Viral Video : ಶಿವಮಂದಿರದಲ್ಲಿ ಮೇಕೆಯೊಂದು ಮೊಣಕಾಲೂರಿ ನಮಸ್ಕರಿಸುವ ವಿಡಿಯೋ ನೋಡಿದ್ದೀರಿ. ನಾಯಿಯೊಂದು ದೇವಸ್ಥಾನದ ಘಂಟೆ ಬಾರಿಸುವುದನ್ನು ನೋಡಿದ್ದೀರಿ. ತನ್ನ ಪೋಷಕ ಕಾಲುಮುರಿದುಕೊಂಡು ಕುಂಟುತ್ತಿರುವಾಗ ಅವನಿಗೆ ಸಾಥ್ ಕೊಡಲು ತಾನೂ ಕುಂಟುತ್ತಿದ್ದ ನಾಯಿಯ ವಿಡಿಯೋ ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ನಾಯಿಯು ತನ್ನ ಪೋಷಕನೊಂದಿಗೆ ದೇವಸ್ಥಾನಕ್ಕೆ ಹೋಗಿದೆ. ಅಲ್ಲಿ ತಲೆಬಾಗಿ ಗಣೇಶನಿಗೆ ನಮಸ್ಕರಿಸಿದೆ.
1 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ದಾರಿಹೋಕರೊಬ್ಬರು ಈ ಅಪರೂಪದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಆದರೆ ಇದು ಯಾವ ಊರಲ್ಲಿ ನಡೆದಿದೆ ಎಂಬ ಮಾಹಿತಿ ಇಲ್ಲ. ನೆಟ್ಟಿಗರು ಇದು ಪುಣೆಯಲ್ಲಿರುವ ಗಣೇಶ ದೇವಸ್ಥಾನ. ಈ ವಿಡಿಯೋದಲ್ಲಿರುವ ವ್ಯಕ್ತಿಯ ಹೆಸರು ವಿಶಾಲ್ ಎಂದಿದ್ದಾರೆ. ಈ ವಿಶಾಲ ದಗಡೂಶೇಟ್ ಗಣಪತಿಯ ಮಂದಿರದ ಬಳಿ ವಾಸವಾಗಿದ್ದರೆ ಎಂದೂ ಹೇಳಿದ್ದಾರೆ.
2,50,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿ ಮೆಚ್ಚಿದ್ದಾರೆ. ಮಾತು ಹೊಮ್ಮದೆ ಎಮೋಟಿಕಾನ್ಗಳ ಸುರಿಮಳೆ ಸುರಿಸಿದ್ದಾರೆ.
ನಿಮ್ಮನ್ನು ಮಕ್ಕಳಷ್ಟೇ ಅಲ್ಲ ಪ್ರಾಣಿಗಳೂ ಅನುಕರಿಸುತ್ತವೆ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:33 am, Tue, 15 November 22