ವಯಸ್ಸು ಬರೀ ಸಂಖ್ಯೆಯಷ್ಟೇ… ಇಳಿ ವಯಸ್ಸಿನಲ್ಲೂ ತಮ್ಮ ಅದ್ಭುತ ಜೀವನೋತ್ಸಾಹದಿಂದ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಯುವಕರೇ ನಾಚುವಂತೆ ನೃತ್ಯ ಮಾಡುವ ಹಾಡು ಹಾಡುವ, ಸ್ಟೈಲ್ ಆಗಿ ಬೈಕ್, ಕಾರ್ ಓಡಿಸುವ ಹಿರಿ ಜೀವಗಳ ಕ್ಯೂಟ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಸದ್ಯ ಅದೇ ರೀತಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ತನ್ನ ಇಳಿ ವಯಸ್ಸಿನಲ್ಲೂ ವೃದ್ಧೆಯೊಬ್ಬರು 90 ರ ದಶಕದ ಹಿಂದಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಅಜ್ಜಿನ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ವಿಡಿಯೋವನ್ನು @90s_songs._ ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವೃದ್ಧೆಯೊಬ್ಬರು ಹಿಂದಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕುವಂತಹ ದೃಶ್ಯವನ್ನು ಕಾಣಬಹುದು. 90 ರ ದಶಕದ ಹಿಟ್ ಹಾಡುಗಳಲ್ಲಿ ಒಂದಾದ ಲಾಮ ಲಾಮ ಘೂಂಗಟ್ ಕಹೇ ಕೋ ಡಾಲಾ ಎಂಬ ಹಾಡಿಗೆ ಅಜ್ಜಿ ಯುವಕರೂ ನಾಚುವಂತೆ ಸಖತ್ ಆಗಿ ನೃತ್ಯ ಮಾಡಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ
ಕೆಲದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇಳಿ ವಯಸ್ಸಿನಲ್ಲೂ ಅಜ್ಜಿಯ ಜೀವನೋತ್ಸಾಹ ಮತ್ತು ಸುಂದರ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ