Viral Video: ಅಬ್ಬಬ್ಬಾ.. ಭಯಾನಕ ದೃಶ್ಯವಿದು! ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ; ವಿಡಿಯೋ ನೋಡಿ
ಪುಟ್ಟ ಬಾಲಕ ಬಸ್ ಇಳಿದು ಸಾಗುವಾಗ ಟ್ರಕ್ ಎದುರು ಬಂದು ಬಿಡುತ್ತದೆ. ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ. ವಿಡಿಯೋ ನೋಡಿ..
ರಸ್ತೆ ದಾಟುವಾಗ ಅಪಘಾತ ಸಂಭವಿಸಿರುವ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತನ್ನು ಕೆಳಿಯೇ ಇರುತ್ತೇವೆ. ಆದರೂ ಸಹ ಕೆಲವು ಬಾರಿ ಗಡಿಬಿಡಿಯಿಂದ, ಭಯ ಹುಟ್ಟಿಸುವ ಕೆಲವು ಘಟನೆಗಳು ನಡೆದು ಬಿಡುತ್ತವೆ. ಒಮ್ಮೆಲೆ ಮೈ ಜುಂ.. ಎನ್ನುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟ್ಟ ಬಾಲಕ ಬಸ್ ಇಳಿದು ಸಾಗುವಾಗ ಟ್ರಕ್ ಎದುರು ಬಂದು ಬಿಡುತ್ತದೆ. ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ.
ಅದೆಷ್ಟೇ ಬಾರಿ ಮನೆಯವರು ರಸ್ತೆ ದಾಟುವಾಗ ಎಚ್ಚರವಾಗಿರಿ ಎಂದು ಹೇಳಿ ಕಳುಹಿಸಿದರೂ ಸಹ ಕೆಲವು ಬಾರಿ ಅವಸರ ಮಾಡುತ್ತೇವೆ. ಇನ್ನು ಕೆಲವು ಬಾರಿ ಗಮನವಿದ್ದರೂ ಸಹ ಅಪಘಾತಗಳು ಸಂಭವಿಸಿಬಿಡುತ್ತವೆ. ಇಲ್ಲೋರ್ವ ಬಾಲಕ ಬಸ್ ಇಳಿದು ರಸ್ತೆ ದಾಟುತಿದ್ದಾನೆ. ಎದುರಿಗೆ ಬರುತ್ತಿರುವ ಟ್ರಕ್ ಆತನಿಗೆ ಕಾಣಿಸಲೆ ಇಲ್ಲ. ಹಿಂಬದಿಯಲ್ಲಿ ಆತನ ಜತೆಗೇ ಬಸ್ ಇಳಿದ ಹುಡುಗಿಯೋರ್ವಳು ಕಿರುಚುತ್ತಿದ್ದಾಳೆ. ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿಸಿದೆ. ಓಡಿ ಹೋಗಿ ರಸ್ತೆ ದಾಟಿದ್ದಾನೆ. ಸರಿಯಾದ ಸಮಯಕ್ಕೆ ಚಾಲಕ ಬ್ರೇಕ್ ಹಾಕಿ ಟ್ರಕ್ಅನ್ನು ನಿಲ್ಲಿಸಿದ್ದಾನೆ.
View this post on Instagram
ವಿಡಿಯೋ ಒಮ್ಮೆಲೆ ಭಯ ಹುಟ್ಟಿಸುವುದಂತೂ ನಿಜ. ಇನ್ಸ್ಟಾಗ್ರಾಮ್ನಲ್ಲಿ ಮೊದಲು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಸಮಯಪ್ರಜ್ಞೆಯಿಂದ ಬ್ರೇಕ್ ಹಾಕಿದ ಟ್ರಕ್ ಚಾಲಕನಿಗೆ ಶ್ಲಾಘನೆ ವ್ಯಕ್ತವಾಗಿದೆ. ರಸ್ತೆ ದಾಟುವಾಗ ಎಚ್ಚರವಾಗಿರಿ ಎಂದು ಇನ್ನು ಕೆಲವರು ಅಭಿಪ್ರಾಯ ಹೇಳಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದು, ರಸ್ತೆ ದಾಟುವಾಗ ಅವಸರ ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಸೀರೆ ಉಟ್ಟು ಸ್ಕೇಟಿಂಗ್ ಮಾಡುತ್ತಾರೆ 46 ವರ್ಷದ ಈ ಮಹಿಳೆ! ವಿಡಿಯೋ ನೋಡಿ
Viral Video: ಫುಟ್‌ಬಾಲ್ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ