Viral: ಕಾಫಿಬೀಜ ಕದ್ದದ್ದೇ ಈ ಮಹಿಳೆ ಮಾಡಿದ ದೊಡ್ಡ ತಪ್ಪು; ಕೆಲಸಕ್ಕೆ ಸೇರಿದ ಮೊದಲೇ ದಿನವೇ ವಜಾ ಆದ ಉದ್ಯೋಗಿ

ಕೆಲಸ ಸಿಕ್ಕ ಖುಷಿಯಲ್ಲೇ ಮುಳುಗಿರುವಾಗ ಮೊದಲೇ ದಿನವೇ ನೀವು ಮಾಡಿದ ಸಣ್ಣ ತಪ್ಪಿಗೆ ನಿಮ್ಮನ್ನು ಕೆಲ್ಸದಿಂದ ತೆಗೆದುಹಾಕಿದ್ರೆ ಆ ಕ್ಷಣವನ್ನು ಊಹಿಸಿ. ಇಲ್ಲೊಬ್ಬ ಉದ್ಯೋಗಿಗೆ ಇದೇ ಪರಿಸ್ಥಿತಿ ಎದುರಾಗಿದೆ. ಕೆಲಸಕ್ಕೆ ಸೇರಿದ ಮೊದಲೇ ದಿನವೇ ಕಾಫಿ ಬೀಜಗಳನ್ನು ಕದ್ದದ್ದೇ ಕೆಲಸದಿಂದ ವಜಾಗೊಳಿಸಲು ಮುಖ್ಯ ಕಾರಣವಾಗಿದ್ದು, ಈ ಕುರಿತಾದ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ.

Viral: ಕಾಫಿಬೀಜ ಕದ್ದದ್ದೇ ಈ ಮಹಿಳೆ ಮಾಡಿದ ದೊಡ್ಡ ತಪ್ಪು; ಕೆಲಸಕ್ಕೆ ಸೇರಿದ ಮೊದಲೇ ದಿನವೇ ವಜಾ ಆದ ಉದ್ಯೋಗಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 05, 2025 | 4:23 PM

ಸಂಬಳ ಕಡಿಮೆಯಿರಲಿ, ಓದಿಗೆ ತಕ್ಕ ಉದ್ಯೋಗ (job) ಇರಬೇಕು. ಆದರೆ ಕೆಲಸ ಸಿಕ್ಕ ಮೊದಲ ದಿನವೇ ನಿಮ್ಮ ಕೆಲಸ ಹೋದರೆ ಹೇಗಿರಬಹುದು. ಒಮ್ಮೆಯಾದ್ರೂ ಇಂತಹ ಪರಿಸ್ಥಿತಿ ಎದುರಾದ್ರೆ ಹೇಗಿರಬಹುದು ಎಂದು ನೀವು ಊಹಿಸಿದ್ದೀರಾ. ಒಂದು ವೇಳೆ ಕಂಪನಿಯೂ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಲು ಕಾರಣವೇ ಕೆಲಸ ಸರಿಯಾಗಿ ಮಾಡದೇ ಇರುವುದೇ ಆಗಿರುತ್ತದೆ. ಆದರೆ ಈ ಉದ್ಯೋಗಿ ವಿಚಾರದಲ್ಲಿ ಹಾಗೆ ಆಗಿಲ್ಲ. ಕೆಲಸಕ್ಕೆ ಸೇರಿದ ಮೊದಲ ದಿನವೇ ಕಾಫಿ ಬೀಜಗಳನ್ನು (coffee beans) ಕದ್ದಿದ್ದು ಕಂಪನಿಯೂ ಹಿಂದೆ ಮುಂದೆ ನೋಡದೇ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದೆ. ಹೌದು, ಮೊದಲ ದಿನವೇ ವಜಾಗೊಳಿಸಲ್ಪಟ್ಟ ಉದ್ಯೋಗಿಗೆ ಸಂಬಂಧಪಟ್ಟ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಕೆಲಸಕ್ಕೆ ಸೇರಿದ ಮೋದಲೇ ದಿನವೇ ಜಾಬ್‌ ಕಳೆದುಕೊಂಡ ಉದ್ಯೋಗಿ

r/ coworkerstories ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಂಪನಿಗೆ ಸೇರಿದ ಉದ್ಯೋಗಿಯನ್ನು ಮೊದಲ ದಿನವೇ ಕೆಲಸದಿಂದ ವಜಾಗೊಳಿಸಲಾಯಿತು ಎನ್ನುವ ಅಚ್ಚರಿಕಾರಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಈ ಘಟನೆ ನಿಜಕ್ಕೂ ನನಗೆ ಅಚ್ಚರಿಯೆನಿಸಿತು. ನಮ್ಮ ಕಂಪನಿಯಲ್ಲಿ ಒಬ್ಬ ಮಹಿಳೆಯನ್ನು ಉದ್ಯೋಗಕ್ಕೆಂದು ನೇಮಕಮಾಡಿಕೊಂಡಿದ್ದೆವು. ಆಕೆಯ ಮೊದಲ ದಿನದ ಬೆಳಗಿನ ತರಬೇತಿ ಪ್ರಕ್ರಿಯೆಯಲ್ಲಿ ತುಂಬಾ ಕಠಿಣ ಎಂದೆನಿಸಿತು. ಆದರೆ  ಆ ಬಳಿಕ ನಿಭಾಯಿಸಲು ಏನೂ ಕಷ್ಟಕರವಾಗಿರಲಿಲ್ಲ. ಆದರೆ ಈ ವಿರಾಮದ ಸಮಯದಲ್ಲಿ ಆಕೆ ಕಾಫಿ ಮೇಕರ್‌ ಪಕ್ಕದಲ್ಲಿದ್ದ ಎರಡು ದೊಡ್ಡ ಚೀಲಗಳ ಸ್ಟಾರ್‌ ಬಾಕ್ಸ್‌ ಕಾಫಿಬೀಜಗಳತ್ತತೋರಿಸಿ ಇವು ಯಾರವು ಎಂದು ಅಲ್ಲಿದ್ದ ಎಲ್ಲರ ಬಳಿ ಕೇಳಿದಳು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

New hire got fired on day one for stealing all the coffee
byu/MiddleComfortable158 incoworkerstories

ಆ ವೇಳೆ ಅಲ್ಲೇ ಇದ್ದ ಒಬ್ಬ ವ್ಯಕ್ತಿ ಇದು ಕಂಪನಿಯದು, ಇದನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಎಂದಿದ್ದಾರೆ. ಅದಕ್ಕೆ ಉದ್ಯೋಗಿ ಹೌದಾ ಎಂದು ಹೇಳಿ ಸುಮ್ಮನಾಗಿದ್ದಾಳೆ. ಈ ಕಾಫಿ ಬೀಜಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಎನ್ನುವುದ್ದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡಿದ್ದಾಳೆ. ಹೀಗಾಗಿ ಆಕೆಯೂ ಮನೆಗೆ ಹೋಗುವಾಗ ಆ ಕಾಫಿಬೀಜಗಳಿರುವ ಎರಡು ದೊಡ್ಡ ಚೀಲಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾಳೆ. ಈ ಮಹಿಳೆ ಮಾಡಿದ ಈ ಕೆಲಸದಿಂದಾಗಿ ಕಂಪನಿಯ ಉದ್ಯೋಗಿಗಳಿಗೆ ಕಾಫಿಯೇ ಇಲ್ಲದಂತಾಗಿದೆ. ಮರುದಿನ ಆಕೆ ಕೆಲಸಕ್ಕೆ ಬಂದಾಗ ಮ್ಯಾನೇಜರ್‌ ಕಚೇರಿಗೆ ತೆರಳಿದ್ದು, ಆದಾದ ಹತ್ತೇ ಹತ್ತು ನಿಮಿಷಕ್ಕೆ ಮನೆಗೆ ಹೋಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕಾರ್ಪೋರೇಟ್ ಕೆಲಸ ತೊರೆದು ಹೋಮ್ ಸ್ಟೇ ಪ್ರಾರಂಭಿಸಿ ಯಶಸ್ಸು ಕಂಡ ಯುವಕ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕಾಫಿ ಅಂದ್ರೆ ಆಕೆಗೆ ಇಷ್ಟ ಕಾಣಿಸುತ್ತೆ, ಹೀಗಾಗಿ ಆಕೆ ಮಾಡಿದ್ದೀರಬಹುದು. ಕೆಲಸದಿಂದ ತೆಗೆದದ್ದು ಅಷ್ಟೇನು ಸಮಂಜಸವಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಯಾರಾದರೂ ಅಷ್ಟು ಮೂರ್ಖರಾಗಲು ಹೇಗೆ ಸಾಧ್ಯ? ಒಳ್ಳೆಯ ಸುದ್ದಿ ಏನೆಂದರೆ, ಯಾವುದೇ ಮುಖ್ಯವಾದ ಜವಾಬ್ದಾರಿಯನ್ನುಹಾಳು ಮಾಡುವ ಮೊದಲೇ ಅವಳೇ ತನ್ನನ್ನು ಪರಿಣಾಮಕಾರಿಯಾಗಿ ಕೆಲಸದಿಂದ ವಜಾ ಆಗುವಂತೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಕಾಫಿ ಬೀಜಗಳನ್ನು ತೆಗೆದುಕೊಂಡು ಹೋಗಿದ್ದಕ್ಕೆ ಅವಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆಯೇ, ಅವಳು ಸಿಕ್ಕಿ ಬಿದ್ದಾಗ ಅವಳು ಹೇಗೆ ಪ್ರತಿಕ್ರಿಯಿಸಿದಳು ಎಂಬ ಬಗ್ಗೆ ನಾನು ಆಶ್ಚರ್ಯ ಪಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:21 pm, Wed, 5 November 25