Viral Video: ರೈಲ್ವೆ ನಿಲ್ದಾಣದಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ ಯುವತಿಯ, ಆಕ್ರೋಶಗೊಂಡ ನೆಟ್ಟಿಗರು
ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್, ಡಾನ್ಸ್, ಸೇರಿದಂತೆ ಅಸಭ್ಯ ವರ್ತನೆಯನ್ನು ತೋರಬಾರದೂ ಎಂದು ಗೊತ್ತಿದ್ದರೂ, ಈ ಬಗ್ಗೆ ಎಚ್ಚರಿಕೆ ನೀಡಿದರೂ ಕೆಲವೊಬ್ಬರ ಹುಚ್ಚಾಟ ಇನ್ನೂ ನಿಂತಿಲ್ಲ. ಇದೇ ರೀತಿ ಇಲ್ಲೊಬ್ಬಳು ಯುವತಿ ಕೂಡಾ ರೀಲ್ಸ್ ವಿಡಿಯೋ ಮಾಡುವ ನೆಪದಲ್ಲಿ ಮುಂಬೈನ CSTM ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಅಶ್ಲೀಲ ನೃತ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಮುಜುಗರವನ್ನುಂಟುಮಾಡಿದ್ದಾಳೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ಆಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದು ಸೋಷಿಯಲ್ ಮೀಡಿಯಾ ಯುಗ. ಇಲ್ಲಿ ಫೇಮಸ್ ಆಗುವ ಸಲುವಾಗಿ ಕೆಲವೊಬ್ಬರು ಎಂತಹ ಕೀಳು ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ. ಹೌದು ಕೆಲವು ಯುವಕ ಯುವತಿಯರು ರೀಲ್ಸ್ ನೆಪದಲ್ಲಿ ರೊಮ್ಯಾನ್ಸ್ ವಿಡಿಯೋ ಮಾಡುವ ಮೂಲಕ, ಅಶ್ಲೀಲ ನೃತ್ಯ ಮಾಡುವ ಮೂಲಕ ಹುಚ್ಚಾಟವನ್ನು ಮೆರೆಯುತ್ತಿರುತ್ತಾರೆ. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಬಾರದೂ ಎಂದು ಹೇಳಿದರೂ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಮುಂಬೈನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಯುವತಿಯೊಬ್ಬಳು ಅಶ್ಲೀಲ ನೃತ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಮುಜುಗರವನ್ನು ಉಂಟುಮಾಡಿದ್ದಾಳೆ.
ಈ ಕುರಿತ ವಿಡಿಯೋವೊಂದನ್ನು @Mumbaikhabar9 ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮುಂಬೈ CSTM ನಿಲ್ದಾಣದ ಹೊರಗಡೆ ಸಾರ್ವಜನಿಕವಾಗಿ ಯುವತಿಯ ಅಶ್ಲೀಲ ನೃತ್ಯ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
Viral | Obscene dance moves in public outside Mumbai CSTM station. pic.twitter.com/HquaXE0HnL
— MUMBAI NEWS (@Mumbaikhabar9) May 27, 2024
ವೈರಲ್ ವಿಡಿಯೋದಲ್ಲಿ ಮುಂಬೈನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಹೊರಗೆ ಯುವತಿಯೊಬ್ಬಳು ಸಾರ್ವಜನಿಕರ ಎದುರಲ್ಲಿಯೇ ಸೊಂಟ ಬಳುಕಿಸುತ್ತಾ ಅಶ್ಲೀವಾಗಿ ನೃತ್ಯ ಮಾಡುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅರೇ ಇದೆಂಥಾ ಅಚ್ಚರಿ… ಬೇವಿನ ಮರದಲ್ಲಿ ಮಾವಿನ ಹಣ್ಣು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 46 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಯುವತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ