Optical Illusions : ಬೆಳಗ್ಗೆಯಿಂದ ಒಂದೇ ಸಮ ಕೆಲಸ ಮಾಡಿ ತಲೆ ಓಡುತ್ತಿಲ್ಲವಾದರೆ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ನಿಮ್ಮ ಮೆದುಳು ಚುರುಕಾಗಲು ಇಲ್ಲಿರುವ ಈ ಆಪ್ಟಿಕಲ್ ಇಲ್ಯೂಷನ್ ಗಮನಿಸಿ. ಈಗಾಗಲೇ ಇಂಥ ಸಾಕಷ್ಟು ಚಟುವಟಿಕೆಗಳಲ್ಲಿ ಈ ಹಿಂದೆ ನೀವು ತೊಡಗಿಕೊಂಡಿದ್ದೀರಿ. ಈಗಲೂ ಇದನ್ನು ಗಮನಿಸಿ. ನಿಮಗಿರುವ ಸಮಯ 10 ಸೆಕೆಂಡುಗಳು. ಆ ಸಮಯದಲ್ಲಿ ಮೇಲಿನ ಚಿತ್ರದಲ್ಲಿ ಅಡಗಿರುವ ತೋಳವನ್ನು ಗುರುತಿಸಬಹುದಾ?
ಈ ಚಿತ್ರವು ನೋಡಿದ ಯಾರಿಗೂ ಭ್ರಮೆ ಸೃಷ್ಟಿಸುವಂತೆ ರಚನೆಗೊಂಡಿದೆ. ಇದೇ ಇದರ ತಂತ್ರ. ಅಲ್ಲಿರುವ ದೃಶ್ಯ ನಿಮ್ಮ ಗ್ರಹಿಕೆಯೊಳಗೆ ಬೇರೆಯದೇ ಆಕಾರ ತಳೆಯಲು ಅವಕಾಶವಿರುತ್ತದೆ. ವಾಸ್ತವ ಮತ್ತು ಭ್ರಮೆಯ ಮಧ್ಯೆ ಯೋಚಿಸುವ ಕೆಲಸವನ್ನು ನಿಮ್ಮ ಮೆದುಳಿಗೆ ಕೊಡುತ್ತದೆ ಈ ಚಿತ್ರ. ಕಣ್ಣೆದುರಿನದು ನಿಜ. ಆದರೆ ಮೆದುಳು ಅದು ಅಲ್ಲ ಎನ್ನುತ್ತಿರುತ್ತದೆ. ಹೀಗೆ ಸ್ವಲ್ಪ ಹೊತ್ತು ಕಣ್ಣು ಮತ್ತು ಮೆದುಳಿಗೆ ಗುದ್ದಾಟ ನಡೆದ ಮೇಲೆ ನಿಖರ ಉತ್ತರ ಸಿಗುವ ಸಾಧ್ಯತೆ ಇರುತ್ತದೆ. ಈಗಲೇ ನೋಡಬೇಡಿ ಈ ಕೆಳಗಿನ ಚಿತ್ರ!
ಆದರೆ ಹತ್ತು ಸೆಕೆಂಡಿನೊಳಗೆ ತೋಳ ಕಾಣಲಿಲ್ಲವಾ? ಇದೆಲ್ಲ ನೀವು ನೀವೇ ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ ಇದು ವೀಕ್ಷಣಾ ಕೌಶಲವನ್ನು, ಮೆದುಳಿನ ಚುರುಕುತನವನ್ನು ಮತ್ತು ಏಕಾಗ್ರತೆಯ ಮಟ್ಟವನ್ನು ಇದು ಅವಲಂಬಿಸಿರುತ್ತದೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:40 pm, Tue, 23 August 22