ನೀವು ಬೇರೆ ಬೇರೆ ಭಾಷೆಯಲ್ಲಿ ಮಾತನಾಡಿದರೂ ಶ್ವಾನಗಳು ಅರ್ಥ ಮಾಡಿಕೊಳ್ಳುತ್ತವೆ; ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ

| Updated By: shivaprasad.hs

Updated on: Jan 08, 2022 | 1:17 PM

ಶ್ವಾನಗಳು ಭಾಷೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲವು. ಅಷ್ಟೇ ಅಲ್ಲ, ಮನುಷ್ಯರ ಹೊರತಾಗಿ ಈ ಸಾಮರ್ಥ್ಯ ಹೊಂದಿರುವ ಏಕೈಕ ಪ್ರಾಣಿಗಳು ಅವಾಗಿವೆ ಎಂದಿದೆ ಒಂದು ಅಧ್ಯಯನ. ಇಲ್ಲಿದೆ ಕುತೂಹಲಕಾರಿ ಸಂಶೋಧನೆಯ ಮಾಹಿತಿ.

ನೀವು ಬೇರೆ ಬೇರೆ ಭಾಷೆಯಲ್ಲಿ ಮಾತನಾಡಿದರೂ ಶ್ವಾನಗಳು ಅರ್ಥ ಮಾಡಿಕೊಳ್ಳುತ್ತವೆ; ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ
ಸಂಶೋಧಕಿ ಲಾರಾ ವಿ ಕ್ಯುಯಾ ಮತ್ತು ಅವರ 8 ವರ್ಷದ ಶ್ವಾನ ಕುನ್ ಕುನ್ (Credits: Reuters)
Follow us on

ಶ್ವಾನಗಳು ವಿವಿಧ ಭಾಷೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದಿವೆ ಎಂದು ಹಂಗೇರಿಯ ಸಂಶೋಧಕರು ಕಂಡುಹಿಡಿದಿದ್ದಾರೆ. ‘ದಿ ಲಿಟಲ್ ಪ್ರಿನ್ಸ್’ ಕತೆಯನ್ನು ಸ್ಪಾನಿಷ್ ಮತ್ತು ಹಂಗೇರಿಯನ್ ಭಾಷೆಗಳಲ್ಲಿ ಸುಮಾರು 18 ವಿವಿಧ ಜಾತಿಯ ಶ್ವಾನಗಳಿಗೆ, ಅವು ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಅಧ್ಯಯನ ನಡೆಸಲಾಗಿತ್ತು. ಈ ಸಂಶೋಧನೆಯು ಬುಡಾಪೆಸ್ಟ್​​ನ ಒಟ್ವೋಸ್ ಲೋರಾಂಡ್ ವಿಶ್ವವಿದ್ಯಾಲಯದ ಡಾ.ಲಾರಾ ವಿ ಕ್ಯುಯಾ ನೇತೃತ್ವದಲ್ಲಿ ನಡೆಯಿತು. ಸಂಶೋಧಕಿ ಲಾರಾ ಕೆಲಕಾಲದ ಹಿಂದೆ ಮೆಕ್ಸಿಕೋದಿಂದ ಬುಡಾಪೆಸ್ಟ್​ಗೆ ತಮ್ಮ ಸಾಕುನಾಯಿ ಕುನ್ ಕುನ್ ಜತೆ ವಲಸೆ ಬಂದಿದ್ದರು. ಆ ಸಂದರ್ಭದಲ್ಲಿ ಕುನ್ ಕುನ್ ಬುಡಾಪೆಸ್ಟ್ ಜನರು ಮಾತನಾಡುವ ಹಂಗೇರಿಯನ್ ಭಾಷೆಯನ್ನು ಅರ್ಥ ಮಾಡಿಕೊಂಡಿತಂತೆ. ಇದು ಆಶ್ಚರ್ಯಕ್ಕೆ ಕಾರಣವಾಗಿತ್ತು ಎಂದಿದ್ದಾರೆ ಲಾರಾ.

ಅಧ್ಯಯನದಲ್ಲಿ ಬೆಳಕಿಗೆ ಬಂದಿರುವ ಮತ್ತೊಂದು ಅಚ್ಚರಿಯ ವಿಚಾರವೆಂದರೆ ಮನುಷ್ಯನ ಹೊರತಾದ ಪ್ರಾಣಿಯೊಂದು ಭಾಷೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದೆ. ಶ್ವಾನಗಳು ಹೇಗೆ ಭಾಷೆಯ ವ್ಯತ್ಯಾಸವನ್ನು ಗುರುತಿಸುತ್ತವೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಮನುಷ್ಯರ ಭಾಷೆಯನ್ನು ಅವು ಆಡಿಯೋ ಪ್ಯಾಟರ್ನ್​ನಂತೆ ಗ್ರಹಿಸುತ್ತವೆ ಎಂದು ಅಧ್ಯಯನದ ಸಹ ಲೇಖಕ ರೌಲ್ ಹೆರ್ನಾಂಡೆಜ್ ಪೆರೆಜ್ ಹೇಳಿದ್ದಾರೆ.

ಪ್ರಯೋಗದ ಸಮಯದಲ್ಲಿ ಕುನ್-ಕುನ್ ಮತ್ತು ಇತರ ಶ್ವಾನಗಳಿಗೆ ಮೆದುಳಿನ ಸ್ಕ್ಯಾನರ್‌ ಅಡಿಯಲ್ಲಿ ಯಾವುದೇ ಚಲನೆಯಿಲ್ಲದೆ ಹಲವು ನಿಮಿಷಗಳ ಕಾಲ ಮಲಗಲು ತರಬೇತಿ ನೀಡಲಾಯಿತು. ಪ್ರಯೋಗಕ್ಕೂ ಮುನ್ನ ಎಲ್ಲಾ ನಾಯಿಗಳು ತಮ್ಮ ಮಾಲೀಕರಿಂದ ಹಂಗೇರಿಯನ್ ಅಥವಾ ಸ್ಪ್ಯಾನಿಷ್- ಎರಡು ಭಾಷೆಗಳಲ್ಲಿ ಒಂದನ್ನು ಮಾತ್ರ ಕೇಳಿಸಿಕೊಂಡಿದ್ದವು. ಸಂಶೋಧನೆಯ ಮೂಲಕ ಶ್ವಾನಗಳು ಪರಿಚಿತ ಹಾಗೂ ಅಪರಿಚಿತ ಭಾಷೆಗೆ ಹೇಗೆ ಪ್ರತಿಕ್ರಿಯಿಸಿತು ಎಂದು ಹೋಲಿಸಿ ತೀರ್ಮಾನಕ್ಕೆ ಬರಲಾಯಿತು.

ಶ್ವಾನಗಳಿಗೆ ಸ್ಪ್ಯಾನಿಷ್ ಮತ್ತು ಹಂಗೇರಿಯನ್ ಭಾಷೆಯಲ್ಲಿ ಕಥೆಯ ಆಯ್ದ ಭಾಗಗಳನ್ನು ಕೇಳಿಸಿದಾಗ ಅವರು ಆಲಿಸಿದವು. ಜತೆಗೆ ಅವುಗಳ ಪ್ರತಿಕ್ರಿಯೆ ಗುರುತಿಸಲು ಮಾಮೂಲಿ ಮಾತನಾಡುವ ಮತ್ತು ಇದುವರೆಗೆ ಅವು ಕೇಳಿರದ ಭಾಷೆಗಳನ್ನೂ ಕೇಳಿಸಲಾಯಿತು. ಇವೆರಡಕ್ಕೆ ಹೇಗೆ ಪ್ರತಿಕ್ರಿಯಿಸಿವೆ ಎಂದು ಗುರುತಿಸಲಾಯಿತು. ಅದರಲ್ಲಿ ಶ್ವಾನಗಳು ಮಾಮೂಲಿ ಮಾತನಾಡುವ ಭಾಷೆಯನ್ನು ಹಾಗೂ ಮಾಮೂಲಿ ಮಾತನಾಡದ ಭಾಷೆಯ ವ್ಯತ್ಯಾಸವನ್ನು ಗುರುತಿಸಬಲ್ಲವು ಎಂದು ತಿಳಿದುಬಂತು.

ಅಧ್ಯಯನದಲ್ಲಿ ಮತ್ತೊಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಶ್ವಾನಗಳಿಗೆ ಗೊತ್ತಿರುವ ಹಾಗೂ ಗೊತ್ತಿರದ ಭಾಷೆಗಳಲ್ಲಿ ಮಾತನಾಡಿದಾಗ ಪ್ರತಿಕ್ರಿಯೆ ನೀಡುತ್ತವೆ ಆದರೆ ಅದು ಭಿನ್ನವಾಗಿರುತ್ತದೆ. ಅರ್ಥಾತ್ ಎರಡೂ ಭಾಷೆಗಳಿಗೆ ಅವುಗಳ ಪ್ರತಿಕ್ರಿಯೆಯಲ್ಲಿ ವ್ಯತ್ಯಾಸವಿರುತ್ತದೆ. ಹಾಗೆಯೇ ಶ್ವಾನಗಳಿಗೆ ವಯಸ್ಸಾದಂತೆ ಭಾಷೆಗಳ ನಡುವಿನ ವ್ಯತ್ಯಾಸ ಗುರುತಿಸುವ ಸಾಮರ್ಥ್ಯ ಅಧಿಕವಾಗುತ್ತದಂತೆ ಎಂಬ ಮಾಹಿತಿಯೂ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ:

ಚಿಪ್ಸ್ ಕವರ್​ನಿಂದ ಹೊದಿಕೆ ತಯಾರಿಸಿ ನಿರಾಶ್ರಿತರಿಗೆ ಹಂಚಿದ 11 ವರ್ಷದ ಬಾಲಕಿ; ಯಶಸ್ಸಿನ ಕಥನ ಇಲ್ಲಿದೆ

ಜ.9ರಿಂದ ‘ಗಾನ ಬಜಾನ 2’, ‘ಕಾಮಿಡಿ ಉತ್ಸವ’ ಶುರು; ಕಿರುತೆರೆಯಲ್ಲಿ ಮಸ್ತ್​ ಮನರಂಜನೆ