ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದ ದೆಹಲಿ-ಗೋವಾ ರಾಜಧಾನಿ ಎಕ್ಸ್​ಪ್ರೆಸ್​; ಬಂಡೆ ಬಿದ್ದಿದ್ದೇ ಅಪಘಾತಕ್ಕೆ ಕಾರಣ

ರತ್ನಗಿರಿ ಜಿಲ್ಲೆಯ ಉಕ್ಷಿ ಮತ್ತು ಭೋಕೆ ರೈಲ್ವೆ ಸ್ಟೇಶನ್​ಗಳ ಮಧ್ಯೆ ಸಿಗುವ ಕಾರ್ಬುಡೆ ಸುರಂಗ ಮಾರ್ಗದಲ್ಲಿ ಹಳಿಗಳ ಮೇಲೆ ಬಂಡೆ ಬಿದ್ದಿತ್ತು. ಇದರಿಂದಾಗಿ ರೈಲಿನ ಮುಂದಿನ ಚಕ್ರಗಳು ಹಳಿ ತಪ್ಪುವಂತಾಯಿತು ಎಂದು ರೈಲ್ವೆ ಡಿಪಾರ್ಟ್​​ಮೆಂಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದ ದೆಹಲಿ-ಗೋವಾ ರಾಜಧಾನಿ ಎಕ್ಸ್​ಪ್ರೆಸ್​; ಬಂಡೆ ಬಿದ್ದಿದ್ದೇ ಅಪಘಾತಕ್ಕೆ ಕಾರಣ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 26, 2021 | 1:27 PM

ದೆಹಲಿಯ ಹಜ್ರತ್​ ನಿಜಾಮುದ್ದೀನ್​ ಸ್ಟೇಶನ್​​ನಿಂದ ಗೋವಾದ ಮಡಗಾಂವ್​ಗೆ ತೆರಳುತ್ತಿದ್ದ, ಗೋವಾದ ರಾಜಧಾನಿ ಎಕ್ಸ್​​ಪ್ರೆಸ್​​ ರೈಲು ಅಪಘಾತಕ್ಕೀಡಾಗಿದೆ. ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಳಿ ಕಾರ್ಬುಡೆ​ ಸುರಂಗ ಮಾರ್ಗದಲ್ಲಿ ಚಲಿಸುವಾಗ ಹಳಿ ತಪ್ಪಿದೆ. ಯಾವ ಪ್ರಯಾಣಿಕರಿಗೂ ಜೀವಹಾನಿಯಾಗಿಲ್ಲ, ಗಾಯವೂ ಆಗಿಲ್ಲ ಎಂದು ಕೊಂಕಣ ರೈಲ್ವೆ ವಿಭಾಗದ ವಕ್ತಾರ ತಿಳಿಸಿದ್ದಾರೆ. ಹಳಿಗಳ ಮೇಲೆ ಬಂಡೆ ಬಿದ್ದಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಅವರು ಮಾಹಿತಿ ನೀಡಿದ್ದಾರೆ.

ರತ್ನಗಿರಿ ಜಿಲ್ಲೆಯ ಉಕ್ಷಿ ಮತ್ತು ಭೋಕೆ ರೈಲ್ವೆ ಸ್ಟೇಶನ್​ಗಳ ಮಧ್ಯೆ ಸಿಗುವ ಕಾರ್ಬುಡೆ ಸುರಂಗ ಮಾರ್ಗದಲ್ಲಿ ಹಳಿಗಳ ಮೇಲೆ ಬಂಡೆ ಬಿದ್ದಿತ್ತು. ಇದರಿಂದಾಗಿ ರೈಲಿನ ಮುಂದಿನ ಚಕ್ರಗಳು ಹಳಿ ತಪ್ಪುವಂತಾಯಿತು ಎಂದು ಹೇಳಿದ್ದಾರೆ. ಹಳಿ ತಪ್ಪಿದ ರೈಲನ್ನು ದುರಸ್ತಿ ಪಡಿಸಲು ರೈಲು ನಿರ್ವಹಣಾ ವಾಹನ (RMV) ಸ್ಥಳಕ್ಕೆ ತೆರಳಿದೆ. ಆ್ಯಕ್ಸಿಡೆಂಟ್​ ರಿಲೀಫ್​ ಮೆಡಿಕಲ್​ ವಾಹನ ಕೂಡ ಸ್ಥಳಕ್ಕೆ ತಲುಪಿದೆ ಎಂದೂ ಮಾಹಿತಿ ನೀಡಿದ್ದಾರೆ. ಹಳಿ ಮೇಲೆ ಬಿದ್ದ ಬಂಡೆಯನ್ನು ತೆರವುಗೊಳಿಸಲು ಕೊಂಕಣ ರೈಲ್ವೆ ಅಧಿಕಾರಿಗಳೂ ಧಾವಿಸಿದ್ದಾರೆ.

ಮುಂಬೈ ಸಮೀಪದ ರೋಹಾದಿಂದ ಮಂಗಳೂರು ಬಳಿಯ ಥೋಕೂರ್​​​ವರೆಗೆ ಸುಮಾರು 750 ಕಿಮೀ ಉದ್ದದ ಮಾರ್ಗ ಕೊಂಕಣ ರೈಲ್ವೆ ಮಾರ್ಗವಾಗಿದೆ. ಈ ಮಾರ್ಗ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯವನ್ನು ಒಳಗೊಳ್ಳುತ್ತದೆ. ಇಲ್ಲಿನ ಮಾರ್ಗದಲ್ಲಿ ನದಿಗಳು, ಪರ್ವತ ಪ್ರದೇಶಗಳು, ಕಮರಿಗಳೆಲ್ಲ ಇದ್ದು, ದುರ್ಗಮ ಪ್ರದೇಶದಲ್ಲಿ ರೈಲ್ವೆ ಹಳಿ ಹಾದುಹೋಗಿದೆ. ಇಲ್ಲಿ ಸಂಚಾರ ಸುಲಭವಲ್ಲ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಕಣ್ಣೆದುರೇ ಅಪಘಾತಕ್ಕೆ ಒಳಗಾದವರ ನೆರವಿಗೆ ನಿಂತ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್