Kindness : ಆಹಾ! ಅದೃಷ್ಟ ಎಂದರೆ ಇದು, ನಾನಿದ್ದಲ್ಲಿಯೇ ಬಂದು ಬಿದ್ದಿತಲ್ಲ ಈ ಕೇಸರಿಮೀನು (Fish) ಎಂದು ಆ ನಾಯಿ ಗುಳುಮ್ಮಿಸಿದ್ದರೆ ಅದು ಆಸೆ ಮತ್ತು ಸ್ವಾರ್ಥ. ಅಯ್ಯೋ ಈ ಮೀನು ನೀರಿನಲ್ಲಿರುವುದು ಬಿಟ್ಟು ಇಲ್ಲಿಗೇಕೆ ಬಂದಿದೆ? ಎಂದು ಅದನ್ನು ನೀರಿನಲ್ಲಿ ಬಿಟ್ಟು ಹೋಗುವುದು ಕರ್ತವ್ಯ. ಬಾಯಿಯಿಂದ ಹಿಡಿದು ಎತ್ತಿ ನೀರಿಗೆ ಹಾಕಿದ ಮೇಲೂ ಮೀನು ಯಾಕೆ ಈಜುತ್ತಿಲ್ಲ? ಎಂದು ಚಡಪಡಿಸುವುದು, ಅದು ಮಿಸುಕಾಡಲಿ ಎಂದು ಪ್ರಯತ್ನಿಸುವುದು ಇದೆಯಲ್ಲ ಅದು ಸಹಾನುಭೂತಿ, ಪ್ರೀತಿ ಮತ್ತು ಅಂತಃಕರಣ.
ಒಮ್ಮೆ ಈ ಮೀನಿನ ಎದೆಗೂಡಿನಿಂದ ಒಮ್ಮೆ ಉಸಿರು ಹೊಮ್ಮಿ ಅದು ಪಟಪಟಿಸಿದರೆ ಈ ನಾಯಿಗೆ ಅದೆಷ್ಟೋ ಸಮಾಧಾನವೆನ್ನಿಸುತ್ತಿತ್ತು. ಆದರೆ ಹಾಗಾಗಲಿಲ್ಲ. ದುರಾದೃಷ್ಟ, ಅದರ ಉಸಿರು ನಿಂತು ಹೋಗಿತ್ತು. ಮನುಷ್ಯರಿಗಿಂತ ಸೂಕ್ಷ್ಮಗ್ರಾಹಿಯೂ, ತಿಳಿವಳಿಕೆ ಮತ್ತು ಅಂತಃಕರಣವುಳ್ಳ ಈ ಪ್ರಾಣಿಯನ್ನು ನಾಯಿ ಎಂದು ಕರೆಯಲು ಕೂಡ ಮನಸ್ಸು ಬಾರದು. ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೋ ಅನ್ನು ಈ ತನಕ ಆರೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರ ಹೃದಯಗಳು ಈ ದೃಶ್ಯಕ್ಕೆ ಮರುಗಿವೆ.
ಇದನ್ನೂ ಓದಿ : Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ?
ಆ ಮೀನು ಅದರ ತಮ್ಮನಿದ್ದಂತೆ, ತಮ್ಮನನ್ನು ಅಣ್ಣ ತಿನ್ನುವುದಿಲ್ಲ. ಯಾಕೆ ಈ ನಾಯಿಗಳಿಗೆ ಮನುಷ್ಯರಿಗಿಂತ ಮಿಗಿಲಾದ ಹೃದಯ ಇದೆಯೋ. ಈ ಮೀನು ಮರಳಿ ಈಜುತ್ತದೆಯೆಂದು ನಿರೀಕ್ಷಿಸುತ್ತಿದ್ದೆ. ನಾನು ಮನುಷ್ಯರಿಗಿಂಥ ನಾಯಿಯನ್ನು ಹೆಚ್ಚು ಪ್ರೀತಿಸುತ್ತೇನೆ, ಅವುಗಳಿಗೆ ನನ್ನ ಹೃದಯದಲ್ಲಿ ಜಾಗ ಕೊಡುತ್ತೇನೆ… ಹೀಗೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ ನೆಟ್ಟಿಗರು.
ನೀವು ನಾಯಿಪ್ರೇಮಿಗಳಾಗಿದ್ದಲ್ಲಿ ಖಂಡಿತ ಈ ದೃಶ್ಯ ನಿಮ್ಮ ಕಣ್ಣಂಚನ್ನು ಈಗಾಗಲೇ ಒದ್ದೆ ಮಾಡಿರುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ