ಕುಡುಕನೋರ್ವ ಮಾಡಿದ ಅವಾಂತರದಿಂದ ತುರ್ತು ಭೂಸ್ಪರ್ಶವಾದ ವಿಮಾನ

ವಿಮಾನದಲ್ಲಿ ವ್ಯಕ್ತಿಯೋರ್ವ ಕಚ್ಚೇಬಿಟ್ಟ ಗಗನಸಖಿಯ ಬೆರಳು: ಮುಂದೆ ಆದದ್ದು ಅವಾಂತರ

ಕುಡುಕನೋರ್ವ ಮಾಡಿದ ಅವಾಂತರದಿಂದ ತುರ್ತು ಭೂಸ್ಪರ್ಶವಾದ ವಿಮಾನ
ಪ್ರಯಾಣಿಕನಿಂದ ಹಲ್ಲೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 17, 2022 | 10:06 PM

ಕುಡುಕರು ನಿಶೆಯಲ್ಲಿದ್ದಾಗ ಮಾಡುವ ಅವಾಂತರಗಳು ಒಂದೆರಡಲ್ಲ. ಪೂರ್ಣ ನಶೆಯಲ್ಲಿದ್ದಾಗ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿರುವುದಿಲ್ಲ. ಅದೇ ರೀತಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಾಡಿದ ಅವಾಂತರದಿಂದ ವಿಮಾನವೊಂದು ಭೂ ಸ್ಪರ್ಶವಾಗಿದೆ. ಟರ್ಕಿ (turkey) ದೇಶದ ಟರ್ಕಿಶ್ ಏರ್ಲೈನ್ಸ್​​​ನ​ ವಿಮಾನವೊಂದು ಟರ್ಕಿಯ ಪ್ರಮುಖ ನಗರಗಳಲ್ಲಿ ಒಂದಾದ ಇಸ್ತಾಂಬುಲ್​​ನಿಂದ (Istanbul) ಇಂಡೋನೇಶಿಯಾದ ರಾಜಧಾನಿಯಾದ ಜಕಾರ್ತಾಗೆ (Jakarta) ಹೊರಟಿತ್ತು. ಈ ವಿಮಾನದಲ್ಲಿ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ (48) ಪ್ರಯಾಣಿಕ ವಿಮಾನದಲ್ಲಿ ಕುಡಿದು ಪ್ರಯಾಣಿಸುತ್ತಿದ್ದನ್ನು.

ಇದನ್ನು ಗಗನಸಖಿ ಪ್ರಶ್ನಿಸಿದ್ದಕ್ಕೆ, ಪ್ರಯಾಣಿಕ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ ಜಗಳ ತೆಗೆದು,  ಗಗನಸಖಿಯ ಬೆರಳನ್ನು ಕಚ್ಚಿದ್ದಾನೆ. ಇದನ್ನು ಕಂಡ ಸಹ ಪ್ರಯಾಣಿಕರು ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಆದರೆ ಪ್ರಯಾಣಿಕ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ ಸುಮ್ಮನಾಗದೆ ಜಗಳವನ್ನು ತೀರ್ವಗೊಳಿಸಿದ್ದಾರೆ.

ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ ಗಗನಸಖಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಗಗನಸಖಿ ಪ್ರಯಾಣಿಕನನ್ನು ಒದ್ದಿದ್ದಾನೆ. ಇವರಿಬ್ಬರ ಜಗಳವನ್ನು ಪ್ರಯಾಣಿಕೊರಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಇವರಿಬ್ಬರ ಜಗಳ ಹೀಗೆ  ತೀರ್ವಸ್ವರೂಪಕ್ಕೆ ತಿರುಕ್ಕುತ್ತಿದ್ದಂತೆ ವಿವಾನ ಇಂಡೋನೇಶಿಯಾದ ಕುಲಾನಮು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶವಾಗಿದೆ. ವಿಮಾನ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್​​ನನ್ನು ಅಲ್ಲಿಯೇ ಬಿಟ್ಟು, ಜಕಾರ್ತಾಗೆ ತಲುಪಿದೆ. ವಿಮಾನ ಜಕಾರ್ತಾಗೆ ಸಾಯಂಕಾಲ 5 ಗಂಟೆಗೆ ತಲುಪಬೇಕಾಗಿದ್ದು, ರಾತ್ರಿ 8 ಗಂಟೆಗೆ ತಲುಪಿದೆ. ವರದಿಗಳ ಪ್ರಕಾರ, ಪ್ರಯಾಣಿಕನಿಗೆ ಕ್ವಾಲಾನಾಮು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಆಸ್ತಕ್ತಿದಾಯಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Mon, 17 October 22