Viral Video : ಪ್ರಪಂಚದ ಅತೀ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ. ಈಗಾಗಲೇ ಈ ಕಟ್ಟಡವನ್ನು ನಾನಾ ಕೋನಗಳಿಂದ ಸೆರೆಹಿಡಿದ ವಿಡಿಯೋಗಳನ್ನು ಆನ್ಲೈನ್ನಲ್ಲಿ ನೋಡಿದ್ದೀರಿ. ಆದರೆ ಇದೀಗ ಡ್ರೋನ್ ಕ್ಯಾಮೆರಾದ ಮೂಲಕ ಡ್ರೋನ್ ಪೈಲಟ್ ಆಂಡ್ರ್ಯೆ ಲಾರ್ಸನ್ ಚಿತ್ರೀಕರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಒಂದೇ ಕಟ್ಟಡವನ್ನು ನೂರಾರು ಜನ ಚಿತ್ರೀಕರಿಸಿದರೂ, ಅವರವರ ಸೃಜನಶೀಲತೆಯ ಕಣ್ಣಿನಿಂದ ಅದು ಹೇಗೆ ಕ್ಯಾಮೆರಾದ ಮೂಲಕ ವ್ಯಕ್ತವಾಗುತ್ತದೆ ಎನ್ನುವುದರ ಮೇಲೆ ಅದು ವೈಶಿಷ್ಟ್ಯತೆ ಪಡೆದುಕೊಳ್ಳುತ್ತದೆ. ನೋಡಿ ಈ ವಿಡಿಯೋ.
ಈತನಕ ಎರಡು ಮಿಲಿಯನ್ ವೀಕ್ಷಕರು ಈ ಅದ್ಭುತವಾದ ವಿಡಿಯೋ ನೋಡಿದ್ದಾರೆ. ಇದು ಮಾತ್ರ ಎಪಿಕ್ ಡೈವ್ ಎಂದಿದ್ದಾರೆ ನೆಟ್ಟಿಗರೊಬ್ಬರು. ಇವರು ಅತ್ಯುತ್ತಮ ಡ್ರೋನ್ ಪೈಲಟ್ ಎಂದು ಇನ್ನೂ ಒಬ್ಬರು ಪ್ರಶಂಸಿಸಿದ್ದಾರೆ. ಜಗತ್ತಿನ ಅತೀ ಎತ್ತರದ ಕಟ್ಟಡದಿಂದ ನೀವು ಬೀಳುತ್ತಿದ್ದೀರೇನೋ ಎಂಬ ಭ್ರಮೆಯನ್ನು ಇದು ಹುಟ್ಟಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಇಷ್ಟು ಉತ್ತಮ ಗುಣಮಟ್ಟದ ಈ ವಿಡಿಯೋ ನೋಡಿದ ನಿಮಗೆ ಏನೆನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:18 pm, Fri, 14 October 22