಲ್ಲಿ 700 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿವೆ. ಕೊವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಅಂಗಾಂಗ ದಾನದಲ್ಲಿ ಶೇ. 70ರಷ್ಟು ಕುಸಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:

World Organ Donation Day 2021: ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ, ನೀವೂ ಹಾಕಿ – ಸಿಎಂ ಬೊಮ್ಮಾಯಿ

(Doctor declared brain dead gurgaon woman donating kidney liver and saves three lives viral news)

Published On - 11:29 am, Thu, 23 September 21