ಅಪಘಾತಗಳು ಅಂದಾಕ್ಷಣ ಒಮ್ಮೆಲೆ ಮೈ ಜುಂ.. ಅನ್ನುತ್ತದೆ. ಒಂದು ಕ್ಷಣದಲ್ಲಿ ವಾಹನಗಳ ಅಪಘಾತವು ಜೀವವನ್ನೇ ಕಿತ್ತುಕೊಂಡು ಬಿಡುತ್ತದೆ. ಯಾರೋ ಒಬ್ಬರ ಅಜಾಗರೂಕತೆಯು ಇನ್ನೊಬ್ಬರ ಜೀವವನ್ನೇ ಕಿತ್ತುಕೊಂಡ ಘಟನೆಯನ್ನು ನಾವು ಕೇಳಿದ್ದೇವೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿಗೆ ಸರಿಯಾಗಿ ಜೂನ್ 27ರ ಬೆಳಿಗ್ಗೆ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವೇಗವಾಗಿ ಹಾಗೂ ಮದ್ಯಸೇವಿಸಿ ವಾಹನಗಳನ್ನು ಓಡಿಸುವುದು ಅಪಘಾತಕ್ಕೆ ಕಾರಣವಾಗಬಹುದು. ನಿರ್ಲಕ್ಷ್ಯದಿಂದ ವಾಹನ ಓಡಿಸುವುದು ಇನ್ನೊಬ್ಬರಿಗೆ ಹಾನಿಯುಂಟು ಮಾಡಬಹುದು. ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಘಟನೆಯೊಂದು ಆಘಾತವನ್ನುಂಟು ಮಾಡಿದೆ. ಪ್ರಯಾಣಿಕನ ಜೀವವನ್ನೇ ಕಿತ್ತುಕೊಂಡಿದೆ. ವಿಡಿಯೋವನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಂತೆಯೇ ಘಟನೆ ಬೆಳಕಿಗೆ ಬಂದಿದೆ.
ಜೋರಾದ ಮಳೆಯ ಅರ್ಭಟ. ಈ ಮಧ್ಯೆ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಆಟೋ ರಿಕ್ಷಾ ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಆಟೋ ರಿಕ್ಷಾ ಹಿಂಬದಿಯಿಂದ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋ ತಿರುಗಿ ತಿರುಗಿ ಬಿದ್ದಿರುವ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭೀಕರ ಅಪಘಾತದಲ್ಲಿ ಪ್ರಯಾಣಿಕ ಸಾವಿಗೀಡಾಗಿದ್ದಾನೆ. ಆಟೋ ಚಾಲಕ ಗಂಭೀರಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
Reckless speed and drunk driving of an Audi car kills a passenger (an employee of Prism Pub !! ) in the auto yesterday early morning near Inorbit Mall.
A case of culpable homicide not amounting to murder has been booked against the Audi driver and his associates.#RoadSafety pic.twitter.com/vhJfsiL9cS
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC) June 29, 2021
ಇದನ್ನೂ ಓದಿ:
ಸಂಚಾರಿ ವಿಜಯ್ ಬಳಿಕ ಮತ್ತೋರ್ವ ನಟನಿಗೆ ರಸ್ತೆ ಅಪಘಾತ; ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ
ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದ ದೆಹಲಿ-ಗೋವಾ ರಾಜಧಾನಿ ಎಕ್ಸ್ಪ್ರೆಸ್; ಬಂಡೆ ಬಿದ್ದಿದ್ದೇ ಅಪಘಾತಕ್ಕೆ ಕಾರಣ
Published On - 3:18 pm, Tue, 29 June 21