Video Viral: ವೃದ್ಧೆಯ ಕೈಯಿಂದ ಬ್ಯಾಗ್ ಎಳೆದೊಯ್ಯಲು ಯತ್ನ; 24 ಗಂಟೆಯೊಳಗೆ ಆರೋಪಿ ಬಂಧನ
ರಸ್ತೆ ಮಧ್ಯೆದಲ್ಲೇ ವೃದ್ಧೆಯ ಕೈಯಿಂದ ಬ್ಯಾಗ್ ಎಳೆದೊಯ್ಯಲು ಯತ್ನಿಸಿದ್ದಾರೆ. ಈ ದಾರುಣ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ 24ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಂಜಾಬ್: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ವೃದ್ಧ ದಂಪತಿಯಿಂದ ದರೋಡೆ ಮಾಡಲು ಯತ್ನಿಸಿದ ಘಟನೆ ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆದಿದೆ. ಈ ದಾರುಣ ಘಟನೆ ಸಂಬಂಧಿಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಮಧ್ಯೆದಲ್ಲೇ ವೃದ್ಧೆಯ ಕೈಯಿಂದ ಬ್ಯಾಗ್ ಎಳೆದೊಯ್ಯಲು ಯತ್ನಿಸಿದ್ದಾರೆ. ಘಟನೆ ನಡೆದ 24ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ, ವೃದ್ಧ ದಂಪತಿ ತಮ್ಮ ಕಾರಿನ ಪಕ್ಕದಲ್ಲಿ ರಸ್ತೆಯಲ್ಲಿ ನಿಂತಿರುವುದು ಕಂಡುಬರುತ್ತದೆ. ಕೆಲವೇ ಕ್ಷಣಗಳಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ದಂಪತಿ ಕಡೆಗೆ ಬಂದು ವೃದ್ಧ ಮಹಿಳೆಯ ಭುಜದ ಮೇಲಿದ್ದ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಯುವಕ ಎಳೆದ ರಭಸಕ್ಕೆ ಮಹಿಳೆ ರಸ್ತೆಗೆ ಬಿದ್ದಿದ್ದು ತಕ್ಷಣ ಚಿಕಿತ್ಸೆಗಾಗಿ ಫಿರೋಜ್‌ಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ವೈದ್ಯಕೀಯ ಆರೈಕೆಯಲ್ಲಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ವಿಡಿಯೋ ಇಲ್ಲಿದೆ ನೋಡಿ:
🚨Ferozepur Police is committed to your service and safety🚨 In immediate response to the viral video of the purse-snatching incident, Ferozepur Police traced the accused and made the arrest within the 24-hour timeframe.#ActionAgainstCrime pic.twitter.com/4RiR2DcwLH
— Ferozepur Police (@Ferozepurpolice) March 30, 2024
ಇದನ್ನೂ ಓದಿ: ಹುಟ್ಟು ಹಬ್ಬದಂದು ಕೇಕ್ ತಿಂದ ಕೆಲ ಹೊತ್ತಿನಲ್ಲೇ ಬಾಲಕಿ ಸಾವು; ಕುಟುಂಬಸ್ಥರು ಅಸ್ವಸ್ಥ
ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದರೋಡೆಗೆ ಯತ್ನಿಸಿದ 24 ಗಂಟೆಗಳಲ್ಲಿ ಆರೋಪಿಗಳಲ್ಲಿ ಒಬ್ಬನನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಫಿರೋಜ್‌ಪುರ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ