AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dog Walker: ಪ್ರತಿದಿನ ನಾಯಿಯನ್ನು ವಾಕಿಂಗ್​​​ ಕರೆದುಕೊಂಡು ಹೋಗುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಈ ಮಹಿಳೆ

ಕಾಫಿ ಕೆಫೆಯಲ್ಲಿ ಕೆಲಸಮಾಡುತ್ತಿದ್ದ ನಾರ್ವಿಚ್ ನಿವಾಸಿ ಗ್ರೇಸ್ ಬೆಣ್ಣೆ ಬರಿಸ್ಟಾ(28) ಕೆಲಸ ತೊರೆದು ತನ್ನ ಶ್ವಾನ ಪ್ರೀತಿಯ ಹವ್ಯಾಸವನ್ನು ವೃತ್ತಿಯನ್ನಾಗಿಸಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ.

Dog Walker: ಪ್ರತಿದಿನ ನಾಯಿಯನ್ನು ವಾಕಿಂಗ್​​​ ಕರೆದುಕೊಂಡು ಹೋಗುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಈ ಮಹಿಳೆ
Dog WalkerImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jan 27, 2024 | 1:27 PM

Share

ತನ್ನ ಹವ್ಯಾಸವನ್ನು ವೃತ್ತಿಯನ್ನಾಗಿಸಿ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಈ ಮಹಿಳೆ. ನಾಯಿಯ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿದ್ದ ಈ ಮಹಿಳೆ ಪ್ರಾರಂಭದಲ್ಲಿ ಪ್ರತಿದಿನ ಬಿಡುವಿನ ಸಮಯದಲ್ಲಿ ತನ್ನ ನಾಯಿಯೊಂದಿಗೆ ವಾಕಿಂಗ್​ ಹೋಗುತ್ತಿದ್ದಳು. ಆದರೆ ಈ ಅಭ್ಯಾಸವನ್ನೇ ಈಗ ವೃತ್ತಿಯನ್ನಾಗಿಸಿದ್ದಾಳೆ. ಕಾಫಿ ಕೆಫೆಯಲ್ಲಿ ಕೆಲಸಮಾಡುತ್ತಿದ್ದ ನಾರ್ವಿಚ್ ನಿವಾಸಿ ಗ್ರೇಸ್ ಬೆಣ್ಣೆ ಬರಿಸ್ಟಾ(28) ತನ್ನ ಈ  ಕೆಲಸವನ್ನು ತೊರೆದು  ಶ್ವಾನ ಪ್ರೀತಿಯ ಹವ್ಯಾಸವನ್ನು ವೃತ್ತಿಯನ್ನಾಗಿಸಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ.

ಒಂದು ದಿನ ಅವಳ ಸ್ನೇಹಿತ ತಮಾಷೆಯಾಗಿ ನೀನು ನಿನ್ನ ನಾಯಿಯನ್ನು ವಾಕಿಂಗ್​​​ಗೆ ಕರೆದುಕೊಂಡು ಹೋಗುವಾಗ, ನನ್ನ ಮನೆಯ ನಾಯಿಯನ್ನು ಏಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದ್ದಾರೆ. ಇಲ್ಲಿಂದ ಪ್ರಾರಂಭವಾದ ಈಕೆಯ ವೃತ್ತಿ ಇದೀಗಾ ದಿನದಲ್ಲಿ ನೂರಾರು ನಾಯಿಗಳನ್ನು ವಾಕಿಂಗ್​​ಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಬಂದು ತಲುಪಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಕುಕ್ಕೀಸ್​​​​ ಸೇವಿಸಿ ಸಾವನ್ನಪ್ಪಿದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ

2019 ರಲ್ಲಿ, ನಾಯಿಯನ್ನು ವಾಕಿಂಗ್​​​ ಕರೆದುಕೊಂಡು ಹೋಗುವ ವೃತ್ತಿಯನ್ನು ಪ್ರಾರಂಭಿಸಲು ಕಂಪನಿಯನ್ನು ತೆರೆದಳು. ಅವಳು ಪ್ರತಿದಿನ ಆರು ಗಂಟೆಗಳ ಕಾಲ ನಾಯಿಗಳನ್ನು ವಾಕಿಂಗ್​​ಗೆ ಕರೆದುಕೊಂಡು ಹೋಗುತ್ತಾಳೆ. ಅದಕ್ಕೆ ಪ್ರತಿಯಾಗಿ ನಾಯಿ ಮಾಲೀಕರು ಅವಳಿಗೆ ಹಣವನ್ನು ನೀಡುತ್ತಾರೆ. ಆರಂಭದಲ್ಲಿ ಕೇವಲ ಎರಡು-ನಾಲ್ಕು ಗ್ರಾಹಕರನ್ನು ಹೊಂದಿದ್ದ ಈಕೆ ಈಗ ನೂರಾರು ಗ್ರಾಹಕರನ್ನು ಹೊಂದಿದ್ದಾಳೆ. ಇದರಿಂದಾಗಿ ಅವರು 42 ಸಾವಿರ ಪೌಂಡ್ ಗಳಿಸುತ್ತಾಳೆ. ಖರ್ಚು ತೆಗೆದರೆ ಸುಮಾರು 34 ಲಕ್ಷ ರೂ. ಸಂಪಾದಿಸುತ್ತಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ