Viral Video: ಕ್ರಿಕೆಟ್ ಪಂದ್ಯದ ವೇಳೆ ಬಸಣ್ಣನ ಗ್ರ್ಯಾಂಡ್​​​​ ಎಂಟ್ರಿ, ಮುಂದೇನಾಯ್ತು ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2024 | 12:52 PM

ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ಮನರಂಜನಾತ್ಮಕ ವಿಡಿಯೋಗಳು ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ಕ್ರೇಜಿ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಕ್ರಿಕೆಟ್ ಮೈದಾನಕ್ಕೆ ನುಗ್ಗಿದ ಗೂಳಿಗಳೆರಡು ಆಟಗಾರರನ್ನು ಅಟ್ಟಾಡಿಸಿಕೊಂಡು ಹೋಗಿವೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral Video: ಕ್ರಿಕೆಟ್ ಪಂದ್ಯದ ವೇಳೆ ಬಸಣ್ಣನ ಗ್ರ್ಯಾಂಡ್​​​​ ಎಂಟ್ರಿ, ಮುಂದೇನಾಯ್ತು ನೋಡಿ
ವೈರಲ್​​ ವಿಡಿಯೋ
Follow us on

ಪ್ರಾಣಿಗಳು ತುಂಬಾನೇ ಸಾದು ಸ್ವಭಾವದವು. ಆದ್ರೆ ಕೆಲವೊಮ್ಮೆ ಕೋಪಗೊಂಡ ಸಂದರ್ಭದಲ್ಲಿ ಅವುಗಳು ಅತಿರೇಕದ ವರ್ತನೆಯನ್ನು ತೋರುತ್ತವೆ. ಪ್ರಾಣಿಗಳ ಇಂತಹ ವರ್ತನೆಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಕೆಲವೊಂದು ದೃಶ್ಯಗಳು ಭಯಾನಕವಾಗಿದ್ದರೆ, ಇನ್ನೂ ಕೆಲವೊಂದು ದೃಶ್ಯಗಳು ತುಂಬಾನೇ ಹಾಸ್ಯಮಯವಾಗಿರುತ್ತವೆ. ಸದ್ಯ ಅಂತಹದ್ದೇ ಫನ್ನಿ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಕೋಪಗೊಂಡಂತಹ ಗೂಳಿಗಳೆರಡು, ಇನ್ನು ಆಟ ಆಡ್ತೀದ್ದೀರಾ ಬೇಗ ಮನೆಗೆ ಹೋದ್ರೆ ಸರಿ ಇವಾಗ ಎನ್ನುತ್ತಾ ಮೈದಾನಕ್ಕೆ ನುಗ್ಗಿ ಕ್ರಿಕೆಟ್ ಆಟಗಾರರನ್ನು ಅಟ್ಟಾಡಿಸಿಕೊಂಡು ಹೋಗಿವೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೋಪಗೊಂಡ ಗೂಳಿಗಳೆರಡು ಕ್ರಿಕೆಟ್ ಆಟಗಾರರನ್ನು ಅಟ್ಟಾಡಿಸಿಕೊಂಡು ಹೋಗುವಂತಹ ದೃಶ್ಯವನ್ನು ಕಾಣಬಹುದು. ಈ  ಫನ್ನಿ ವಿಡಿಯೋ ತುಣುಕನ್ನು ಓಜಸ್ ಭೂಮ್ಕರ್ (@mi_ojas_kokankar)  ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕ್ರಿಕೆಟ್ ಪಂದ್ಯದಲ್ಲಿನ ಮೋಜಿನ ಕ್ಷಣ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋ ತುಣುಕಿನಲ್ಲಿ ಮೈದಾನದಲ್ಲಿ ಒಂದಷ್ಟು ಜನ ಕ್ರಿಕೆಟ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲಿಗೆ ಲಗ್ಗೆಯಿಟ್ಟ ಎರಡು ಗೂಳಿಗಳು ಕೋಪದಿಂದ ಇನ್ನೂ ನಿಮ್ಗೆಲ್ಲಾ ಮನೆಗೆ ಹೋಗಲು ಟೈಮ್ ಆಗಿಲ್ವಾ ಎನ್ನುತ್ತಾ ಆಟಗಾರರನ್ನು  ಅಟ್ಟಾಡಿಸಿಕೊಂಡು ಹೋಗುವೆ. ಇಲ್ಲೇ ನಿಂತ್ಕೊಂಡ್ರೆ ಈ ಗೂಳಿ ಗ್ಯಾರಂಟಿ ನಮ್ಗೆಲ್ಲಾ ಕೊಂಬಿನಿಂದ ತಿವಿಯುತ್ತವೇ ಎಂದು ಆಟಗಾರರು ಜೀವ ಉಳಿದ್ರೆ ಸಾಕಪ್ಪಾ ಎನ್ನುತ್ತಾ ಕಕ್ಕಾಬಿಕ್ಕಿಯಾಗಿ ಓಡುವಂತಹ ಹಾಸ್ಯಮಯ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 20.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಏಳುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರದು ‘ಓ ದೇವರೇ ಏನಿದು’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಬಹುಷಃ ಎತ್ತಿಗೂ ಕ್ರಿಕೆಟ್ ಆಡಲು ಮನಸ್ಸಾಗಿರಬೇಕು’ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾದರು ‘ಗೂಳಿ ಅಟ್ಟಾಡಿಸುವಾಗ ಬೌಲರ್ ನ ವೇಗವು ಚೆಂಡಿಗಿಂತ ಫಾಸ್ಟ್ ಆಗಿತ್ತು’ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ನೋಡಿ ನಕ್ಕು ನಕ್ಕು ಸುಸ್ತಾಯ್ತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Wed, 21 February 24