Viral Video : ‘ಅಲ್ಲಿ ಮನುಷ್ಯರಿದ್ದಾರೆ! ಅತ್ತ ಹೋಗಬೇಡ, ಇತ್ತ ಬಾ’

Elephant : ಪ್ರವಾಸಿಗರು ಈ ಆನೆಯನ್ನು ನೋಡಲು ಬಂದಿದ್ದಾರೆ. ಅವರ ಸನ್ನೆಗೆ ಮರಿ ಅವರೆಡೆ ಹೋಗಲು ನೋಡಿದೆ. ಆಗ ಈ ತಾಯಿಆನೆ ಏನು ಮಾಡಿರಬಹುದು? ವಿಡಿಯೋ ನೋಡಿ.

Viral Video : ‘ಅಲ್ಲಿ ಮನುಷ್ಯರಿದ್ದಾರೆ! ಅತ್ತ ಹೋಗಬೇಡ, ಇತ್ತ ಬಾ’
ಅತ್ತ ಹೋಗಬೇಡ ಇತ್ತ ಬಾ
Updated By: ಶ್ರೀದೇವಿ ಕಳಸದ

Updated on: Sep 07, 2022 | 4:43 PM

Viral Video : ರಾಷ್ಟ್ರೀಯ ಉದ್ಯಾನವನವೊಂದರಲ್ಲಿ ಸಫಾರಿಗೆ ಬಂದ ಪ್ರವಾಸಿಗರ ಹತ್ತಿರ ಹೋಗದಂತೆ ತನ್ನ ಮರಿಯನ್ನು ತಾಯಿಆನೆಯೊಂದು ತಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈತನಕ 1.5 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ. ಬ್ಯುಟೆಂಗ್​ಬೈಡನ್ ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಪ್ರವಾಸಿಗರು ಆನೆಯನ್ನು ನೋಡಲು ಕಾತರರಾಗಿ ಅತ್ತ ಕಡೆ ಕಾಯ್ದು ನಿಂತಾಗ, ತಾಯಿಆನೆಯು ತನ್ನ ಮರಿಯೊಂದಿಗೆ ರಸ್ತೆ ದಾಟುತ್ತಿರುವ ದೃಶ್ಯ ಇದಾಗಿದೆ. ಪ್ರವಾಸಿಗರು ಮುದ್ದಾದ ಮರಿಯ ಗಮನ ಸೆಳೆದಾಗ ಅದು ಅತ್ತಕಡೆ ಹೋಗಲು ಪ್ರಯತ್ನಿಸುತ್ತದೆ. ಆದರೆ ತಾಯಿಆನೆ ಸೊಂಡಿಲಿಂದ ತಳ್ಳಿಕೊಂಡು ತನ್ನೆಡೆ ಎಳೆದುಕೊಂಡು ರಸ್ತೆ ದಾಟುವಂತೆ ಸೂಚಿಸುತ್ತದೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ದೃಶ್ಯ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹೊಮ್ಮಿಸಿದೆ. ಈ ಪ್ರಾಣಿಗಳು ಕೂಡ ಮನುಷ್ಯರೆಂದರೆ ಭಯಬೀಳುತ್ತವೆ. ಏಕೆಂದರೆ ಮನುಷ್ಯನ ಬೇಟೆಪ್ರವೃತ್ತಿ ಪ್ರಾಣಿಗಳನ್ನು ಹೀಗೆ ಯೋಚಿಸುವಂತೆ ಮಾಡುತ್ತಿದೆ. ಆದ್ದರಿಂದ ಮನುಷ್ಯರಿಂದ ರಕ್ಷಣೆ ಪಡೆಯಲು ಅವು ಹೀಗೆ ವರ್ತಿಸುವ ಸಾಧ್ಯತೆ ಇರುತ್ತದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಈ ರೀತಿ ಅವುಗಳಲ್ಲಿ ಭಯ ಹುಟ್ಟಿಸಿದ್ದು ನಾವೇ. ಇದು ನಮ್ಮದೇ ತಪ್ಪು’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ತುಂಬಾ ಮುದ್ದಾಗಿದೆ. ನನ್ನ ಮಗನ ಬಾಲ್ಯವನ್ನು ಇದು ನೆನಪಿಸುತ್ತಿದೆ.’ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇಂಥ ದೈತ್ಯಪ್ರಾಣಿಯಲ್ಲಿಯೂ ಈ ಮನುಷ್ಯ ಭಯ ಹುಟ್ಟಿಸಿಬಿಟ್ಟನಲ್ಲ…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:41 pm, Wed, 7 September 22