ಕಂಪನಿ ಅಸೆಂಬ್ಲಿಯಲ್ಲಿ ʼಸೆಕ್ಸಿ ಸಾಂಟಾಸ್‌ʼ ತಂಡದಿಂದ ಮಾದಕ ನೃತ್ಯ ಪ್ರದರ್ಶನ, ಟೀಕೆಗೆ ಗುರಿಯಾದ ಸುದ್ದಿ ವಾಹಿನಿ

ಯಾವುದೇ ಕಂಪೆನಿಯ ಸಭೆಗಳಾಗಿರಬಹುದು ತುಂಬಾನೇ ಶಿಸ್ತು ಬದ್ಧವಾಗಿ ನಡೆಯುತ್ತವೆ. ಆದರೆ ಇಲ್ಲೊಂದು ಸುದ್ದಿ ವಾಹಿನಿ ಕಂಪೆನಿ ಮುಖ್ಯ ಸಬೆಯಲ್ಲಿ ಎಲ್ಲರಿಗೂ ಮನೋರಂಜನೆ ನೀಡಬೇಕೆಂದು ತುಂಡಡುಗೆ ತೊಟ್ಟ ಯುವತಿಯರಿಂದ ನೃತ್ಯ ಪ್ರದರ್ಶನವನ್ನು ಮಾಡಿಸಿದೆ. ಈ ಕುರಿತ ವಿಡಿಯೋ ಫೂಟೇಜ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಸುದ್ದಿಯ ವಾಹಿನಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕಂಪನಿ ಅಸೆಂಬ್ಲಿಯಲ್ಲಿ ʼಸೆಕ್ಸಿ ಸಾಂಟಾಸ್‌ʼ ತಂಡದಿಂದ ಮಾದಕ ನೃತ್ಯ ಪ್ರದರ್ಶನ, ಟೀಕೆಗೆ ಗುರಿಯಾದ ಸುದ್ದಿ ವಾಹಿನಿ
ವೈರಲ್​ ಫೋಟೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 29, 2024 | 4:24 PM

ಹಿಂದೆಲ್ಲಾ 70, 80 ರ ದಶಕಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ಏರ್ಪಡಿಸುವ ಸಭೆಗಳಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ಮನೋರಂಜನೆಯನ್ನು ನೀಡಲು ಡಾನ್ಸರ್‌ಗಳಿಂದ ಮಾದಕ ನೃತ್ಯ ಮಾಡಿಸುವ ಟ್ರೆಂಡ್‌ ಇತ್ತು. ಕೆಲವೊಂದು ಹಿಂದಿನ ಕಾಲದ ಸಿನಿಮಾಗಳಲ್ಲೂ ಕೂಡಾ ಇಂತಹ ದೃಶ್ಯಗಳು ಕಾಣಸಿಗುತ್ತವೆ. ಆದರೆ ಈಗ ಕಾಲ ಬದಲಾಗಿದೆ. ಯಾವುದೇ ಕಂಪೆನಿಯ ಸಭೆಗಳಾಗಿರಬಹುದು ತುಂಬಾನೇ ಶಿಸ್ತುಬದ್ಧವಾಗಿ ನಡೆಯುತ್ತದೆ. ಹೀಗಿರುವಾಗ ಇಲ್ಲೊಂದು ಸುದ್ದಿ ವಾಹಿನಿ ತನ್ನ ಕಂಪೆನಿಯ ಸಭೆಯಲ್ಲಿ ʼಸೆಕ್ಸಿ ಸಾಂಟಾಸ್‌ʼ ತಂಡದಿಂದ ನೃತ್ಯ ಪ್ರದರ್ಶನನ್ನು ಮಾಡಿಸಿದ್ದು, ಈ ಕುರಿತ ವಿಡಿಯೋ ಫೂಟೇಜ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಸುದ್ದಿಯ ವಾಹಿನಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಇಲ್ಲಿನ ಸೆವೆನ್‌ ನೆಟ್‌ವರ್ಕ್‌ ಮೀಡಿಯಾದ ಪೇರೆಂಟ್‌ ಕಂಪೆನಿ ಸೆವೆನ್‌ ವೆಸ್ಟ್‌ ಮೀಡಿಯಾದ ಸಭೆಯಲ್ಲಿ ಈ ಅನಾಚಾರ ನಡೆದಿದೆ. ಕಳೆದ ಶುಕ್ರವಾರ (ಆಗಸ್ಟ್‌ 23) ಪಾರ್ತ್‌ ನಗರದಲ್ಲಿರುವ ಟೌನ್‌ ಹಾಲ್‌ ಅಲ್ಲಿ ಸೆವೆನ್‌ ವೆಸ್ಟ್‌ ಮೀಡಿಯಾ ಆಯೋಜಿಸಿದ ಸಭೆಯಲ್ಲಿ ʼಸೆಕ್ಸಿ ಸಾಂಟಾಸ್‌ʼ ತಂಡದವರಿಂದ ನೃತ್ಯ ಮಾಡಿಸಲಾಗಿತ್ತು. ಇಲ್ಲಿ ನಾಲ್ವರು ಯುವತಿಯರು ತಲೆಗೆ ಟೋಪಿ ಹಾಗೂ ಕೆಂಪು ಬಣ್ಣದ ತುಂಡುಡುಗೆ ತೊಟ್ಟು ಮಾದಕ ನೃತ್ಯ ಪ್ರದರ್ಶನ ನೀಡಿದ್ದರು. ಇದರಿಂದ ಮುಜುಗರಕ್ಕೊಳಗಾಗಿ ಸಭೆಯಾಯಲ್ಲಿ ಭಾಗಿಯಾಗಿದ್ದ ಮಹಿಳಾ ಉದ್ಯೋಗಿಗಳು ಸಭೆಯಿಂದ ಎದ್ದು ಹೋಗಿದ್ದಾರೆ. ಈ ದೃಶ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಸೆವೆನ್‌ ವೆಸ್ಟ್‌ ಮೀಡಿಯಾ 1980 ರ ದಶಕದ ಸಂಸ್ಕೃತಿಯನ್ನೇ ಮುಂದುವರೆಸುತ್ತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಇದನ್ನೂ ಓದಿ:

ವೈರಲ್​​ ಸುದ್ದಿ ಇಲ್ಲಿದೆ ನೋಡಿ

ಪೀಟರ್‌ ಮರ್ಫಿ (Peter Murphy) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಸಿಬ್ಬಂದಿ ಸಭೆಯಲ್ಲಿ ಮಹಿಳಾ ನೃತ್ಯಗಾರ್ತಿಯರಿಂದ ಮಾದಕ ಡಾನ್ಸ್‌ ಮಾಡಿಸಿದ ಸೆವೆನ್‌ ವೆಸ್ಟ್‌ ಮೀಡಿಯಾ. ಈ ಕಂಪೆನಿ ಇನ್ನೂ 1970 ರ ದಶಕದಲ್ಲಿಯೇ ಸಿಲುಕಿಕೊಂಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ, ಸೆವೆನ್‌ ವೆಸ್ಟ್‌ ಮೀಡಿಯಾ 1980 ರ ದಶಕದ ಸಂಸ್ಕೃತಿಯನ್ನೇ ಮುಂದುವರೆಸುತ್ತಿದೆ ಮತ್ತು ಮಹಿಳೆಯರನ್ನು ಕೀಳು ಮಟ್ಟದಲ್ಲಿ ಕಾಣುತ್ತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Thu, 29 August 24

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?