ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ತಮಾಷೆಯ ಪ್ರಸಂಗಗಳ ವಿಡಿಯೋ ಹರಿದಾಡುತ್ತಿರುತ್ತದೆ. ಇವುಗಳಲ್ಲಿ ಕೆಲವಂತೂ ನೋಡುಗರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತದೆ. ಕೆಲವು ಆಶ್ಚರ್ಯ, ವಿಶೇಷ ಭಾವವನ್ನೂ ನೀಡುತ್ತದೆ. ಕೆಲವನ್ನು ನೋಡಿದಾಗ ಅವು ವಿಭಿನ್ನ ಆಯಾಮದ ಆಲೋಚನೆಗಳನ್ನು ಹೊಳೆಸುತ್ತದೆ. ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾಕಷ್ಟು ತಮಾಷೆಯ ಚರ್ಚೆ ಹಾಗೂ ಗಂಭೀರ ಆಲೋಚನೆಯೂ, ಕಮೆಂಟ್ಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದುಬರುತ್ತಿದೆ.
ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನಿಗೆ ಸರಿಯಾಗಿ ಏಟು ಕೊಟ್ಟಿದ್ದಾಳೆ. ಕಾರಣವೇನು ಗೊತ್ತೇ? ಕುಡಿತ. ಹೌದು. ಕುಡಿದು ಅಸಭ್ಯವಾಗಿ ಮನೆಗೆ ಬಂದ ಗಂಡನಿಗೆ ಪತ್ನಿ ಹಿಂದುಮುಂದು ನೋಡದೆ ಏಟು ಕೊಟ್ಟಿದ್ದಾಳೆ. ವಿಶೇಷ ಎಂದರೆ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ಮದ್ಯದ ಅಮಲಿಗೆ ಇಂಥಾ ಏಟು ಸಿಗಬೇಕು. ಕುಡಿತದ ಚಟವೆಲ್ಲಾ ಇಳಿದುಹೋಗುತ್ತದೆ ಎಂದು ಹಲವರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಕೆಲವರಿಗೆ ಕುಡಿದರೆ ಪ್ರಜ್ಞೆಯೇ ಇರುವುದಿಲ್ಲ. ಬೇಕಾಬಿಟ್ಟಿಯಾಗಿ ವ್ಯವಹರಿಸುತ್ತಾರೆ. ಏನು ಹೇಳುತ್ತಿದ್ದೇನೆ? ಏನು ಮಾಡುತ್ತಿದ್ದೇನೆ? ಏನೂ ಗೊತ್ತಿರುವುದಿಲ್ಲ. ಇದರಿಂದ ಹಲವು ಬಾರಿ ದೊಡ್ಡ ಸಮಸ್ಯೆಗಳೇ ಉಂಟಾಗುತ್ತದೆ. ಈ ವಿಡಿಯೋ ನೋಡಿದರೆ ಅಂಥದ್ದೇ ಏನೋ ಘಟನೆ ಆಗಿರಬೇಕು ಎಂದು ಕಾಣುತ್ತದೆ.
ಮಹಿಳೆ ಅಷ್ಟೂ ಜೋರಾಗಿ ಆತನಿಗೆ ಬಾರಿಸುತ್ತಿದ್ದಾಳೆ. ಆತನೂ ಏನೇನೋ ಹೇಳಲು ಪ್ರಯತ್ನ ಮಾಡುತ್ತಿದ್ದಾನೆ. ವಿಡಿಯೋ ನೋಡಿ..
शराब छुड़वाए – 100% guaranteed इलाज ☺️?????#Version 2.007 pic.twitter.com/E2jW3c4ylZ
— Rupin Sharma IPS (@rupin1992) July 2, 2021
ವಿಡಿಯೋ ನೋಡಿದ ಮೇಲಂತೂ ಏಟು ಹೇಗೆ ಸಿಕ್ಕಿದೆ ಎಂದು ನಿಮಗೆ ಅರ್ಥವಾಗಿರಬೇಕು. ಕೆಲವರು ಈ ವಿಡಿಯೋ ನೋಡಿ ಆಶ್ಚರ್ಯವಾಗಿದ್ದಾರೆ. ಇದನ್ನು ಹಂಚಿಕೊಂಡಿರುವ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ, ಕುಡಿತ ಬಿಟ್ಟುಬಿಡಿ, ಇಲ್ಲವಾದರೆ ಇಂಥ ಆತಿಥ್ಯ ಸ್ವೀಕರಿಸಿ ಎಂಬಂತೆ ಬರೆದುಕೊಂಡಿದ್ದಾರೆ. ಕುಡಿತ ಎಂಬ ಅಭ್ಯಾಸ ಆರೋಗ್ಯಕ್ಕೂ, ನಮ್ಮ ಸುತ್ತಲಿನ ವಾತಾವರಣ ಚೆನ್ನಾಗಿ ಇಡುವುದಕ್ಕೂ ಮಾರಕ. ಹಾಗಾಗಿ ಇಂಥಾ ಅಭ್ಯಾಸ ಇದ್ದರೆ ವಿಡಿಯೋ ನೋಡಿ, ಬಿಟ್ಟುಬಿಡಿ.
ಇದನ್ನೂ ಓದಿ: ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ಸಖತ್ ವೈರಲ್ ಆಗ್ತಿದೆ ಹಾರ್ದಿಕ್ ಪಾಂಡ್ಯನ 10 ವರ್ಷದ ಹಳೆಯ ವಿಡಿಯೋ
Viral Photo: 20 ಅಡಿ ಆಳದ ಬಾವಿಯಲ್ಲಿ ಮುಖವನ್ನಷ್ಟೆ ಮೇಲೆತ್ತಿ ನೋಡುತ್ತಿದೆ ಚಿರತೆ! ಅದ್ಭುತ ಚಿತ್ರ ವೈರಲ್