Twitter CEO: ಚೇರ್ ಮೇಲೆ ಕೂತ ನಾಯಿಯೇ ಟ್ವಿಟ್ಟರ್ ಸಿಇಒ; ಪರಾಗ್​ಗಿಂತ ಇದೇ ಉತ್ತಮ ಎಂದು ಅಣಕಿಸಿದ ಮಸ್ಕ್

| Updated By: ನಯನಾ ಎಸ್​ಪಿ

Updated on: Feb 15, 2023 | 2:35 PM

$44 ಶತಕೋಟಿ ಡಾಲರ್ ಒಪ್ಪಂದದಲ್ಲಿ ಟ್ವಿಟರ್ ಕಂಪನಿಯನ್ನು ಖರೀದಿಸಿದ ತಕ್ಷಣ ಮಸ್ಕ್, ಅಗರ್ವಾಲ್ ಅವರನ್ನು ವಜಾಗೊಳಿಸಿದರು. ಅಗರವಾಲ್ ಜೊತೆಗೆ, ಟ್ವಿಟರ್‌ನ ಕಾನೂನು ಮುಖ್ಯಸ್ಥ ವಿಜಯ ಗಡ್ಡೆ ಮತ್ತು ಸಿಎಫ್‌ಒ ನೆಲ್ ಸೆಗಲ್ ರನ್ನೂ ಕಂಪನಿಯಿಂದ ತೆಗೆದು ಹಾಕಿದರು

Twitter CEO: ಚೇರ್ ಮೇಲೆ ಕೂತ  ನಾಯಿಯೇ ಟ್ವಿಟ್ಟರ್ ಸಿಇಒ; ಪರಾಗ್​ಗಿಂತ ಇದೇ ಉತ್ತಮ ಎಂದು ಅಣಕಿಸಿದ ಮಸ್ಕ್
ಟ್ವಿಟರ್
Image Credit source: Twitter
Follow us on

ಎಲಾನ್ ಮಸ್ಕ್ (Elon Musk) ಕೊನೆಗೂ ಟ್ವಿಟರ್‌ಗೆ ಸಿಇಓ ಅನ್ನು ನೇಮಕ ಮಾಡಿದ್ದಾರೆ. ವಿಚಿತ್ರವೆಂದರೆ ಟ್ವಿಟರ್‌ನ(Twitter) ಹೊಸ ಸಿಇಒ (CEO) ಮನುಷ್ಯನಲ್ಲ, ಅದೊಂದು ನಾಯಿ. ಹೌದು ಈ ನಾಯಿ ಸಾಮಾನ್ಯವಾದ ನಾಯಿಯಲ್ಲ. ಇದರ ಹೆಸರು ‘ಫ್ಲೋಕಿ’ (Floski) ಇದು ಸ್ವತಃ ಎಲಾನ್ ಮಸ್ಕ್ ಅವರು ಸಾಕಿದ ನಾಯಿ. ಇದು ಶೀಬಾ ಇನು (Shibu Inu) ತಳಿಗೆ ಸೇರಿದೆ. ಮಸ್ಕ್​ನ ಮುದ್ದಿನ ನಾಯಿ, ಫ್ಲೋಕಿ ಈಗ ಹೊಸ ಟ್ವಿಟರ್ ಸಿಇಒ. ತಮ್ಮ ನಾಯಿ ಫ್ಲೋಕಿ ಮಾಜಿ ಸಿಇಒ ಪರಾಗ್ ಅಗರವಾಲ್‌ಗಿಂತ (Parag Agrawal) ಉತ್ತಮ ಎಂಬ ಹೇಳಿಕೆಯನ್ನು ಎಲಾನ್ ಮಸ್ಕ್ ನೀಡಿದ್ದಾರೆ.

ಈ ಹಿಂದೆ $44 ಶತಕೋಟಿ ಡಾಲರ್ ಒಪ್ಪಂದದಲ್ಲಿ ಟ್ವಿಟರ್ ಕೊಂಪೆನಿಯನ್ನು ವಹಿಸಿಕೊಂಡ ತಕ್ಷಣ ಮಸ್ಕ್ ಅಗರ್​ವಾಲ್ ಅವರನ್ನು ವಜಾಗೊಳಿಸಿದರು. ಅಗರ್​ವಾಲ್ ಜೊತೆಗೆ, ಟ್ವಿಟರ್‌ನ ಕಾನೂನು ಮುಖ್ಯಸ್ಥ ವಿಜಯ ಗಡ್ಡೆ ಮತ್ತು ಸಿಎಫ್‌ಒ ನೆಲ್ ಸೆಗಲ್ ಅವರನ್ನೂ ವಜಾ ಮಾಡಿದರು.

ಮಸ್ಕ್ ಅವರು ತಮ್ಮ ನಾಯಿ ಫ್ಲೋಕಿ ಸಿಇಒ ಕುರ್ಚಿಯ ಮೇಲೆ ಕುಳಿತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಫ್ಲೋಕಿ ಟ್ವಿಟರ್ ಬ್ರಾಂಡ್ ಆದ ಕಪ್ಪು ಟಿ-ಶರ್ಟ್ ಧರಿಸಿದೆ. ಆ ಟಿ-ಶರ್ಟ್ ಮೇಲೆ ಸಿಇಒ ಎಂದು ಬರೆಯಲಾಗಿದೆ. ಫ್ಲ್ಯೂಕಿ ಕೂತ ಮೇಜಿನ ಮೇಲೆ ತನ್ನ ಕಾಲುಗಳನ್ನು ಇರಿಸಿದೆ ಇದರ ಸುತ್ತ ಕೆಲವೊಂದು ದಾಖಲೆಗಳಿವೆ.

ಚಿತ್ರವನ್ನು ಹಂಚಿಕೊಂಡ ಮಸ್ಕ್, “ಟ್ವಿಟರ್‌ನ ಹೊಸ ಸಿಇಒ ಅದ್ಭುತ” ಎಂದು ಬರೆದಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ಟ್ವಿಟರ್‌ನ ಹೊಸ ಸಿಇಒ “ಮಾಜಿ ಸಿಇಓ” ಗಿಂತ ಉತ್ತಮ ಎಂದು ಸೇರಿಸಿದ್ದಾರೆ. ಮಸ್ಕ್ ಮಾಜಿ ಟ್ವಿಟರ್ ಸಿಇಒ ಪರಾಗ್ ಅಗರ್​ವಾಲ್ ಅವರನ್ನು ಉಲ್ಲೇಖಿಸುತ್ತಿರುವುದು ತಿಳಿದು ಬರುತ್ತದೆ.

ಇದನ್ನೂ ಓದಿ: ಸಿಗರೇಟ್ ಪ್ರಿಯರ ಪ್ರತಿಹಂತವನ್ನು ಟ್ರ್ಯಾಕ್ ಮಾಡುತ್ತದೆ ಸ್ಮಾರ್ಟ್ ನೆಕ್ಲೇಸ್‌, ಧೂಮಪಾನದಿಂದ ದೂರ ಉಳಿಯಲು ಇದು ಉತ್ತಮ ಸಾಧನ

ಮಸ್ಕ್ ಅಗರ್​ವಾಲ್ ಅವರೊಂದಿಗೆ ಈ ಮೊದಲು ಮಾತನಾಡಿದಾಗಲೂ ಯಾವುದೇ ತರಹದ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿರಲಿಲ್ಲ. ಕಳೆದ ವರ್ಷ ನವೆಂಬರಿನಲ್ಲಿ ಮಾಜಿ ಸಿಇಒ ಜಾಕ್ ಡೋರ್ಸೆ ತಮ್ಮ ಸ್ಥಾನದಿಂದ ಕೆಳಗಿಳಿದಾಗ ಅಗರ್​ವಾಲ್ ಟ್ವಿಟರ್‌ನ ಸಿಇಒ ಆಗಿ ಬಡ್ತಿ ಪಡೆದರು. ಅಗರ್​ವಾಲ್ ವಜಾ ಬಳಿಕ ಅವರಿಗೆ ಸಿಕ್ಕ ಒಟ್ಟು ಪರಿಹಾರ $ 30.4 ಮಿಲಿಯನ್ ಆಗಿತ್ತು, ಇದನ್ನು ಅವರಿಗೆ ಶೇರುಗಳ ಮೂಲಕ ನೀಡಲಾಯಿತು. ಅಗರ್​ವಾಲ್  ಅವರನ್ನು ವಜಾಗೊಳಿಸಿದಾಗ ಟ್ವಿಟರ್​ನೊಂದಿಗಿದ್ದ ದಶಕದ ನಂಟು ಮುಗಿದಿತ್ತು. ಟ್ವಿಟರ್​ನ ಆರಂಭಿಕ ಹಂತದಿಂದಲೇ ಅಗರವಾಲ್ ಅವರು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು.