Viral Video: ಪ್ರೀತಿಸಿದ ಹುಡುಗಿಯ ಓದಿನ ಖರ್ಚಿಗಾಗಿ ಬೇರೆಯವರ ಪರವಾಗಿ ನೀಟ್ ಪರೀಕ್ಷೆ​​​ ಬರೆಯಲು ಹೋಗಿ ಸಿಕ್ಕಿಬಿದ್ದ ಯುವಕ 

| Updated By: ಅಕ್ಷಯ್​ ಪಲ್ಲಮಜಲು​​

Updated on: May 07, 2024 | 5:08 PM

ಉತ್ತರಾಖಂಡದ ಡೆಹ್ರಾಡೂನ್​​​ನಲ್ಲಿ ನಡೆದ ನೀಟ್ (NEET)  ಪರೀಕ್ಷೆಯಲ್ಲಿ ಅಸಲಿ ವಿದ್ಯಾರ್ಥಿಯ ಬದಲಾಗಿ  ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದ್ದು, ತನ್ನ ಗರ್ಲ್ಫ್ರೆಂಡ್ ಖರ್ಚಿಗಾಗಿ ಈ ಕೃತ್ಯ ಮಾಡಿರುವುದಾಗಿ ಆ ಯುವಕ  ಪೋಲಿಸರಿಗೆ ತಿಳಿಸಿದ್ದಾರೆ. 

Viral Video: ಪ್ರೀತಿಸಿದ ಹುಡುಗಿಯ ಓದಿನ ಖರ್ಚಿಗಾಗಿ ಬೇರೆಯವರ ಪರವಾಗಿ ನೀಟ್ ಪರೀಕ್ಷೆ​​​ ಬರೆಯಲು ಹೋಗಿ ಸಿಕ್ಕಿಬಿದ್ದ ಯುವಕ 
Follow us on

ಪ್ರೀತಿ ಕುರುಡು ಎಂಬ ಮಾತಿದೆ. ಲವ್ ಅಲ್ಲಿ ಬಿದ್ದವರಿಗೆ ತಮ್ಮ ಪ್ರೀತಿ ಹೊರತಾಗಿ ಯಾವುದೂ ಕಾಣುವುದಿಲ್ಲ. ಈ ಪ್ರೀತಿಯಲ್ಲಿ ಬಿದ್ದವರು ತನ್ನ  ಗೆಳತಿಗಾಗಿ  ಅಥವಾ ಗೆಳೆಯನಿಗಾಗಿ ಪ್ರಾಣ ಕೊಡುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಇಂತಹ ಹಲವು ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ.  ಇದೀಗ ಅಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಯುವಕನೊಬ್ಬ  ತನ್ನ ಗೆಳತಿಯ ಖರ್ಚಿಗಾಗಿ ಇನ್ನೊಬ್ಬ ವಿದ್ಯಾರ್ಥಿ ಬರೆಯಬೇಕಿದ್ದ ನೀಟ್ ಪರೀಕ್ಷೆಯನ್ನು ಬರೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಡೆಹ್ರಾಡೂನ್ ಅಲ್ಲಿ ನಡೆದಿದ್ದು, ನೀಟ್ ಪರೀಕ್ಷೆಯಲ್ಲಿ ಅಸಲಿ ವಿದ್ಯಾರ್ಥಿಯ ಬದಲಾಗಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ರಾಜಸ್ಥಾನದ ಸರ್ಕಾರಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾದ ದೇವಪ್ರಕಾಶ್ ಈ ಕೃತ್ಯ ಎಸಗಿದ್ದಾನೆ.

ಇತ್ತೀಚಿಗೆ ದೇವಪ್ರಕಾಶ್ ಉತ್ತರಾಖಂಡ  ಋಷಿಕೇಶ, ಹರಿದ್ವಾರ ಮತ್ತು ಕೇದಾರನಾಥಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಮಯಾಂಕ್ ಗೌತಮ್ ಎಂಬಾತ ಈತನಿಗೆ ಪರಿಚಯವಾಗುತ್ತಾನೆ. ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದರು. ಹೀಗೆ ಮಾತನಾಡುವ ಸಂದರ್ಭದಲ್ಲಿ ಮಯಾಂಕ್ ತಾನು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆಗಬೇಕೆಂಬ ಆಸೆಯನ್ನು ದೇವಪ್ರಕಾಶ್ ಬಳಿ ಹೇಳುತ್ತಾನೆ. ಆದರೆ ಆತ ಅಷ್ಟೇನೂ ಜಾಣ ವಿದ್ಯಾರ್ಥಿಯಾಗಿರದ ಕಾರಣ ತನ್ನ ಈ ಪರೀಕ್ಷೆಯನ್ನು ನೀನು ಬರೆಯಬಹುದೇ ಎಂದು ದೇವಪ್ರಕಾಶ್ ಬಳಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ 2 ಲಕ್ಷ ರೂ. ನೀಡುವುದಾಗಿಯೂ ಕೂಡಾ ಹೇಳುತ್ತಾನೆ.

ಇದನ್ನೂ ಓದಿ: ಕುಟುಂಬ ನಿರ್ವಹಣೆಗಾಗಿ ಬೀದಿ ಬದಿಯಲ್ಲಿ ಎಗ್‌ರೋಲ್‌ ಮಾರಾಟ ಮಾಡುತ್ತಿದ್ದ ಬಾಲಕ ಸಹಾಯಕ್ಕೆ ಧಾವಿಸಿದ ಆನಂದ್ ಮಹೀಂದ್ರಾ

2 ಲಕ್ಷ ರೂ. ನೀಡಿದರೆ, ಆ ದುಡ್ಡು ತನ್ನ ಗೆಳತಿಯ ಓದಿಗಾಗಿ ಸಹಾಯವಾಗುತ್ತೆ ಎಂಬ ಕಾರಣದಿಂದ ದೇವಪ್ರಕಾಶ್ ನಕಲಿ ವಿದ್ಯಾರ್ಥಿಯಾಗಿ ಬಂದು ಪರೀಕ್ಷೆ ಬರೆಯಲು ಒಪ್ಪಿಕೊಳ್ಳುತ್ತಾನೆ. ಹಾಗೂ ದೇವಪ್ರಕಾಶ್ ತನ್ನ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಫೇಸ್ಬುಕ್ ಮೂಲಕ ಮಯಾಂಕ್ ಗೆ ಕಳುಹಿಸಿದ್ದ, ನಂತರ ಮಯಾಂಕ್ ಹಾಲ್ ಟಿಕೆಟ್ ಅಲ್ಲಿ ದೇವಪ್ರಕಾಶ್ ಫೋಟೋ ಅಂಟಿಸಿ ಮೇ 05 ರಂದು ನಡೆಯಲಿರುವ  ನೀಟ್ ಪರೀಕ್ಷೆಯನ್ನು ಬರೆಯಲು ಬರುವಂತೆ ಕೇಳಿಕೊಳ್ಳುತ್ತಾನೆ.  ಹೀಗೆ ಮಯಾಂಕ್ ಹೆಸರಲ್ಲಿ ಪರೀಕ್ಷೆ ಬರೆಯಲು ಡೆಹ್ರಾಡೂನ್ ನ ರಾಮ್ ರೈ ಪಬ್ಲಿಕ್ ಸ್ಕೂಲ್ ಗೆ ಬಂದ ದೇವಪ್ರಕಾಶ ಬಯೋಮೆಟ್ರಿಕ್ ಚೆಕ್ಕಿಂಗ್ ವೇಳೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅಭ್ಯರ್ಥಿಯ ಬಯೋಮೆಟ್ರಿಕ್ ಡೇಟಾವು ದಾಖಲೆಗಳಿಗೆ ಹೊಂದಿಕೆಯಾಗದ ಕಾರಣ ಅಸಲಿ ವಿದ್ಯಾರ್ಥಿಯ ಬದಲಾಗಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬಂದಿರುವುದಾಗಿ ಗೊತ್ತಾಗುತ್ತದೆ. ತಕ್ಷಣ ಪೊಲೀಸರರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಗೆಳತಿಯ ಖರ್ಚಿಗಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾನೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ