ಹದ್ದುಗಳನ್ನು ಪಕ್ಷಿ ಸಾಮ್ರಾಜ್ಯದಲ್ಲಿಯೇ ಅಪಾಯಕಾರಿ ಮತ್ತು ಶಕ್ತಿಯುತ ಬೇಟೆಗಾರ ಪಕ್ಷಿ ಎಂದು ಪರಿಗಣಿಸಲಾಗಿದೆ. ಸೂಕ್ಷ್ಮ ದೃಷ್ಟಿಯನ್ನು ಹೊಂದಿರುವ ಈ ಪಕ್ಷಿಗಳು ಬೇಟೆಯಾಡುವುದಲ್ಲಿ ಚಾಣಾಕ್ಷ ಅಂತಾನೇ ಹೇಳಬಹುದು. ಹೌದು ಮೀನು, ಕೋಳಿ ಇತ್ಯಾದಿ ಸಣ್ಣ ಗಾತ್ರದ ಪ್ರಾಣಿ ಪಕ್ಷಿಗಳನ್ನು ಮಾತ್ರವಲ್ಲದೆ ದೊಡ್ಡ ಗಾತ್ರದ ಪ್ರಾಣಿಗಳನ್ನೂ ಈ ಹದ್ದುಗಳು ಬೇಟೆಯಾಡುತ್ತವೆ. ಅಷ್ಟೇ ಯಾಕೆ ಮನುಷ್ಯರ ಮೇಲೂ ಈ ಹಕ್ಕಿ ಆಕ್ರಮಣ ಮಾಡುತ್ತದೆ. ಹದ್ದಿನ ಶಿಕಾರಿಗಳ ದೃಶ್ಯಗಳನ್ನು ನೀವು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ ಅಲ್ವಾ. ಇದೀಗ ಅಂತಹದೇ ವಿಡಿಯೋವೊಂದು ವೈರಲ್ ಆಗಿದ್ದು, ದೈತ್ಯ ಹದ್ದೊಂದು ಪುಟ್ಟ ಮಗುವನ್ನು ಬೇಟೆಯಾಡಲು ಬಂದಿದೆ. ಮಗುವಿನ ತಂದೆಯ ಸಮಯಪ್ರಜ್ಞೆಯಿಂದ ಭೀಕರ ದಾಳಿಯಿಂದ ಕಂದಮ್ಮ ಸ್ವಲ್ಪದರಲ್ಲಿಯೇ ಬಚಾವ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಕಾಶದಿಂದ ಹಾರಿ ಬಂದ ದೈತ್ಯ ಹದ್ದೊಂದು ಸುಮಾರು 7 ರಿಂದ 8 ವರ್ಷ ವಯಸ್ಸಿನ ಹುಡುಗನ ಮೇಲೆ ಆಕ್ರಮಣ ಮಾಡಲು ಮುಂದಾಗುವ ದೃಶ್ಯವನ್ನು ಕಾಣಬಹುದು. ಹದ್ದು ತನ್ನ ಬೇಟೆಯನ್ನು ಹಿಡಿದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಓಡಿ ಬಂದ ಮಗುವಿನ ತಂದೆ ತಮ್ಮ ಸಮಯಪ್ರಜ್ಞೆಯಿಂದ ಕಂದಮ್ಮನ್ನು ಹದ್ದಿನ ದಾಳಿಯಿಂದ ರಕ್ಷಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ ಯುವತಿಯ, ಆಕ್ರೋಶಗೊಂಡ ನೆಟ್ಟಿಗರು
ವೈರಲ್ ವಿಡಿಯೋ ಇಲ್ಲಿದೆ ನೋಡಿ:
बाज बच्चे को लेकर उड़ने ही वाला था कि अचानक…#EagleAttack pic.twitter.com/RglxIGYbe2
— Inderjeet Barak🌾 (@inderjeetbarak) May 27, 2024
ಇಂದ್ರಜಿತ್ (@indrajeethbarak) ಎಂಬವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿಜವಾಗಿಯೂ ಹದ್ದುಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ