Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿರುವ ಈ ರೈಲು ನಿಲ್ದಾಣಕ್ಕೆ ಹೋಗಲು ಭಾರತೀಯರಿಗೂ ಪಾಸ್​ಪೋರ್ಟ್​, ವೀಸಾ ಬೇಕು

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಭಾರತೀಯರು ಪಾಸ್​ಪೋರ್ಟ್​, ವೀಸಾವನ್ನು ಹೊಂದಿರಬೇಕು ಎನ್ನುವ ವಿಚಾರ ವಿಚಿತ್ರವೆನಿಸಿದರೂ ಸತ್ಯ. ಇತ್ತೀಚೆಗೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ವ್ಯಕ್ತಿಯೊಬ್ಬರು ಇಬ್ಬರು ಹುಡುಗಿಯರ ಬಳಿ ವೀಸಾ, ಪಾಸ್​ಪೋರ್ಟ್​ ಅಗತ್ಯವಿರುವ ಭಾರತದ ರೈಲು ನಿಲ್ದಾಣ ಯಾವುದು ಎನ್ನುವ ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆ ಕೇಳಿ ಇಬ್ಬರೂ ಗೊಂದಲಕ್ಕೊಳಗಾಗುತ್ತಾರೆ. ಆತ ತಮಾಷೆ ಮಾಡುತ್ತಿದ್ದಾನೆ ಎಂದೇ ಭಾವಿಸುತ್ತಾರೆ. ಆದರೆ ಅಂತಹ ನಿಲ್ದಾಣ ಭಾರತದಲ್ಲಿ ಅಸ್ತಿತ್ವದಲ್ಲಿರುವುದು ಸತ್ಯ.

ಭಾರತದಲ್ಲಿರುವ ಈ ರೈಲು ನಿಲ್ದಾಣಕ್ಕೆ ಹೋಗಲು ಭಾರತೀಯರಿಗೂ ಪಾಸ್​ಪೋರ್ಟ್​, ವೀಸಾ ಬೇಕು
ರೈಲ್ವೆ ನಿಲ್ದಾಣ
Follow us
ನಯನಾ ರಾಜೀವ್
|

Updated on: Aug 29, 2024 | 12:01 PM

ಭಾರತದಲ್ಲಿ ನೂರಾರು ರೈಲು ನಿಲ್ದಾಣಗಳಿವೆ, ಭಾರತೀಯರು ಆ ನಿಲ್ದಾಣಗಳಿಗೆ ಕೇವಲ, ಟಿಕೆಟ್​ , ಪ್ಲಾಟ್​ಫಾರಂ ಟಿಕೆಟ್ ಇದ್ದರೆ ಸುಲಭವಾಗಿ ಭೇಟಿ ನೀಡಬಹುದು. ಆದರೆ ಭಾರತದಲ್ಲೇ ಇರುವ ಈ ರೈಲು ನಿಲ್ದಾಣಕ್ಕೆ ಭಾರತೀಯರೇ ಹೋಗುವುದಾದರೂ ಪಾಸ್​ಪೋರ್ಟ್​, ವೀಸಾವನ್ನು ಹೊಂದಿರಲೇಬೇಕು.

ಇತ್ತೀಚೆಗೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ವ್ಯಕ್ತಿಯೊಬ್ಬರು ಇಬ್ಬರು ಹುಡುಗಿಯರ ಬಳಿ ವೀಸಾ, ಪಾಸ್​ಪೋರ್ಟ್​ ಅಗತ್ಯವಿರುವ ಭಾರತದ ರೈಲು ನಿಲ್ದಾಣ ಯಾವುದು ಎನ್ನುವ ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆ ಕೇಳಿ ಇಬ್ಬರೂ ಗೊಂದಲಕ್ಕೊಳಗಾಗುತ್ತಾರೆ.

ಆತ ತಮಾಷೆ ಮಾಡುತ್ತಿದ್ದಾನೆ ಎಂದೇ ಭಾವಿಸುತ್ತಾರೆ. ಆದರೆ ಅಂತಹ ನಿಲ್ದಾಣ ಭಾರತದಲ್ಲಿ ಅಸ್ತಿತ್ವದಲ್ಲಿರುವುದು ಸತ್ಯ.

ಮತ್ತಷ್ಟು ಓದಿ: ವಿಶ್ವದ ಅತ್ಯಂತ ಚಿಕ್ಕ ಏರ್​ಪೋರ್ಟ್​ ಇದು, ಮರದ ಕೆಳಗೆ ಕೂತು ಕಾಯ್ಬೇಕು

ರೈಲು ನಿಲ್ದಾಣದ ಹೆಸರು ಅಟ್ಟಾರಿ ಅಮೃತಸರದ ಅಟ್ಟಾರಿ ರೈಲು ನಿಲ್ದಾಣವನ್ನು ಅಟ್ಟಾರಿ ಶ್ಯಾಮ್ ಸಿಂಗ್ ರೈಲ್ವೆ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಈ ರೈಲು ನಿಲ್ದಾಣಕ್ಕೆ ಹೋಗಲು ಭಾರತೀಯರಿಗೆ ವೀಸಾ ಮತ್ತು ಪಾಸ್‌ಪೋರ್ಟ್ ಕೂಡ ಬೇಕು. ಏಕೆಂದರೆ ಇಲ್ಲಿಂದ ಪಾಕಿಸ್ತಾನಕ್ಕೆ ರೈಲುಗಳು ಹೋಗುತ್ತವೆ ಮತ್ತು ಅಟ್ಟಾರಿ ಗಡಿಯಿಂದ ಪಾಕಿಸ್ತಾನಕ್ಕೆ ಹೋಗುತ್ತದೆ. ಉತ್ತರ ರೈಲ್ವೆಯ ಫಿರೋಜ್‌ಪುರ ವಿಭಾಗದ ಅಡಿಯಲ್ಲಿ ಅಟ್ಟಾರಿ ನಿಲ್ದಾಣವು ಬರುತ್ತದೆ.

ಇಲ್ಲಿಗೆ ಹೋಗಲು ಪಾಕಿಸ್ತಾನಿ ವೀಸಾ ಅಗತ್ಯವಿದೆ. ನಿಲ್ದಾಣದ ಭದ್ರತೆಯ ಜವಾಬ್ದಾರಿಯನ್ನು ಸೇನೆಯು ಹೊಂದಿದೆ ಮತ್ತು ಇಲ್ಲಿಯ ಪ್ರಯಾಣಿಕರು ಹಲವಾರು ಹಂತದ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಅಟ್ಟಾರಿ ಅಮೃತಸರ-ಲಾಹೋರ್ ಮಾರ್ಗದಲ್ಲಿರುವ ಭಾರತದ ಕೊನೆಯ ರೈಲು ನಿಲ್ದಾಣವಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ