Viral Video : ‘ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ’

Dog : ಇತ್ತೀಚೆಗೆ ನಾಯಿಗಳು ಸಂಗೀತದ ಕಡೆ ಹೆಚ್ಚು ಒಲವನ್ನು ತೋರಿಸುತ್ತಿವೆ. ಮುಂದೊಂದು ದಿನ ನಾಯಿಗಳ ಸಂಗೀತ ಕಛೇರಿಗಳು ಸಾರ್ವಜನಿಕವಾಗಿ ಏರ್ಪಟ್ಟರೆ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video : ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ
ಪಿಯಾನೋ ನುಡಿಸುತ್ತಿರುವ ನಾಯಿ
Edited By:

Updated on: May 20, 2023 | 11:40 AM

Dog : ಮಕ್ಕಳು ಹೇಗೆ ದೊಡ್ಡವರನ್ನು ಅನುಕರಿಸುತ್ತವೆಯೋ ಹಾಗೆಯೇ ಸಾಕುಪ್ರಾಣಿಗಳು ತಮ್ಮ ಮನೆಯವರನ್ನು ಅನುಕರಿಸಲು ಪ್ರಯತ್ನಿಸುತ್ತವೆ. ಅದರಲ್ಲೂ ಸಂಗೀತಪ್ರಿಯರ ಅಥವಾ ಸಂಗೀತ ಕಲಾವಿದರ ಮನೆಯಲ್ಲಿರುವ ನಾಯಿಗಳಂತೂ ಅವಕಾಶ ಸಿಕ್ಕಾಗೆಲ್ಲ ಹಾಡುವುದಕ್ಕೆ ದನಿಗೂಡಿಸಲು ಪ್ರಯತ್ನಿಸುತ್ತವೆ. ಕೆಲ ದಿನಗಳ ಹಿಂದೆ ಹಸ್ಕಿಯಮ್ಮ ತನ್ನ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು ದನಿ ಏರಿಸಿ ಹಾಡುವುದನ್ನ ಕಲಿಸುತ್ತಿದ್ದ ವಿಡಿಯೋ ನೀವು ನೋಡಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ನಾಯಿ ಪಿಯಾನೋ ನುಡಿಸುತ್ತ, ಸ್ವರಕ್ಕೆ ತನ್ನ ದನಿ ಸೇರಿಸುತ್ತಿದೆ.

ಈ ವಿಡಿಯೋ ಅನ್ನು ಮೇ 10 ರಂದು ಪೋಸ್ಟ್ ಮಾಡಲಾಗಿದೆ. ಈತನಕ 2 ಮಿಲಿಯನ್​​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ನಾಯಿ ನನಗಿಂತಲೂ ಪ್ರತಿಭಾವಂತ ಇದೆ ಎಂದು ಹೇಳಿದ್ದಾರೆ. ಒಬ್ಬರು. ಅವನಿಗೆ ಪರ್ಸನಲ್​ ಸ್ಪೇಸ್​ ಕೊಡಿ ಸಂಗೀತಾಭ್ಯಾಸ ಮಾಡುತ್ತಿದ್ದಾನೆ ಅವನು ಎಂದಿದ್ದಾರೆ ಇನ್ನೊಬ್ಬರು. ಒಬ್ಬನೇ ಇರುವಾಗ ಅವ ಹೀಗೆ ಹಾಡುತ್ತಾನೇನೋ ಅಲ್ಲವಾ? ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ನಾನ್​ ಕಲಿಯುಗದ ಕ್ಯಾಟ್​, ನಾ ಪೇಳ್ವಂತೆ ನೀ ಕೇಳ್​​ ಮಾನವಾ!

ಇತ್ತೀಚೆಗೆ ನಾಯಿಗಳು ಸಂಗೀತದ ಕಡೆ ಹೆಚ್ಚು ಒಲವನ್ನು ತೋರಿಸುತ್ತಿವೆ. ಮುಂದೊಂದು ದಿನ ನಾಯಿಗಳ ಸಂಗೀತ ಕಛೇರಿಗಳು ಸಾರ್ವಜನಿಕವಾಗಿ ಏರ್ಪಟ್ಟರೆ ಅಚ್ಚರಿ ಪಡಬೇಕಿಲ್ಲ ಎಂದಿದ್ಧಾರೆ ಮತ್ತೂ ಒಬ್ಬರು. ಪ್ರಾಣಿಗಳೂ ವಿಕಾಸಗೊಳ್ಳುತ್ತಿವೆ. ಪರಿಸರ, ತಂತ್ರಜ್ಞಾನದ ಪ್ರಭಾವ ಅವುಗಳ ಮೇಲೆ ಹೆಚ್ಚಾಗುತ್ತಿದೆ ಎಂದು ಅನೇಕರು ಹೇಳಿದ್ಧಾರೆ.

ಬೀದಿಯ ನಾಯಿಗಳು ನಡುರಸ್ತೆಯಲ್ಲಿ ಸಂಗೀತ ಗೋಷ್ಠಿ ಮಾಡುತ್ತವೆ. ಮನೆಯೊಳಗಿನ ನಾಯಿಗಳು ಎಲ್ಲಿ ಮಾಡಬೇಕು?!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:22 am, Sat, 20 May 23