viral video: ಕಾರು ಪಾರ್ಕ್ ಮಾಡಲು ಸಹಾಯ ಮಾಡುತ್ತಿರುವ ನಾಯಿಯ ಚತುರತೆಗೆ ನೆಟ್ಟಿಗರ ಪ್ರಶಂಸೆ
ನಾಯಿಗಳು ಯೋಗ ಮಾಡುತ್ತಿರುವುದು, ಕಾರು ಓಡಿಸುವ ದೃಶ್ಯವನ್ನು ಈಗಾಗಲೇ ನೋಡಿಯೇ ಇರುತ್ತೀರಿ. ಅದೇ ರೀತಿ ಇಲ್ಲೊಂದು ನಾಯಿ ಕಾರು ಪಾರ್ಕ್ ಮಾಡಲು ಸಹಾಯ ಮಾಡುತ್ತಿದೆ.
ಪ್ರಾಣಿಗಳ ಚತುರತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಮಾನವ ಹೇಳಿದಂತೆ ಕೇಳುತ್ತ ತನ್ನ ಕರ್ತವ್ಯ ಪಾಲನೆಗೆ ಧಕ್ಕೆ ಆಗದಂತೆ ನಿಯತ್ತಿಗೆ ಹೆಸರಾಗಿ ವರ್ತಿಸುವ ಪ್ರಾಣಿ ನಾಯಿ. ಅಂತಹುದೇ ಒಂದು ನಾಯಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಯಿಯ ಚತುರತೆ ನೋಡುಗರಿಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುವಂತಿದೆ. ಕಾರನ್ನು ಸುರಕ್ಷಿತವಾಗಿ ಪಾರ್ಕ್ ಮಾಡಲು ನಾಯಿ ಸಹಾಯ ಮಾಡುವ ವಿಡಿಯೋ ನೋಡಿದ ನೆಟ್ಟಿಗರು ಶ್ಲಾಘಿಸಿದ್ದಾರೆ.
ನಾಯಿಗಳು ಯೋಗ ಮಾಡುವ ದೃಶ್ಯ, ಕಾರು ಓಡಿಸುವ ದೃಶ್ಯವನ್ನು ಈಗಾಗಲೇ ನೋಡಿಯೇ ಇರುತ್ತೀರಿ. ಹೇಳಿದ ಮಾತು ಕೆಳುತ್ತಾ ಮನೆಯ ಪಾಲಕನಾಗಿ ಕೆಲಸ ನಿರ್ವಹಿಸುತ್ತದೆ. ಅದೇ ರೀತಿ ಇಲ್ಲೊಂದು ನಾಯಿ ಮನೆಯ ಮಾಲಿಕ ಕಾರು ಪಾರ್ಕ್ ಮಾಡಲು ಸಹಾಯ ಮಾಡುತ್ತಿದೆ.
the best barking sensor you can get pic.twitter.com/Lyz8uyW0nY
— Humor And Animals (@humorandanimals) May 19, 2021
ಪಾದಾಚಾರಿ ಮಾರ್ಗದಲ್ಲಿ ಕುಳಿತು ನಾಯಿ ಸನ್ನೆಯ ಮೂಲಕ ಕಾರಿನ ಚಾಲಕನಿಗೆ ಮಾರ್ಗ ಹೇಳುತ್ತಿದೆ. ನಿಧಾನವಾಗಿ ಕಾರು ಹಿಂದಕ್ಕೆ ಬರುವಂತೆ ಸೂಚನೆ ನೀಡುತ್ತಿದೆ. ನಂತರ ಕಾರು ನಿಲ್ಲುವ ಸಮಯದಲ್ಲಿ ಜೋರಾಗಿ ಬೊಗಳುತ್ತದೆ. ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ನಾಯಿಯ ಚಾಕಚಕ್ಯತೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಾನವರು ಮಾರ್ಗ ಸೂಚಿಸಿದಂತೆಯೇ ಈ ನಾಯಿಯೂ ಸಹ ಸರಿಯಾದ ಮಾರ್ಗವನ್ನು ಸೂಚಿಸುತ್ತಿದೆ. ಕಾರು ನಿಲ್ಲುವ ಸಂದರ್ಭದಲ್ಲಿ ಜೋರಾಗಿ ಬೊಗಳುತ್ತದೆ ಎಂದು ಓರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೋರ್ವರು, ಈ ನಾಯಿ ತುಂಬಾ ಬುದ್ಧಿವಂತಿಕೆಯ ನಾಯಿ ಎಂದು ಮೆಚ್ಚುಗೆ ಹೊರಹಾಕಿದ್ದಾರೆ. ಈ ವಿಡಿಯೋದ ಜತೆಗೆ ಇನ್ನಿತರ ವಿಡಿಯೋಗಳನ್ನು ಹಂಚಿಕೊಂಡು ರಿಟ್ವೀಟ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ ಸುಮಾರು 32 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಇದನ್ನೂ ಓದಿ:
Viral Video: ಈ ನಾಯಿ ನಿಜವಾಗಿಯೂ ಯೋಗಾಸನ ಮಾಡುತ್ತಿದೆ! ವಿಡಿಯೋ ಆಯ್ತು ವೈರಲ್
Viral Video: ನಾಯಿ ಮತ್ತು ಜಿಂಕೆಯ ಸ್ನೇಹ ನೆಟ್ಟಿಗರ ಹೃದಯ ಗೆದ್ದಿದೆ
Published On - 4:58 pm, Sun, 23 May 21