Viral Video: ಐಸ್ ಕ್ರೀಮ್ ಜೊತೆಗೆ ಸ್ಪೂನ್ ಮತ್ತು ಕಪ್​​ನ್ನು ತಿನ್ಬೋದಂತೆ; ಇದು ಮಂಗಳೂರಿನ ಬಿಸ್ಕೆಟ್ ಕಪ್ ಸ್ಟೋರಿ 

ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಉತ್ಪನ್ನಗಳು ಸಾಕಷ್ಟು ತೊಂದರೆದಾಯಕ ಮಾತ್ರವಲ್ಲದೆ ಇವುಗಳಿಂದ ಪರಿಸರಕ್ಕೂ ಹಾನಿಯಿದೆ. ಹಾಗಾಗಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇಲ್ಲೊಂದು ಬ್ರಾಂಡ್  ತಿನ್ನಬಹುದಾದ ಬಿಸ್ಕಿಟ್ ಕಪ್,  ಸ್ಟ್ರಾ ಮತ್ತು ಚಮಚಗಳನ್ನು ತಯಾರಿಸಿದೆ. ಚಹಾ ಕುಡಿಯುವುದರ ಮತ್ತು ಐಸ್ ಕ್ರೀಮ್ ತಿನ್ನುವುದರ ಜೊತೆಗೆ ಈ ಕಪ್ಗಳನ್ನು ಕೂಡಾ ನೀವು ತಿನ್ನಬಹುದು. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

Viral Video: ಐಸ್ ಕ್ರೀಮ್ ಜೊತೆಗೆ ಸ್ಪೂನ್ ಮತ್ತು ಕಪ್​​ನ್ನು ತಿನ್ಬೋದಂತೆ; ಇದು ಮಂಗಳೂರಿನ ಬಿಸ್ಕೆಟ್ ಕಪ್ ಸ್ಟೋರಿ 
ವೈರಲ್​​ ವಿಡಿಯೋ
Edited By:

Updated on: Feb 16, 2024 | 2:57 PM

ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುವುದರ ಜೊತೆಗೆ ಪ್ಲಾಸ್ಟಿಕ್ ಉತ್ಪನ್ನಗಳು ನಮ್ಮ ಆರೋಗ್ಯಕ್ಕೂ ಹಾನಿಕಾರಕ. ಹೀಗಿದ್ದರೂ ಕೂಡಾ ಕೆಲವು ಕಡೆಗಳಲ್ಲಿ ಬಿಸಿ ಬಿಸಿ ಟೀ ಕಾಫಿಯನ್ನು ಪ್ಲಾಸ್ಟಿಕ್ ಕಪ್ ಗಳಲ್ಲಿಯೇ ಸರ್ವ್ ಮಾಡುತ್ತಾರೆ. ಇದರಿಂದ ಪ್ಲಾಸ್ಟಿಕ್ನಲ್ಲಿರುವ ಮಾರಕ ಅಂಶಗಳು ನಮ್ಮ ದೇಹವನ್ನು ಸೇರಿ ಆರೋಗ್ಯಕ್ಕೂ ಅಪಾಯವನ್ನು ತಂದೊಡ್ಡುತ್ತವೆ, ಅಷ್ಟೇ ಅಲ್ಲದೆ ಐಸ್ ಕ್ರೀಮ್ ಕಪ್ ಆಗಿರಲಿ, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಸ್ಟ್ರಾಗಳನ್ನು ಒಮ್ಮೆ ಬಳಸಿ ನಂತರ ಎಲ್ಲೆಂದರಲ್ಲಿ ಬಿಸಾಡಿ ಬಿಡುತ್ತಾರೆ. ಇದರಿಂದ ನಮ್ಮ ಪರಿಸರಕ್ಕೂ ಸಾಕಷ್ಟು ಹಾನಿ ಉಂಟಾಗುತ್ತದೆ. ಈ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಎಂದು ಸರ್ಕಾರ ಹೇಳಿದ್ದರೂ ಸಾಕಷ್ಟು ಜನ ಪ್ಲಾಸ್ಟಿಕ್ ಉತ್ಪನ್ನಗಳನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ  ಇಲ್ಲೊಂದು ಬ್ರಾಂಡ್ ಪ್ಲಾಸ್ಟಿಕ್ ಉತ್ಪನ್ನಗಳ  ಬಳಕೆಯನ್ನು ಕಡಿಮೆ ಮಾಡಿ,   ಪರಿಸರವನ್ನು ಸ್ವಚ್ಛವಾಗಿಡಲು ಹೊಸ ಪ್ರಯತ್ನವೊಂದನ್ನು ಮಾಡಿದೆ.

ಹೌದು ಮಂಗಳೂರಿನ ಈ ಬಿಸ್ಕೆಟ್ ಕಪ್ ಸ್ಟೋರಿ ಬಹಳನೇ ಇಂರೆಸ್ಟಿಂಗ್ ಆಗಿದೆ. ಎಂಚಿ ಕ್ರಂಚಿ ಎಂಬ ಬ್ರಾಂಡ್ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಹೊಸ ಪರಿಕಲ್ಪನೆಯಡಿಯಲ್ಲಿ  ಈ ವಿಶೇಷ ಕಪ್, ಸ್ಟ್ರಾ, ಮತ್ತು ಚಮಚಗಳನ್ನು ತಯಾರಿಸಿದೆ.  ಈ ಉತ್ಪನ್ನಗಳನ್ನು ಇಲ್ಲಿನ  ಪಾಂಡೇಶ್ವರದಲ್ಲಿರುವ ʼದಿ ಮಿಲೆಟ್ ಹೌಸ್ʼ ಎಂಬ  ಶಾಪ್ ಅಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯವಾಗಿ ನಾವೆಲ್ರೂ ಯಾವುದಾದ್ರೂ ಅಂಗಡಿಗಳಿಗೆ ಟೀ, ಜ್ಯೂಸ್ ಕುಡಿಯಲು ಅಥವಾ ಐಸ್ ಕ್ರೀಮ್ ತಿನ್ನಲು ಹೋದಾಗ ಪ್ಲಾಸ್ಟಿಕ್ ಸ್ಟ್ರಾ ಮತ್ತು ಚಮಚಗಳನ್ನು ನೀಡುತ್ತಾರೆ. ಮತ್ತು ಇವುಗಳನ್ನು ಅಲ್ಲಲ್ಲಿ ಎಸೆಯುವ ಮೂಲಕ ಪರಿಸರವನ್ನು ಹಾಳು ಮಾಡುತ್ತಾರೆ. ಈ ನಿಟ್ಟಿನಲ್ಲಿ ʼಎಂಚಿ ಕ್ರಂಚಿʼ ಬ್ರಾಂಡ್  ಚಹಾ, ಐಸ್ ಕ್ರೀಮ್ ಜೊತೆಗೆ ತಿನ್ನಬಹುದಾದ ಬಿಸ್ಕೆಟ್ ಕಪ್, ಚಮಚ ಮತ್ತು ಸ್ಟ್ರಾಗಳನ್ನು ತಯಾರಿಸಿವೆ. ಈ ಕಪ್ ತಿನ್ನಲು ಬಹಳ ಕ್ರಂಚಿಯಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಇದೊಂದು ಉತ್ತಮ ಪರಿಕಲ್ಪನೆ ಅಂತಾನೇ ಹೇಳಬಹುದು.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಇಂಟರೆಸ್ಟಿಂಗ್ ವಿಡಿಯೋವನ್ನು @try.tindi ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, “ತಿನ್ನಬಹುದಾದ ಕಪ್, ಚಮಚ, ಸ್ಟ್ರಾ; ಪರಿಸರವನ್ನು ಸ್ವಚ್ಛವಾಗಿಡಲು ಇದೊಂದು ಉತ್ತಮ ಪರಿಕಲ್ಪನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: ಬೋಳು ತಲೆಯಿದ್ದರೂ ಬಾಚಣಿಗೆ ಖರೀದಿಸಿದ ಅನುಪಮ್ ಖೇರ್, ಇದರ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ

ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ  9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 42 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕೂಡ ಈ ಕಪ್ ಅನ್ನು ತಿಂದಿದ್ದೆ, ಇದ್ರ ಟೇಸ್ಟ್ ಅಂತೂ ತುಂಬಾ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಅದ್ಭುತವಾದ ಪರಿಕಲ್ಪನೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ಲಾಸ್ಟಿಕ್ ಹಾಗೂ ಪೇಪರ್ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಇದು ಉತ್ತಮ ಉಪಕ್ರಮʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ