AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ವಾರ್ಷಿಕೋತ್ಸವಕ್ಕೆ ಪತಿಯ ಉಡುಗೊರೆ; ಮತ್ತೊಮ್ಮೆ ಕಣ್ಣುಜ್ಜಿ ನೋಡಿ ಇದು ನಿಜವಾಗಿಯೂ ಚಿನ್ನದ ಹಾರವೇ?

ಈ ಹಾರದ ಹಿಂದಿನ ಕಥೆ ಏನಿರಬಹುದು? ಮದುವೆ ವಾರ್ಷಿಕೋತ್ಸವದ ಸಂಭ್ರಮಕ್ಕೆ ನಿಜವಾಗಿಯೂ ಮನೆ ಯಜಮಾನ ಹೆಂಡತಿಗೆ ಇಷ್ಟುದ್ದದ ಚಿನ್ನದ ಹಾರ ಉಡುಗೊರೆಯಾಗಿ ನೀಡಲು ಸಾಧ್ಯವೇ?

Viral Video: ಮದುವೆ ವಾರ್ಷಿಕೋತ್ಸವಕ್ಕೆ ಪತಿಯ ಉಡುಗೊರೆ; ಮತ್ತೊಮ್ಮೆ ಕಣ್ಣುಜ್ಜಿ ನೋಡಿ ಇದು ನಿಜವಾಗಿಯೂ ಚಿನ್ನದ ಹಾರವೇ?
ಇದು ನಿಜವಾಗಿಯೂ ಚಿನ್ನದ ಹಾರವೇ?
shruti hegde
| Edited By: |

Updated on:May 24, 2021 | 1:04 PM

Share

ಚಿನ್ನ ಅಂದರೆ ಮಹಿಳೆಯರಿಗೆ ಇಷ್ಟ. ಮನೆಯಲ್ಲಿ ಸಡಗರ ಸಂಭ್ರಮ ಬಂದರೆ ಸಾಕು ಚಿನ್ನ ತೊಡಲು ಕಾಯುತ್ತಿರುತ್ತಾರೆ. ಅಂದವಾದ ಸೀರೆಯನ್ನುಟ್ಟು, ಚಿನ್ನದ ಸರ, ಬಳೆ ತೊಟ್ಟು ಅಲಂಕರಿಸಿಕೊಳ್ಳುವುದರಲ್ಲಿ ಮಹಿಳೆಯರು ಎತ್ತಿದಕೈ. ಚಿನ್ನದ ಹಾರಕ್ಕೆ ಸಂಬಂಧಿಸಿದಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ.  ಯಜಮಾನ ಮದುವೆ ವಾರ್ಷಿಕೋತ್ಸವಕ್ಕೆ ತನ್ನ ಹೆಂಡತಿಗೆ ಚಿನ್ನದ ಬಣ್ಣದ ಹಾರ ಕೊಟ್ಟಿದ್ದಾನೆ. ಆದರೆ ಇಷ್ಟು ಉದ್ದ ಚಿನ್ನದ ಹಾರ ನೀಡಲು ಸಾಧ್ಯವೇ? ಊಹಿಸಲೂ ಸಾಧ್ಯವಿಲ್ಲ. ಫೋಟೋದಲ್ಲಿ ನೋಡುವಂತೆ ಮಹಿಳೆ ಹಾಕಿಕೊಂಡ ಚಿನ್ನದ ತರಹದ ಹಾರ ನಿಜವಾಗಿಯೂ ಚಿನ್ನದ ಹಾರವೇ? ಎಂಬುದು ಒಂದು ಕ್ಷಣ ಬೆರಗಾಗುವಂತೆ ಮಾಡುತ್ತದೆ.

ಹಾಗಾದರೆ ಈ ಹಾರದ ಹಿಂದಿನ ಕಥೆ ಏನಿರಬಹುದು? ಮದುವೆ ವಾರ್ಷಿಕೋತ್ಸವದ ಸಂಭ್ರಮಕ್ಕೆ ನಿಜವಾಗಿಯೂ ಮನೆ ಯಜಮಾನ ಹೆಂಡತಿಗೆ ಇಷ್ಟುದ್ದದ ಚಿನ್ನದ ಹಾರ ಉಡುಗೊರೆಯಾಗಿ ನೀಡಲು ಸಾಧ್ಯವೇ?

ಪತಿ ಮತ್ತು ಪತ್ನಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತೊಡಗಿರುತ್ತಾರೆ. ಇಬ್ಬರೂ ಕೂಡಾ ಕೇಕ್​ ಕತ್ತರಿಸುತ್ತಾರೆ. ಆ ಬಳಿಕ ಪತ್ನಿ ಉದ್ದವಾದ ಚಿನ್ನದ ತರಹದ ಹಾರವನ್ನು ಧರಿಸಿಕೊಂಡು ಬರುತ್ತಾಳೆ. ಅವಳು ಧರಿಸಿಕೊಂಡಿರುವ ಹಾರವನ್ನು ನೀವು ಇನ್ನೆಲ್ಲೂ ನೋಡಿರಲಿಕ್ಕಿಲ್ಲ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ಪೊಲೀಸ್​ ವಿಚಾರಣೆಯವರೆಗೆ ಕರೆದೊಯ್ದಿದೆ. ತನಿಖೆಯ ಬಳಿಕ ಚಿನ್ನದ ಬಣ್ಣ ಹೊಂದಿರುವ ಹಾರವು ನಕಲಿಯದ್ದು ಎಂಬುದು ಬೆಳಕಿಗೆ ಬಂದಿದೆ.

‘ನನ್ನನ್ನು ಪೊಲೀಸ್​ಠಾಣೆಗೆ ಕರೆಸಿದ್ದರು. ಇದ್ದ ವಿಷಯವನ್ನು ನಾನು ಅವರಲ್ಲಿ ಹೇಳಿದ್ದೇನೆ. ಹಾರದ ಹಿಂದಿನ ಸತ್ಯವನ್ನೂ ನಾನು ಅವರಿಗೆ ತಿಳಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಬಹಳ ವರ್ಷಗಳ ಹಿಂದಿನಿಂದಲೇ ನಾನು 38,000 ರೂಪಾಯಿ ಕೊಟ್ಟು ಹಾರವನ್ನು ಕೊಂಡಿದ್ದೇನೆ. ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೆಂಡತಿ ಅದನ್ನು ಧರಿಸಿದ್ದರು’ ಎಂದು ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

‘ನಾವು ಚಿನ್ನವನ್ನು ಪರಿಶೀಲಿಸಿದ್ದೇವೆ. ಆಭರಣ ವ್ಯಾಪರಿ ಅವರೊಂದಿಗೂ ಮಾತನಾಡಿದ್ದೇವೆ. ಅದು ನಿಜವಾಗಿಯೂ ಚಿನ್ನದಿಂದ ಮಾಡಲ್ಪಟ್ಟಿಲ್ಲ. ಭದ್ರತೆಯ ದೃಷ್ಟಿಯಿಂದ ಮನೆ ಯಜಮಾನರನ್ನು ಪೊಲೀಸ್​ಠಾಣೆಗೆ ಕರೆಸಲಾಗಿತ್ತು ಎಂದು ಪೊಲೀಸ್​ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿಗೆ ಜೋಡಿಯಾದ ಕ್ರಿಕೆಟಿಗ ಡೇವಿಡ್​ ವಾರ್ನರ್​; ಫ್ಯಾನ್ಸ್​ ಮೆಚ್ಚಿದ ವಿಡಿಯೋ ವೈರಲ್​

Nora Fatehi: ತೌಕ್ತೆ ಚಂಡಮಾರುತದಲ್ಲೂ ಹಾಟ್​​ ಬೆಡಗಿಯ ಡ್ಯಾನ್ಸ್​ ಅನುಕರಿಸಿ ವೈರಲ್​ ಆದ ಯುವಕ

Published On - 1:18 pm, Sun, 23 May 21